Advertisements

ಮುಂದಿನ ವಾರ NDRFನ ನಾಲ್ಕು ತಂಡ ರಾಜ್ಯಕ್ಕೆ: ಆರ್.ಅಶೋಕ್

ಬೆಂಗಳೂರು: ಮುಂಗಾರು ಪ್ರಾರಂಭವಾಗುತ್ತಿದ್ದಂತೆ ಮುಂದಿನ ವಾರ (ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ) ಎನ್‍ಡಿಆರ್‌ಎಫ್‌ನ ನಾಲ್ಕು ತಂಡ ರಾಜ್ಯಕ್ಕೆ ಬರಲಿದೆ ಎಂದು ಕಂದಾಯ ಸಚಿವರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರು ಆದ ಆರ್.ಅಶೋಕ್ ತಿಳಿಸಿದ್ದಾರೆ.

Advertisements

ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದದ ಮೂಲಕ ಸಭೆ ನಡೆಸಿ, ಸರ್ಕಾರದ ಸಿದ್ಧತೆ ಕುರಿತು ಮಾತನಾಡಿದ ಅವರು, ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಪರಿಶೀಲನಾ ಸಭೆ ನಡೆಸುವಂತೆ ವಿನಂತಿ ಮಾಡುತ್ತೇನೆ. ಎನ್‍ಡಿಆರ್‌ಎಫ್‌ನ 4 ತಂಡಗಳು ಮಾನ್ಸೂನ್ ಆಗಮನದ ಒಂದು ವಾರ ಮಂಚೆಯೇ ರಾಜ್ಯಕ್ಕೆ ಆಗಮಿಸಿ, ಕಾರ್ಯಾಚರಣೆಗೆ ಸಿದ್ಧವಾಗಿರುತ್ತದೆ. ಇನ್ನು 3-4 ತಿಂಗಳು ಕಾರ್ಯಚರಣೆ ವೇಗ ಹೆಚ್ಚಿಸಬೇಕು. ಎಲ್ಲೇ ಭೂಕುಸಿತ, ನೆರೆ ಬಂದರೂ ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಹಾರವನ್ನು ತ್ವರಿತವಾಗಿ ನೀಡಬೇಕು. ಮನೆಹಾನಿ, ಪ್ರಾಣಹಾನಿ ಉಂಟಾದಾಗ 48 ಗಂಟೆಯಲ್ಲಿ ಪರಿಹಾರ ನೀಡಬೇಕು. ಕಂಟ್ರೋಲ್ ರೂಮ್ ಸದಾ ಆಕ್ಟೀವ್ ಆಗಿರಬೇಕು. ಕಾಳಜಿ ಕೇಂದ್ರದಲ್ಲಿ ಇಲಾಖೆ ಸೂಚಿಸಿದ ಪ್ರಕಾರವೇ ಊಟೋಪಚಾರ ವ್ಯವಸ್ಥೆ ಮಾಡಬೇಕು. ಈಗಿನಿಂದಲೇ ಎಲ್ಲಾ ರೀತಿಯ ರೂಪು ರೇಷೆ ಸಿದ್ಧಪಡಿಸಬೇಕು. ಎಲ್ಲೆಲ್ಲಿ ಭೂಕುಸಿತ ಆಗುವ ಸಾಧ್ಯತೆ ಇದೆಯೋ ಅಲ್ಲಿನ ಜನರ ಮನವೊಲಿಸಿ ಖುದ್ದು ಡಿಸಿಗಳೇ ಸ್ಥಳಾಂತರ ಮಾಡಿಸಬೇಕು. ಪ್ರಾಣಹಾನಿ ಆಗದಂತೆ ತಡೆಯುವುದು ನಮ್ಮ ಮೊದಲ ಆದ್ಯತೆ ಆಗಬೇಕಿದೆ ಎಂದಿದ್ದಾರೆ. ಇದನ್ನೂ ಓದಿ: ತ್ರಿಶೂಲ ದೀಕ್ಷೆ, ತರಬೇತಿ ಪ್ರಕರಣ – ಸಾಯಿ ಶಂಕರ ವಿದ್ಯಾ ಸಂಸ್ಥೆಯಿಂದ ಟಿಸಿ ಪಡೆದ ಮೂವರು ಮುಸ್ಲಿಂ ವಿದ್ಯಾರ್ಥಿಗಳು

