Connect with us

Crime

ಬಾಲಕನ ಲಿಂಗ ಪರಿವರ್ತಿಸಿ ಅತ್ಯಾಚಾರ

Published

on

– 3 ವರ್ಷದಿಂದ ಲೈಂಗಿಕ ಕಿರುಕುಳ

ನವದೆಹಲಿ: ಬಲವಂತವಾಗಿ ಬಾಲಕನ ಲಿಂಗ ಪರಿವರ್ತನೆ ಮಾಡಿಸಿದ್ದು ಮಾತ್ರವಲ್ಲದೆ, ಆತನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಅತ್ಯಾಚಾರಕ್ಕೊಳಗಾದ ಬಾಲಕ 13 ವರ್ಷದವನಾಗಿದ್ದಾನೆ. ದೆಹಲಿ ಮಹಿಳಾ ಆಯೋಗ ಈ ಪ್ರಕರಣವನ್ನು ಬೆಳಕಿಗೆ ತಂದಿದೆ. ನಂತರ ಪ್ರಕರಣವನ್ನು ಎಫ್‍ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಲಕ್ಷ್ಮಿ ನಗರದಲ್ಲಿ ನಡೆದ ನೃತ್ಯ ಕಾರ್ಯಕ್ರಮವೊಂದರಲ್ಲಿ ಆರೋಪಿ ಬಾಲಕನನ್ನು ಭೇಟಿಯಾಗಿದ್ದನೆ. ಬಾಲಕನ ಸ್ನೇಹ ಬೆಳೆಸಿದ್ದಾನೆ. ನಿನಗೆ ನೃತ್ಯವನ್ನು ಕಲಿಸುತ್ತೇನೆ ನನ್ನೊಂದಿ ಬಾ ಎಂದು ನೆಪ ಒಡ್ಡಿ ಮಾಂಡವಲಿಗೆ ಕರೆದುಕೊಂಡು ಹೋಗಿದ್ದಾನೆ. ಬಾಲಕನು ನೃತ್ಯದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಆತನನ್ನು ನಂಬಿ ಅವನೊಡನೆ ಹೋಗಿದ್ದಾನೆ.

ಕೆಲವು ದಿನಗಳ ನಂತರ ಬಾಲಕನ ಪೋಷಕರು ಆರೋಪಿಯ ಬಳಿಯಲ್ಲಿ ವಿಚಾರಿಸಿದಾಗ ಆತ ಇಲ್ಲಿಯೇ ಇದ್ದು ನೃತ್ಯ ಅಭ್ಯಾಸ ಮಾಡ ಬೇಕು ಎಂದು ಹೇಳಿದ್ದಾನೆ. ಆರೋಪಿ ಬಾಲಕನಿಗೆ ಕೆಲವು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟು ಆರಂಭದಲ್ಲಿ ಸ್ವಲ್ಪ ಹಣವನ್ನು ನೀಡಿದ್ದಾನೆ. ನೀನು ನನ್ನ ಜೊತೆಯಲ್ಲಿಯೇ ಇದ್ದು ಕೆಲಸ ಮಾಡಬೇಕು ಎಂದು ಹೇಳಿದ್ದಾನೆ.

ದಿನಕಳೆದಂತೆ ಆರೋಪಿ ತನ್ನ ವರಸೆಯನ್ನು ಬದಲಿಸಿದ್ದಾನೆ. ಬಾಲಕನಿಗೆ ಕೆಲವು ಮಾದಕ ವಸ್ತುಗಳನ್ನು ನೀಡಲು ಪ್ರಾರಂಭಿಸಿದ್ದಾನೆ. ಕೆಲವೇ ದಿನಗಳಲ್ಲಿ ಬಾಲಕ ಲಿಂಗ ಬದಲಾವಣೆಯನ್ನು ಮಾಡಿಸಿದ್ದಾನೆ. ಈಗ ಬಾಲಕ ಸಂಪೂರ್ಣವಾಗಿ ಹುಡುಗಿಯಂತೆ ಬದಲಾಗಿದ್ದಾನೆ. ಆ ಸಮಯದಲ್ಲಿ ಬಾಲಕ ಕೇವಲ 13 ವರ್ಷದವನಾಗಿದ್ದನು. ಆರೋಪಿ ತನ್ನ ಸ್ನೇಹಿತರಿಂದ ಹಣವನ್ನು ಪಡೆದು ಲಿಂಗ ಪರಿವರ್ತನೆಯಾಗಿರುವ ಹುಡುಗಿಗೆ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ದಿನಕಳೆದಂತೆ ಹೊರಗಿನ ಗಿರಾಕಿಗಳನ್ನು ಕರೆಸಿ ಹಣ ಸಂಪಾದನೆ ಮಾಡಲು ಮುಂದಾಗಿದ್ದಾನೆ. ಈ ವಿಚಾರ ತಿಳಿದ ಮಹಿಳಾ ಆಯೋಗವು ಪ್ರಕರಣವನ್ನು ಬೆಳಕಿಗೆ ತಂದಿದೆ.

Click to comment

Leave a Reply

Your email address will not be published. Required fields are marked *