Connect with us

Bengaluru Rural

ರಸ್ತೆಯುದ್ದಕ್ಕೂ ಕೊರೊನಾ ವಾರಿಯರ್ಸ್‍ಗೆ ಪುಷ್ಪವೃಷ್ಟಿ

Published

on

ನೆಲಮಂಗಲ: ಕೋವಿಡ್-19 ವಿರುದ್ಧ ಪ್ರತಿನಿತ್ಯ ಹೋರಾಟ ನಡೆಸುತ್ತಿರುವ, ಕೊರೊನಾ ವಾರಿಯರ್ಸ್ ಗೆ ಜನರಿಂದ ಪುಷ್ಪವೃಷ್ಟಿ ನಡೆಸಲಾಯಿತು.

ಸಿಎಂ ರಾಜಕೀಯ ಕಾರ್ಯದರ್ಶಿ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ನೇತೃತ್ವದಲ್ಲಿ ಪುಷ್ಪವೃಷ್ಟಿ ನಡೆದಿದೆ. ಈ ವೇಳೆ ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿದರು.

ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಸ್ತೆಯುದ್ದಕ್ಕೂ ಹೂವಿನ ಸುರಿಮಳೆಗೈದ ಸಾರ್ವಜನಿಕರು ಕರೋನ ವಾರಿಯರ್ಸ್ ಗೆ ಸಲಾಂ ಹೇಳಿದರು. ರಸ್ತೆಯಲ್ಲಿ ಸಾಲುಗಟ್ಟಿ ನಿಂತು ಧನ್ಯವಾದ ಅರ್ಪಿಸಿದ ಸಾರ್ವಜನಿಕರು ಮಕ್ಕಳ, ಇಡೀ ದಾಸನಪುರ ಹೋಬಳಿ ಸಾರ್ವಜನಿಕರಿಂದ ವಾರಿಯರ್ಸ್ ಗೆ ಅಭಿನಂದನೆ ಸಲ್ಲಿಸಿದರು.

ಸಾಮಾಜಿಕ ಅಂತರ ಕಾಯ್ದುಕೊಂಡು ಸಾವಿರಾರು ಜನರಿಂದ ವಾರಿಯರ್ಸ್ ಗೆ ಅಭಿನಂದನೆ ಸಲ್ಲಿಸಿದರು. ರಸ್ತೆಗಳಲ್ಲಿ ಪೆರೇಡ್ ಮೂಲಕ ಕೊರೋನ ವೈರಸ್ ನ ಜಾಗೃತಿ ಮೂಡಿಸಿದ ವಾರಿಯರ್ಸ್ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.