Connect with us

Crime

ಗಾಯಕಿ ಹರ್ಷಿತಾ ದಹಿಯಾ ಶೂಟೌಟ್ ಪ್ರಕರಣಕ್ಕೆ ಟ್ವಿಸ್ಟ್

Published

on

ಚಂಡೀಗಢ: ಹರಿಯಾಣದ ಗಾಯಕಿ ಹರ್ಷಿತಾ ದಹಿಯಾ ಶೂಟೌಟ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ದಹಿಯಾ ಅವರ ಸಹೋದರಿ ತನ್ನ ಗಂಡನೇ ಕೊಲೆ ಮಾಡಿಸಿರುವುದಾಗಿ ಆರೋಪಿಸಿದ್ದಾರೆ.

ಹರ್ಷಿತಾ ದಹಿಯಾ ಶೂಟೌಟ್ ಕುರಿತು ಮಾಧ್ಯಮಗಳಿಗೆ ಹೀಳಿಕೆ ನೀಡಿರುವ ದಹಿಯಾ ಸಹೋದರಿ, ತನ್ನ ಪತಿ ದಿನೇಶ್ ಹತ್ಯೆ ಮಾಡಿಸಿದ್ದಾರೆ ಎಂದು ಆರೋಪಿಸಿದರು. ದಹಿಯಾ ತಾಯಿಯ ಕೊಲೆ ಪ್ರಕರಣದಲ್ಲಿ ಅವರು ಪ್ರಮುಖ ಸಾಕ್ಷಿಯಾಗಿದ್ದರಿಂದ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಹರಿಯಾಣ ಮೂಲದ ಗಾಯಕಿ ಹಾಗೂ ಕಲಾವಿದೆಯಾಗಿದ್ದ ಹರ್ಷಿತಾ ಅವರನ್ನು ಪಾಣಿಪತ್ ಜಿಲ್ಲೆಯ ಚಾಮರಾರಾ ಹಳ್ಳಿಯ ಪ್ರದೇಶದಲ್ಲಿ ಮಂಗಳವಾರ ದುಷ್ಕರ್ಮಿಗಳು ಆರು ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಈ ಕುರಿತು ಪೊಲೀಸರು ಕುಟುಂಬ ಸದಸ್ಯರಿಂದ ಮಾಹಿತಿಯನ್ನು ಪಡೆದಿದ್ದರು.

ಶೂಟೌಟ್ ಕುರಿತು ಎಲ್ಲಾ ಮೂಲಗಳಿಂದಲೂ ತನಿಖೆಯನ್ನು ನಡೆಸುತ್ತಿದ್ದು, ಶೀಘ್ರವೇ ಹಂತಕರನ್ನು ಬಂಧಿಸಲಾಗುದು ಎಂದು ಪಾಣಿಪತ್ ಪೊಲೀಸರ್ ಅಧಿಕಾರಿ ದಿನೇಶ್ ತಿಳಿಸಿದ್ದಾರೆ. ಹರ್ಷಿತಾ ಅವರ ತಾಯಿಯವರನ್ನು 2014ರಲ್ಲಿ ದೆಹಲಿಯಲ್ಲಿ ಹತ್ಯೆ ಮಾಡಲಾಗಿತ್ತು, ಈ ಪ್ರಕರಣದಲ್ಲಿ ದಿನೇಶ್ ಆರೋಪಿಯಾಗಿದ್ದು, ಹರ್ಷಿತಾ ಪ್ರಮುಖ ಸಾಕ್ಷಿಯಾಗಿದ್ದರು. ಅಲ್ಲದೇ ದಹಿಯಾ ಸಹೋದರಿಯ ಪತಿ ದಿನೇಶ್ ಈಗಾಗಲೇ ಹಲವು ಕ್ರಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಸದ್ಯ ಜೈಲಿನಲ್ಲಿದ್ದಾನೆ ಎಂದು ಪಾಣಿಪತ್ ಡಿಎಸ್‍ಪಿ ದೇಶ್ ರಾಜ್ ಮಾಹಿತಿ ನೀಡದ್ದಾರೆ.

ಗಾಯಕಿ ದಹಿಯಾ ದೆಹಲಿಯ ನರೇಲಾ ಪ್ರದೇಶದಲ್ಲಿ ವಾಸವಾಗಿದ್ದರು, ಹರಿಯಾಣದಲ್ಲಿ ಕಾರ್ಯಕ್ರಮವೊಂದನ್ನ ಮುಗಿಸಿಕೊಂಡು ಹಿಂದಿರುಗುವ ವೇಳೆ ದಹಿಯಾ ಕಾರನ್ನು ಓವರ್ ಟೇಕ್ ಮಾಡಿದ ದುಷ್ಕರ್ಮಿಗಳು ಹರ್ಷಿತಾ ಅವರ ಕಾರನ್ನ ಅಡ್ಡಗಟ್ಟಿ ಗುಂಡು ಹಾರಿಸಿದ್ದರು.

ಹರಿಯಾಣ ಚಿತ್ರೋದ್ಯಮದ ಕೆಲವು ವ್ಯಕ್ತಿಗಳಿಂದಲೂ ಜೀವಬೇದರಿಕೆ ಇತ್ತು ಎಂದು ಹರ್ಷಿತಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹೇಳಿಕೊಂಡಿದ್ದರು. ನಮ್ಮ ಇಂಡಸ್ಟ್ರಿಯವರೇ, ಹರಿಯಾಣದ ಕಲಾವಿದರೇ ಬೆದರಿಕೆ ಹಾಕುತ್ತಿದ್ದಾರೆ. ವಿಡಿಯೋ ಡಿಲೀಟ್ ಮಾಡು, ಇಲ್ಲವಾದ್ರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸುತ್ತಿದ್ದಾರೆ. ನಾನು ತಪ್ಪೇನೂ ಹೇಳಿಲ್ಲ. ನಾನು ಯಾರಿಗೂ ಹೆದರಲ್ಲ. ಏನಾದ್ರೂ ಮಾಡಿಕೊಳ್ಳಿ. ನಾನು ವಿಡಿಯೋ ಡಿಲೀಟ್ ಮಾಡಲ್ಲ. ನನಗೆ ಸಾವಿನ ಭಯವಿಲ್ಲ ಎಂದು ಹರ್ಷಿತಾ ವಿಡಿಯೋದಲ್ಲಿ ಹೇಳಿರುವುದಾಗಿ ವರದಿಯಾಗಿದೆ. ಆದ್ರೆ ಆಕೆ ಯಾವ ವಿಡಿಯೋ ಬಗ್ಗೆ ಮಾತನಾಡಿದ್ದರು ಎಂಬುದು ಸ್ಪಷ್ಟವಾಗಿಲ್ಲ.