Advertisements

ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

ನಾನು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತೇನೆ. ಆದರೆ, ಅಂತಹ ಚಿತ್ರಗಳನ್ನು ನೋಡಲಾರೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ. ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ನೀವು ಇತ್ತೀಚೆಗೆ ಬಿಡುಗಡೆಯಾದ ಕೆಜಿಎಫ್, ಆರ್.ಆರ್.ಆರ್, ಪುಷ್ಪಾ ಸಿನಿಮಾಗಳನ್ನು ನೋಡಿದ್ದೀರಾ ಎಂದು ನಿರೂಪಕಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿರುವ ಅವರು, ನಾನು ಅಂತಹ ಚಿತ್ರಗಳನ್ನು ನೋಡುವುದಿಲ್ಲ, ನೋಡಲಾರೆ ಎಂದು ನೇರವಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

Advertisements

ನವಾಜುದ್ಧೀನ್ ಸಿದ್ದಿಕಿ ನೀಡಿದ ಈ ಉತ್ತರ ಇದೀಗ ಭಾರೀ ಸದ್ದು ಮಾಡುತ್ತಿದೆ. ದಕ್ಷಿಣದ ಸಿನಿಮಾಗಳಲ್ಲಿ ನಟಿಸುವುದಕ್ಕೆ ಒಪ್ಪುವ ಸಿದ್ದಿಕಿ, ಈಗ ಅಂತಹ ಸಿನಿಮಾಗಳ‍ನ್ನು ನೋಡುವುದಿಲ್ಲ ಎನ್ನುವುದು ಸರಿಯಾದದ್ದು ಅಲ್ಲ ಎಂದಿದ್ದಾರೆ ಹಲವರು. ದಕ್ಷಿಣದ ಚಿತ್ರಗಳು ಬಾಲಿವುಡ್ ಅನ್ನೂ ಮಕಾಡೆ ಮಲಗಿಸುತ್ತಿವೆ. ಹಾಗಾಗಿ ಇಂತಹ ಮಾತುಗಳನ್ನು ಆಡುತ್ತಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

Advertisements

ಕಮರ್ಷಿಯಲ್ ಸಿನಿಮಾಗಳನ್ನು ನೋಡದೇ ಇರುವುದಕ್ಕೆ ಅವರಲ್ಲಿ ಕಾರಣವಿದೆಯಂತೆ. ಚಿತ್ರಗಳು ಕಾಡಬೇಕು, ನನ್ನ ಬುದ್ಧಿಮತ್ತೆಯನ್ನು ಅವು ಹೆಚ್ಚಿಸಬೇಕು. ನಾನು ಒಂದಷ್ಟು ಹೊತ್ತು ಅದಕ್ಕೆ ಟೈಮ್ ಕೊಡುತ್ತೇನೆ ಅಂದರೆ, ಅದರಿಂದ ನನಗೆ ಉಪಯೋಗವಾಗಬೇಕು. ಕಮರ್ಷಿಯಲ್ ಚಿತ್ರಗಳಿಂದ ಅವೆಲ್ಲವನ್ನೂ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಅಂತಹ ಚಿತ್ರಗಳನ್ನು ನಾನು ನೋಡುವುದಿಲ್ಲ ಎಂದಿದ್ದಾರೆ ಸಿದ್ದಿಕಿ. ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು

Advertisements

ಕಮರ್ಷಿಯಲ್ಲಿ ಸಿನಿಮಾಗಳ ಯಶಸ್ಸು ತಾತ್ಕಾಲಿಕ ಎಂದು ನಾಯಕರಿಗೂ ತಿವಿದಿದ್ದಾರೆ. ಒಂದು ಸಿನಿಮಾ ಗೆದ್ದಿದೆ ಎಂದು ಬೀಗುವುದು, ನಾನೇ ಸ್ಟಾರ್ ಅನ್ನುವುದು ಸರಿಯಲ್ಲ. ಅಂತಹ ಚಿತ್ರಗಳಿಗೆ ಕಡಿಮೆ ಆಯುಷ್ಯ. ಎಲ್ಲವೂ ಗೆಲ್ಲುವುದಿಲ್ಲ. ಅದನ್ನು ಎಲ್ಲರಿಗೂ ಅರಿಯಬೇಕು ಎಂದು ಕಲಾವಿದರಿಗೂ ಸಿದ್ದಿಕಿ ಚಾಟಿ ಬೀಸಿದ್ದಾರೆ. ಈ ಸಂದರ್ಶನ್ ಸಖತ್ ವೈರಲ್ ಕೂಡ ಆಗಿದೆ. ಪರ ವಿರೋಧದ ಚರ್ಚೆಗೂ ಕಾರಣವಾಗಿದೆ.

Advertisements
Exit mobile version