Advertisements

ಪ್ರತಿ ಜಿಲ್ಲೆಯಲ್ಲಿಯೂ ಎಲ್ಲ ರೀತಿಯ ಸಲಕರಣೆಗಳೊಂದಿಗೆ ಒಂದು ವಾಹನ ಸದಾ ಸಿದ್ಧವಾಗಿರಬೇಕು. ಇದರಿಂದ ರಸ್ತೆಯಲ್ಲಿ ಮರ ಬಿದ್ದಾಗ ತೆರವುಗೊಳಿಸಲು, ನೆರೆ ಹಾವಳಿ ಉಂಟಾದಾಗ ಕಾರ್ಯಚರಣೆ ನಡೆಸಲು ಅನುಕೂಲ ಆಗುತ್ತದೆ. ಸರ್ಕಾರ ಮಳೆಗಾಲ ಎದುರಿಸಲು ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ. ಬೆಂಗಳೂರಿನಲ್ಲಿ ಒಂದು ತಂಡ ಕಾರ್ಯಚರಣೆಗೆ ಸದಾ ಸಿದ್ಧವಾಗಿರುತ್ತದೆ. ಹೀಗೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಎನ್‍ಡಿಆರ್‌ಎಫ್‌ನ ತಂಡಗಳು ಸಹ ಎಲ್ಲ ರೀತಿಯ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದೆ. ಎಲ್ಲ ಜಿಲ್ಲಾಧಿಕಾರಿಗಳು ಅಗತ್ಯ ಇರುವ ಎಲ್ಲ ಸಾಮಗ್ರಿಗಳನ್ನು ತತ್ ಕ್ಷಣವೇ ಖರೀದಿ ಮಾಡಬೇಕು. ಬೆಳೆಹಾನಿ ಆದಾಗ ಶೀಘ್ರವಾಗಿ ಪರಿಹಾರ ವಿತರಣೆ ಆಗಬೇಕು. ಈಗಾಗಲೇ ಕೆಲವು ಜಿಲ್ಲೆಯಲ್ಲಿ ಆದ ಬೆಳೆಹಾನಿಗೆ ತ್ವರಿತವಾಗಿ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಮಾನ್ಸೂನ್ ಪೂರ್ವ ಮಳೆಯಿಂದ ರಾಜ್ಯದಲ್ಲಿ 204 ಹೆಕ್ಟೇರ್ ಕೃಷಿ ಹಾಗೂ 431 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿ ಸಂಭವಿಸಿದೆ. 23 ಮನೆಗಳು ಸಂಪೂರ್ಣವಾಗಿ ಹಾನಿಯಾಗಿದೆ. 9 ಜನ ಮೃತಪಟ್ಟಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಳಂದ, ತಕ್ಷಶಿಲಾ ವಿಶ್ವವಿದ್ಯಾಲಯ ಧ್ವಂಸ ಮಾಡಿದವರನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ: ಅಮಿತ್ ಶಾ

ಈ ಮೊದಲು ರೆಡ್ ಅಲರ್ಟ್ ಇರುವ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ದಾವಣಗೆರೆ ಡಿಸಿಗಳ ಜೊತೆ ವೀಡಿಯೋ ಸಂವಾದದ ಮೂಲಕ ಸಭೆ ನಡೆಸಿ, ಅಗತ್ಯ ಕ್ರಮ ಮತ್ತು ತೆಗೆದುಕೊಂಡ ಪೂರ್ವ ಸಿದ್ದತೆಗಳ ಪರಿಶೀಲನೆ ನಡೆಸಿ, ಸಲಹೆ ಸೂಚನೆ ನೀಡಿದರು. (ಕೋಡ್ ಆಫ್ ಕಂಡಕ್ಟ್ ಕಾರಣಕ್ಕೆ ಹಾಸನ ಮತ್ತು ಉತ್ತರ ಕನ್ನಡ ಡಿಸಿಗಳ ಬದಲು ಜಿಲ್ಲಾ ಪಂಚಾಯತ ಸಿಇಒ ಉಪಸ್ಥಿತರಿದ್ದರು) ಸಭೆಯಲ್ಲಿ ಉಪಸ್ಥಿತರಿದ್ದರು.

Advertisements

ನಾಲ್ಕು NDRF ತಂಡಗಳು ಇರುವ ಸ್ಥಳಗಳು:
1. ದಕ್ಷಿಣ ಕನ್ನಡ – ಉಡುಪಿ, ಉತ್ತರ ಕನ್ನಡ ಹಾಗೂ ಸುತ್ತಮುತ್ತಲಿನ ಪ್ರದೇಶದ ಅನುಕೂಲಕ್ಕಾಗಿ
2. ಕೊಡಗು – ಮೈಸೂರು, ಹಾಸನ, ಚಿಕ್ಕಮಗಳೂರು
3. ಬೆಳಗಾವಿ – ಬಾಗಲಕೋಟ, ವಿಜಯಪುರ. ಹಾಗೂ ಸುತ್ತಮುತ್ತಲಿನ ಪ್ರದೇಶದ ಅನುಕೂಲಕ್ಕಾಗಿ
4. ರಾಯಚೂರು – ಯಾದಗಿರಿ, ಬಳ್ಳಾರಿ, ಕಲಬುರ್ಗಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಅನುಕೂಲಕ್ಕಾಗಿ.

Advertisements
Exit mobile version