Tuesday, 12th November 2019

Recent News

ನಟಿ ಸಾರಾಳನ್ನು ನೋಡಿ ಭಿಕ್ಷುಕಿ ಎಂದ ನೆಟ್ಟಿಗರು

ಮುಂಬೈ: ಬಾಲಿವುಡ್ ಬೆಡಗಿ ಸಾರಾ ಅಲಿ ಖಾನ್ ಅವರ ಫೋಟೋವೊಂದನ್ನು ನೋಡಿ ನೆಟ್ಟಿಗರು ಭಿಕ್ಷುಕಿ ಎಂದು ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಸಾರಾ ಹಳದಿ ಬಣ್ಣದ ಕ್ರಾಪ್ ಟಾಪ್ ಹಾಗೂ ಹರಿದ ಜೀನ್ಸ್ ಧರಿಸಿ ಕ್ಯಾಮೆರಾ ಕಣ್ಣಿಗೆ ಸೆರೆ ಆಗಿದ್ದರು. ಸಾರಾ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

 

View this post on Instagram

 

#ZoomLens: Spotted @saraalikhan95 while shooting for an ad in the city! 📸

A post shared by Zoom TV (@zoomtv) on

ಸಾರಾ ಹರಿದ ಜೀನ್ಸ್ ಧರಿಸಿದ್ದಕ್ಕೆ ನೆಟ್ಟಿಗರು ಆಕೆಯನ್ನು ‘ಭಿಕ್ಷುಕಿ’ ಎಂದು ಕರೆದು ಟ್ರೋಲ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಈ ಬಡ ಮಹಿಳೆಗೆ ಯಾರಾದರೂ ಉಡುಪು ನೀಡಿ. ದೀಪಾವಳಿ ಹಬ್ಬ ಕೂಡ ಬರುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಜೀನ್ಸ್ ನ ಜೇಬಿನಲ್ಲಿ ಬಾಂಬ್ ಬ್ಲ್ಯಾಸ್ಟ್ ಆಗಿದ್ದೀಯಾ ಎಂದು ಕಮೆಂಟ್ ಮಾಡಿದ್ದಾರೆ.

ನಟ ವರುಣ್ ಧವನ್ ಜೊತೆ ಸಾರಾ ಅಲಿ ಖಾನ್ ‘ಕೂಲಿ ನಂ 1’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಡೇವಿಡ್ ಧವನ್ ನಿರ್ದೇಶಿಸುತ್ತಿದ್ದಾರೆ. 1995ರಲ್ಲಿ ನಟ ಗೋವಿಂದ ಹಾಗೂ ಕರೀಶ್ಮಾ ಕಪೂರ್ ಈ ಚಿತ್ರದಲ್ಲಿ ನಟಿಸಿದ್ದರು. ಈಗ ಈ ರಿಮೇಕ್ ಚಿತ್ರದಲ್ಲಿ ಸಾರಾ ಹಾಗೂ ವರುಣ್ ನಟಿಸುತ್ತಿದ್ದಾರೆ.

ಇದಾದ ಬಳಿಕ ಆರಾ ನಿರ್ದೇಶಕ ಇಮ್ತಿಯಾಜ್ ಅಲಿ ನಿರ್ದೇಶನದ ‘ಆಜ್‍ಕಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಾರಾಗೆ ನಾಯಕನಾಗಿ ಕಾರ್ತಿಕ್ ಆರ್ಯನ್ ನಟಿಸುತ್ತಿದ್ದಾರೆ. ಮುಂದಿನ ವರ್ಷ ಪ್ರೇಮಿಗಳ ದಿನದಂದು ಈ ಚಿತ್ರ ಬಿಡುಗಡೆ ಆಗಲಿದೆ.

Leave a Reply

Your email address will not be published. Required fields are marked *