Connect with us

Karnataka

ಮಹಾರಾಷ್ಟ್ರದಿಂದ ಕದಂಬ ನೌಕಾನೆಲೆಗೆ ಹಡಗಿನಲ್ಲಿ ಬಂದ 10 ಸಿಬ್ಬಂದಿಗೆ ಕೊರೊನಾ ಪಾಸಿಟಿವ್

Published

on

ಕಾರವಾರ: ಮಹಾರಾಷ್ಟ್ರದಿಂದ ಕಾರವಾರದ ಕದಂಬ ನೌಕಾನೆಲೆಗೆ ಹಡಗಿನಲ್ಲಿ ಬಂದ 10 ನೌಕಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಉಳಿದವರಲ್ಲಿ ಆತಂಕ ಶುರುವಾಗಿದೆ.

ನಿನ್ನೆ ಮಹಾರಾಷ್ಟ್ರದಿಂದ ಕಾರವಾರದ ಅರಗಾದಲ್ಲಿರುವ ಕದಂಬ ನೌಕಾ ನೆಲೆಗೆ ಯುದ್ಧ ನೌಕೆ ಆಗಮಿಸಿದ್ದು, ಈ ನೌಕೆಯಲ್ಲಿದ್ದ 30ಕ್ಕೂ ಹೆಚ್ಚು ಸಿಬ್ಬಂದಿಗೆ ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿದ್ದರು. ಇದೀಗ ಕೊರೊನಾ ಟೆಸ್ಟ್ ಮಾಡಿದ್ದ ವರದಿ ಬಂದಿದ್ದು, ಇಂದಿನ ವರದಿಯಲ್ಲಿ 10 ಜನ ನೌಕಾ ದಳದ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ.

ಕೋವಿಡ್ ಪಾಸಿಟಿವ್ ಬಂದ ನೌಕಾ ಸಿಬ್ಬಂದಿಯನ್ನು ನೌಕಾ ನೆಲೆಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಇದರಿಂದಾಗಿ ಉಳಿದ ಸಿಬ್ಬಂದಿ ಹಾಗೂ ನೌಕಾ ನೆಲೆಯಲ್ಲಿನ ಜನರಿಗೂ ಭಯ ಶುರುವಾಗಿದೆ. ಪಾಸಿಟಿವ್ ಬಂದ ಸಿಬ್ಬಂದಿಯನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Click to comment

Leave a Reply

Your email address will not be published. Required fields are marked *