Friday, 22nd February 2019

ಹೊಸ ದಾಖಲೆ ಬರೆದ ಯಜಮಾನ – ಕೇಕ್ ಕಟ್ ಮಾಡಿ ದಚ್ಚು ಸಂಭ್ರಮ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಸಿನಿಮಾವೂ ಕೆಲವು ದಿನಗಳಿಂದ ಯೂಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಚಿತ್ರತಂಡದೊಂದಿಗೆ ನಟ ದರ್ಶನ್ ಕೇಕ್ ಕತ್ತಿರಿಸಿ ಸಂಭ್ರಮಿಸಿದ್ದಾರೆ.

ಹೌದು.. ಯಜಮಾನ ಚಿತ್ರತಂಡ ಮೊದಲು ಸಿನಿಮಾ ‘ಶಿವನಂದಿ’ ಹಾಡನ್ನು ರಿಲೀಸ್ ಮಾಡಿತ್ತು. ಬಳಿಕ ದರ್ಶನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ರೊಮ್ಯಾಂಟಿಕ್ ಹಾಡು ಹಾಗೂ ‘ಯಜಮಾನ’ ಟೈಟಲ್ ಸಾಂಗ್ ಬಿಡುಗಡೆ ಮಾಡಿತ್ತು. ಈ ಮೂರು ಹಾಡುಗಳು ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗಿದ್ದು, ಅಧಿಕ ವೀವ್ಸ್ ಕಂಡಿತ್ತು.

ಎರಡು ದಿನಗಳ ಹಿಂದೆ ಯಜಮಾನ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ. ಟ್ರೈಲರ್ ಬಿಡುಗಡೆಗೊಂಡು ಎರಡು ದಿನವಾದರೂ ಯೂಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ನಲ್ಲಿಯೇ ಇದೆ. ಇದುವರೆಗೂ 1.16 ಕೋಟಿಗಿಂತಲೂ ಅಧಿಕ ವೀವ್ಸ್ ಕಂಡಿದ್ದು, 2.37 ಲಕ್ಷ ಮಂದಿ ಲೈಕ್ಸ್ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಯಜಮಾನ ಚಿತ್ರತಂಡ ಹೊಸ ದಾಖಲೆ ನಿರ್ಮಿಸಿದ ಖುಷಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದೆ. ಚಿತ್ರತಂಡ ಸಂಭ್ರಮಿಸಿರುವ ಫೋಟೋವನ್ನು ಅಭಿಮಾನಿಗಳು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿ ಶೇರ್ ಮಾಡುತ್ತಿದ್ದಾರೆ.

ಈ ಬಗ್ಗೆ ಡಿ ಕಂಪನಿ, “ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೋಸ್ಟ್ ಎಕ್ಸ್ಪೆಕ್ಟೆಡ್ `ಯಜಮಾನ’ ಖಡಕ್ ಟ್ರೈಲರ್ ಹೊಸ ದಾಖಲೆ ಬರೆದಿದ್ದು, ಬಾಕ್ಸ್ ಆಫೀಸ್ ಸುಲ್ತಾನ್ ಕೇಕ್ ಕತ್ತರಿಸುವ ಮೂಲಕ ಚಿತ್ರತಂಡ ಹಾಗೂ ಅಭಿಮಾನಿಗಳೊಂದಿಗೆ ಸಿಹಿ ಹಂಚಿಕೊಂಡಿದ್ದಾರೆ. 24 ಗಂಟೆಗಳಲ್ಲಿ 115 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡು ಕೆಲವೇ ಗಂಟೆಗಳಲ್ಲಿ ಅತಿ ಹೆಚ್ಚು ಲೈಕ್ ಮಾಡಿರುವ ಟ್ರೈಲರ್ ಸಹ ಇದಾಗಿದೆ. 30 ಗಂಟೆಗಳಿಂದ ಯುಟ್ಯೂಬ್ ಅಲ್ಲಿ ದೇಶದಾದ್ಯಂತ ನಂಬರ್ 1 ಸ್ಥಾನದಲ್ಲಿ ರಾರಾಜಿಸುತ್ತಿದೆ” ಎಂದು ಟ್ವೀಟ್ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *