Connect with us

Bengaluru Rural

ಡಿಕೆಶಿ ಶೀಘ್ರ ಗುಣಮುಖರಾಗಲು ವಿಶೇಷ ಹೋಮ, ಪೂಜೆ

Published

on

ನೆಲಮಂಗಲ: ಕಳೆದ ಕೆಲವು ದಿನಗಳಿಂದ ಕೊರೊನಾದಿಂದ ಬಳಲುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಶೀಘ್ರ ಗುಣಮುಖರಾಗಲೆಂದು ವಿಶೇಷ ಹೋಮ ಮತ್ತು ಪೂಜೆ ನೆರವೇರಿಸಲಾಯಿತು.

ಬೆಂಗಳೂರು ಹೊರವಲಯ ನೆಲಮಂಗಲ ನಗರದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಆಂಜನೇಯನಿಗೆ ವಿಶೇಷ ಅಲಂಕಾರ ಮಾಡಿ ಡಿಕೆಶಿ ಅವರ ಹೆಸರಲ್ಲಿ ಅರ್ಚನೆ ನಂತರ ಗಣಪತಿ ಹೋಮ ಮಾಡಿ, ಕೊರೊನಾದಿಂದ ಶೀಘ್ರವಾಗಿ ಗುಣಮುಖರಾಗಿ ರಾಜ್ಯ ರಾಜಕೀಯದಲ್ಲಿ ಸಕ್ರೀಯರಾಗಿ ಭಾಗವಹಿಸುವಂತೆ ಪೂಜೆ ನೆರವೇರಿಸ ಬೇಕಾಯಿತು. ಡಿಕೆ ಶಿವಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸುರೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪೂಜೆಯಲ್ಲಿ ಪಾಲ್ಗೊಂಡು ಗುಣಮುಖರಾಗಲೆಂದು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಡಿಕೆಶಿ ಆರೋಗ್ಯಕ್ಕಾಗಿ 501 ತೆಂಗಿನಕಾಯಿ ಒಡೆದು ಪ್ರಾರ್ಥನೆ

ಈ ವೇಳೆ ಡಿಕೆಶಿ ಅಭಿಮಾನಿಗಳ ಸಂಘ ಅಧ್ಯಕ್ಷ ಸುರೇಶ್ ಮಾತನಾಡಿ, ಈ ಮಾಹಾಮಾರಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ರಾಜ್ಯದಲ್ಲಿ ಜನರ ಪರವಾಗಿ ಸಾಕಷ್ಟು ಕೆಲಸ ಮಾಡಿ, ರಾಜ್ಯ ಸರ್ಕಾರದ ಹಗರಣದ ಬಗ್ಗೆ ಧ್ವನಿ ಎತ್ತಲು ಆ ಭಗವಂತ ಶಕ್ತಿ ನೀಡುವಂತೆ ಪ್ರಾರ್ಥಿಸಿ ಪೂಜೆಯನ್ನ ನಡೆಸಿದ್ದೇವೆ ಎಂದರು.

ಈ ಪೂಜಾ ಕಾರ್ಯಕ್ರಮದಲ್ಲಿ ನೂರಾರು ಜನರಿಗೆ ಅನ್ನ ಪ್ರಸಾದವನ್ನ ಕಾರ್ಯಕರ್ತರು ವಿತರಣೆ ಮಾಡಿದರು. ಸಪ್ತಗಿರಿ ಶಂಕರ್ ನಾಯಕ್, ಕಾಂಗ್ರೆಸ್ ಮುಖಂಡ ವೆಂಕಟೇಶ್ ಬಾಬು, ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ, ಉಮೇಶ್, ನಾಗರಾಜು, ಪ್ರದೀಪ್ ಹಲವಾರು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

Click to comment

Leave a Reply

Your email address will not be published. Required fields are marked *