Wednesday, 17th July 2019

ಕಪಿಲ್ ಶರ್ಮಾ ಶೋದಿಂದ ಸಿಧು ಔಟ್

ಚಂಡೀಗಢ: ಪುಲ್ವಾಮಾ ದಾಳಿಯ ವಿಚಾರವಾಗಿ ಪಾಕಿಸ್ತಾನ ಪರವಾಗಿ ಹೇಳಿಕೆ ನೀಡಿದ್ದ ಪಂಜಾಬ್‍ನ ಕಾಂಗ್ರೆಸ್ ಮಂತ್ರಿ ನವಜೋತ್ ಸಿಂಗ್ ಸಿಧುಗೆ ಸಂಕಷ್ಟ ಎದುರಾಗಿದ್ದು, ಖ್ಯಾತ ಕಪಿಲ್ ಶರ್ಮಾ ಶೋದಿಂದ ಅವರನ್ನು ಹೊರಹಾಕಲಾಗಿದೆ.

ಶೋ ಆರಂಭವಾದ ದಿನದಿಂದಲೂ ಸಿಧು ಅಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ಆದರೆ ಪುಲ್ವಾಮಾ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಧು, ಭಯೋತ್ಪಾದನೆಗೆ ಯಾವುದೇ ದೇಶ, ಧರ್ಮ ಅಂತಿಲ್ಲ. ಭಾರತ, ಪಾಕಿಸ್ತಾನದ ಜೊತೆ ಮಾತನಾಡಬೇಕು. ಕೆಲವರು ಮಾಡಿದ ತಪ್ಪಿಗೆ ದೇಶವನ್ನೇ ದ್ವೇಷಿಸುವುದು ಸರಿಯಲ್ಲ ಅಂತ ಹೇಳಿದ್ದರು. ಇದನ್ನೂ ಓದಿ: ಪಾಕಿಸ್ತಾನಕ್ಕೆ ಕ್ಲೀನ್‍ಚಿಟ್ ಕೊಟ್ಟು ಮಾತುಕತೆಯಿಂದ ಸಮಸ್ಯೆ ಪರಿಹಾರ ಎಂದ ಸಿಧು

ಈ ಹೇಳಿಕೆ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೆ ಬಾಯ್ಕಾಟ್ ಸಿಧು ಎಂಬ ಹ್ಯಾಷ್ ಟ್ಯಾಗ್ ಬಳಸಿ ಸಾಕಷ್ಟು ಜನ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ಟಿವಿ ಚಾನೆಲ್ ನಿರ್ಮಾಣ ಸಂಸ್ಥೆ, ಸಿಧು ಅವರನ್ನು ಕಾರ್ಯಕ್ರಮದಿಂದ ಕಿತ್ತು ಹಾಕುವಂತೆ ಸೂಚನೆ ನೀಡಿದೆ.

ಸಿಧು ಮಾತ್ರ ತನ್ನ ಹೇಳಿಕೆಯಲ್ಲಿ ಕೆಲವನ್ನು ಮಾತ್ರವೇ ಆರಿಸಿ ವಿಕೃತಿ ಮೆರೆಯಲಾಗಿದೆ ಅಂತ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಇನ್ನು ಬಿಸಿಸಿಐ ಅಂಗಸಂಸ್ಥೆ ಸಿಸಿಐ ತನ್ನ ರೆಸ್ಟೋರೆಂಟ್‍ನಲ್ಲಿದ್ದ ಮಾಜಿ ಕ್ರಿಕೆಟಿಗ, ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರವನ್ನು ಮುಚ್ಚುವ ಮೂಲಕ ಪುಲ್ವಾಮಾ ದಾಳಿಗೆ ವಿನೂತನವಾಗಿ ಪ್ರತಿಭಟಿಸಿದೆ.

ಪುಲ್ವಾಮಾ ದಾಳಿ ನಡೆದ ಸಂದರ್ಭದಲ್ಲಿ ನವಜೋತ್ ಸಿಂಗ್, ದಾಳಿಯಲ್ಲಿ ನಡೆಸಿದವರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಹೇಳಿದ್ದರು. ಆದರೆ ಯಾರೋ ಮಾಡಿದ ಕೃತ್ಯಕ್ಕೆ ಯಾವುದೇ ದೇಶದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಇವುಗಳಿಗೆಲ್ಲ ಶಾಂತಿ ಮಾತುಕತೆ ಒಂದೇ ಪರಿಹಾರ ಎಂದು ಹೇಳುವ ಮೂಲಕ ಕೃತ್ಯದಲ್ಲಿ ಪಾಕಿಸ್ತಾನದ ಪಾತ್ರದ ಕುರಿತು ಪರೋಕ್ಷವಾಗಿ ಕ್ಲೀನ್‍ಚಿಟ್ ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *