Monday, 24th June 2019

Recent News

ಮದ್ವೆ 2 ತಿಂಗಳ ಬಳಿಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ನಿಕ್

ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಮತ್ತು ವಿದೇಶಿ ಹುಡುಗ ನಿಕ್ ಜೋನ್ಸ್ ವಿವಾಹವಾದ ಜೋಡಿಯಿಂದ ಶುಭ ಸುದ್ದಿ ನೀಡಿದೆ. ನಿಕ್ ಜೋನ್ಸ್ ಮತ್ತು ಪ್ರಿಯಾಂಕ ಮದುವೆ ಬಳಿಕ ರೊಮ್ಯಾಂಟಿಕ್ ಸಮಯವನ್ನು ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಖುಷಿಯನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇನ್ನು ಕೆಲವೇ ದಿನಗಳಲ್ಲಿ ಪ್ರಿಯಾಂಕ ಮತ್ತು ನಿಕ್ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಲಿದ್ದಾರೆ. ತಮ್ಮ ಮುಂಬರುವ Isn’t it romantic ಸಿನಿಮಾದ ಪ್ರಚಾರದ ಕೆಲಸದಲ್ಲಿ ಪ್ರಿಯಾಂಕ ಭಾಗಿಯಾಗಲಿದ್ದಾರೆ. ಇತ್ತ ನಿಕ್ ಸಹ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ. ನಿಕ್ ಗೆ ಜೊತೆಯಾಗಿ ಡೆವೆನ್ ಜಾನ್ಸಸನ್ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಭಾಗದ ಚಿತ್ರದ ಕಾರ್ಯಕ್ರಮದಲ್ಲಿಯೇ ನಿಕ್ ಮತ್ತು ಪ್ರಿಯಾಂಕ ಭೇಟಿಯಾಗಿದ್ದರು.

ಏನದು ಗುಡ್ ನ್ಯೂಸ್?
ಪ್ರಿಯಾಂಕ ಪತಿಗೆ ಜುಮಂಜಿ-2 ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು, ಈ ಸಂತೋಷವನ್ನು ನಿಕ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಜುಮಂಜಿ ಸೀಕ್ವೆಲ್ ಸಿನಿಮಾದಲ್ಲಿ ನಾನು ಅಲೆಕ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಸಿನಿಮಾ ಅತಿ ಶೀಘ್ರದಲ್ಲಿಯೇ ನಿಮ್ಮ ಮುಂದೆ ಬರಲಿದೆ ಎಂದು ಬರೆದುಕೊಂಡಿದ್ದಾರೆ.

ಡಿಸೆಂಬರ್ ಮೊದಲ ವಾರದಲ್ಲಿ ನಿಕ್ ಮತ್ತು ಪ್ರಿಯಾಂಕ ಹಿಂದೂ ಹಾಗು ಕ್ರಿಶ್ಚಿಯನ್ ಸಂಪ್ರದಾಯದಂತೆ ಜೋಧಪುರದ ಉಮೈದ್ ಭವನದಲ್ಲಿ ಅದ್ಧೂರಿಯಾಗಿ ಸತಿ-ಪತಿಗಳಾಗಿದ್ದರು. ಮದುವೆ ಕಾರ್ಯಕ್ರಮಕ್ಕೆ ಕೇವಲ ಆಪ್ತರನ್ನು ಮಾತ್ರ ಜೋಡಿ ಆಹ್ವಾನಿಸಿತ್ತು. ಮದುವೆ ಬಳಿಕ ದೆಹಲಿ ಮತ್ತು ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಲಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *