Connect with us

Cinema

ಬಾಯ್ ಫ್ರೆಂಡ್ ಜೊತೆ ಕೊಚ್ಚಿಗೆ ಹಾರಿದ ನಯನತಾರಾ!

Published

on

ಚೆನ್ನೈ: ಕಾಲಿವುಡ್ ನಟಿ ನಯನತಾರಾ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದರೂ, ಅವರ ಬಾಯ್ ಫ್ರೆಂಡ್, ನಿರ್ದೇಶಕ ವಿಘ್ನೇಶ್ ಶಿವನ್ ಇನ್‍ಸ್ಟಾಗ್ರಾಮ್‍ನಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ.

ಸದ್ಯ ಇತ್ತೀಚೆಗೆ ನಯನಾ ಜೊತೆ ವಿಘ್ನೇಶ್ ಖಾಸಗಿ ವಿಮಾನದಲ್ಲಿ ಕೊಚ್ಚಿಗೆ ತೆರಳುತ್ತಿರುವ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ನಯನಾ, ವಿಘ್ನೇಶ್ ಮೊಬೈಲ್ ನೋಡಿಕೊಂಡು ಏನೋ ಚರ್ಚೆ ನಡೆಸುತ್ತಾ, ವಿಘ್ನೇಶ್‍ರನ್ನು ನೋಡಿ ನಗುತ್ತಿರುವಂತೆ ಕಾಣಿಸುತ್ತದೆ. ಈ ವೀಡಿಯೋ ನಯನಾ ಹಾಗೂ ವಿಘ್ನೇಶ್ ಒಬ್ಬರಿಗೊಬ್ಬರು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಸಾಕ್ಷಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಹಲವು ವರ್ಷಗಳಿಂದ ಈ ಜೋಡಿ ರಿಲೇಷನ್ ಶಿಪ್‍ನಲ್ಲಿದ್ದು, ಇಲ್ಲಿಯವರೆಗೂ ಇಬ್ಬರೂ ಪರಸ್ಪರ ಡೇಟ್ ಮಾಡುತ್ತಿರುವ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಕಳೆದ ವರ್ಷ ಈ ಜೋಡಿ ಶೀಘ್ರವೇ ವಿವಾಹವಾಗಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಈ ವಿಚಾರವಾಗಿ ವಿಘ್ನೇಶ್ ಸಂದರ್ಶನವೊಂದರಲ್ಲಿ, ಮದುವೆ ಬಗ್ಗೆ ಆಗಾಗ ವದಂತಿಗಳು ಹಬ್ಬುತ್ತಲೇ ಇರುತ್ತದೆ. ನಾವಿಬ್ಬರು ವೃತ್ತಿಯಲ್ಲಿ ಸಾಧಿಸಲು ಹಲವು ಗುರಿಗಳನ್ನು ಹೊಂದಿದ್ದೇವೆ. ಅದಕ್ಕೂ ಮುನ್ನ ಮದುವೆಯ ಬಗ್ಗೆ ಯೋಚನೆ ಮಾಡಲು ಸಾಧ್ಯವಿಲ್ಲ. ನಾವು ಹೇಗಿದ್ದೇವೂ ಅದರಲ್ಲಿಯೇ ಖುಷಿಯಾಗಿದ್ದೇವೆ ಎಂದು ತಿಳಿಸಿದ್ದರು.

ಸದ್ಯ ನಯನತಾರಾ ವಿಘ್ನೇಶ್ ಆ್ಯಕ್ಷನ್ ಕಟ್ ಹೇಳುತ್ತಿರುವ ನೇತ್ರಿಕನ್ ಮತ್ತು ವಾಕುಲಾ ರೆಂಡು ಕಡಲ್ ಎಂಬ ಎರಡು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೇ ನೇತ್ರಿಕನ್ ಸಿನಿಮಾದಲ್ಲಿ ಸಮಂತಾ ಹಾಗೂ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನು ಹೊರತು ಪಡಿಸಿ ನಯನ ತಾರಾ ಕಾಲಿವುಡ್ ಸೂಪರ್ ಸ್ಟಾರ್ ನಟ ರಜನಿಕಾಂತ್ ಜೊತೆ ಅನ್ನಾಥೆ ಚಿತ್ರದಲ್ಲಿ ಬಣ್ಣಹಚ್ಚಿದ್ದು, ಈ ಚಿತ್ರಕ್ಕೆ ನಿರ್ದೇಶಕ ಶಿವ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಖುಷ್ಬು, ಮೀನಾ, ಮತ್ತು ಕೀರ್ತಿ ಸುರೇಶ್ ಮುಖ್ಯ ಪಾತ್ರದಲ್ಲಿ ಮಿಂಚಲಿದ್ದಾರೆ.

Click to comment

Leave a Reply

Your email address will not be published. Required fields are marked *