Tuesday, 25th February 2020

Recent News

ಸ್ಟೆತೋಸ್ಕೋಪ್ ಹಿಡಿದು ಶಾಸಕ ಶ್ರೀನಿವಾಸಮೂರ್ತಿಯಿಂದ ರೋಗಿಗಳ ಪರೀಕ್ಷೆ

ಬೆಂಗಳೂರು: ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟ ಜೆಡಿಎಸ್ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅವರು ಸ್ವತಃ ತಾವೇ ಸ್ಟೆತೋಸ್ಕೋಪ್ ಹಿಡಿದು ರೋಗಿಗಳ ಪರೀಕ್ಷೆ ಮಾಡಿದ್ದಾರೆ.

ಇಂದು ಶ್ರೀನಿವಾಸಮೂರ್ತಿ ಅವರು ನೆಲಮಂಗಲ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಶಾಸಕರಾಗಿ ಆಯ್ಕೆ ಆಗುವ ಮೊದಲು ಈ ಆಸ್ಪತ್ರೆಯಲ್ಲಿ ಶ್ರೀನಿವಾಸಮೂರ್ತಿ ಅವರು ವೈದ್ಯರಾಗಿ ಕಾರ್ಯನಿರ್ವಹಿಸಿದ್ದರು. ಆದ್ದರಿಂದ ಆಸ್ಪತ್ರೆ ಸ್ಥಿತಿ ಹೇಗಿದೆ? ವೈದ್ಯರು, ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿದ್ದಾರಾ? ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆಯಾ ಎಂದು ಪರಿಶೀಲಿಸಲು ಶಾಸಕರು ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟಿದ್ದರು.

ಈ ವೇಳೆ ವೈದ್ಯರು ಆಸ್ಪತ್ರೆಯಲ್ಲಿ ಇಲ್ಲದ್ದನ್ನು ಕಂಡು ಶಾಸಕರು ಕೆಂಡಾಮಂಡಲರಾಗಿದ್ದಾರೆ. ಸಮಯವಾಗಿದ್ದರೂ ಕೆಲಸಕ್ಕೆ ಬಾರದ ಸಿಬ್ಬಂದಿ ವಿರುದ್ಧ ಸಿಡಿದಿದ್ದಾರೆ. ಅಲ್ಲದೆ ವಾರ್ಡ್‍ಗಳಿಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ, ಅವರ ಸಮಸ್ಯೆ ಆಲಿಸಿದ್ದಾರೆ. ಜೊತೆಗೆ ಸ್ವತಃ ತಾವೇ ಸ್ಟೆತೋಸ್ಕೋಪ್ ಹಿಡಿದು ರೋಗಿಗಳ ಪರೀಕ್ಷೆ ಕೂಡ ಮಾಡಿದ್ದು, ಶಾಸಕರ ಈ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *