Connect with us

Corona

ಕೊರೊನಾ ವೈರಸ್ ದೃಢಪಟ್ಟ ಜಗತ್ತಿನ ಮೊದಲ ಶ್ವಾನ ಸಾವು

Published

on

ನ್ಯೂಯಾರ್ಕ್: ಇಲ್ಲಿನ ಸ್ಟೇಟೆನ್ ಐಲ್ಯಾಂಡ್‍ನಲ್ಲಿ 7 ವರ್ಷದ ಜರ್ಮನ್ ಶೆಫರ್ಡ್ ಕೋವಿಡ್ 19ಗೆ ಬಲಿಯಾಗಿದೆ. ಈ ಮೂಲಕ ಕೋವಿಡ್ 19 ದೃಢಪಟ್ಟ ಜಗತ್ತಿನ ಮೊದಲ ಶ್ವಾನ ಮೃತಪಟ್ಟಿದೆ.

ಸಾವನ್ನಪ್ಪಿದ ಶ್ವಾನ ಬಡ್ಡಿ ಕಳೆದ ಏಪ್ರಿಲ್ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಅದೇ ಸಮಯದಲ್ಲಿ ಮಾಲೀಕ ರಾಬರ್ಟ್ ಮಹೋನಿ ಕೂಡ ಕೋವಿಡ್ 19 ನಿಂದ ಗುಣಮುಖರಾಗುತ್ತಿದ್ದರು ಎಂದು ನ್ಯಾಷನಲ್ ಜಿಯೋಗ್ರಫಿ ತಿಳಿಸಿದೆ.

ರಾಬರ್ಟ್ ಅವರು ಹಲವಾರು ವಾರ ಕೊರೊನಾ ವೈರಸ್‍ಗೆ ತುತ್ತಾದ ನಂತರ ಶ್ವಾನ ಬಡ್ಡಿಯಲ್ಲೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಹೀಗಾಗಿ ಮೇ ತಿಂಗಳಲ್ಲಿ ಪಶುವೈದ್ಯರು ಪರೀಕ್ಷಿಸಿದ್ದು, ಈ ವೇಳೆ ಬಡ್ಡಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಆ ನಂತರ ಬಡ್ಡಿಯ ಆರೋಗ್ಯ ನಿಧಾನವಾಗಿ ಕುಸಿಯುತ್ತಾ ಬಂತು. ಕ್ರಮೇಣ ಹೆಪ್ಪುಗಟ್ಟಿದ ರೀತಿಯಲ್ಲಿ ವಾಂತಿ, ಮೂತ್ರದಲ್ಲೂ ರಕ್ತ ಹಾಗೆಯೇ ನಡೆದಾಡಲು ಕಷ್ಟಪಡುತ್ತಿತ್ತು. ಈ ಹಿನ್ನೆಲೆಯಲ್ಲಿ ಮಹೋನಿ ಮತ್ತು ಅವರ ಪತ್ನಿ ಆಲಿಸನ್ ಜುಲೈ 11 ರಂದು ಶ್ವಾನಕ್ಕೆ ದಯಾಮರಣ ನೀಡಿದ್ದಾರೆ.

ನ್ಯೂಯಾರ್ಕ್ ನಗರದ ಆರೋಗ್ಯ ಇಲಾಖೆಯ ವಕ್ತಾರರು, ನೆಕ್ರೋಪ್ಸಿ ಪರೀಕ್ಷೆಗಾಗಿ ನಾಯಿಯ ಮೃತದೇಹವನ್ನು ತೆಗೆದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಆದರೆ ಈ ಬಗ್ಗೆ ಪಶುವೈದ್ಯರ ಜೊತೆ ಮಾತನಾಡಿದಾಗ ಅವರು, ಈಗಾಗಲೇ ನಾಯಿಯನ್ನು ಈಗಾಗಲೇ ದಹನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಅಮೆರಿಕದಲ್ಲಿ 12 ಶ್ವಾನಗಳು ಹಾಗೂ 19 ಬೆಕ್ಕುಗಳಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ ಎಂದು ನ್ಯಾಷನಲ್ ಜಿಯೋಗ್ರಫಿ ಮಾಹಿತಿ ನೀಡಿದೆ. ಇದನ್ನೂ ಓದಿ: ವಿಶ್ವದಲ್ಲೇ ಮೊದಲ ಪ್ರಕರಣ – ಝೂನಲ್ಲಿದ್ದ ಹುಲಿಗೂ ಕೊರೊನಾ

Click to comment

Leave a Reply

Your email address will not be published. Required fields are marked *