Wednesday, 16th October 2019

Recent News

ಹೇರ್ ಫಾಲ್ ಟೆನ್ಶನ್ ಬಿಡಿ ನ್ಯಾಚುರಲ್ ಪರಿಹಾರ ಟ್ರೈ ಮಾಡಿ

ತುಂಬಾ ಕೂದಲು ಉದುರುತ್ತಿದೆ ಅಂತ ಚಿಂತೆ ಶುರುವಾಗಿದ್ಯಾ? ಕೂದಲು ಯಾಕೆ ಉದುರುತ್ತೆ? ಈ ಸಮಸ್ಯೆಗೆ ನೈಸರ್ಗಿಕ ಮದ್ದು ಏನು? ಯಾವೆಲ್ಲಾ ಆಹಾರವನ್ನೂ ಸೇವಿಸಬೇಕು? ಹೇಗೆ ಕೂದಲಿನ ರಕ್ಷಣೆ ಮಾಡಬೇಕು ಎನ್ನುವ ಚಿಂತೆಯಲ್ಲಿದ್ದೀರಾ? ಏನಪ್ಪಾ ಮಾಡೋದು ಈ ಸಮಸ್ಯೆಗೆ ಅಂತ ಯೋಚನೆ ಮಾಡೋದನ್ನ ಬಿಡಿ.

ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ ಅಂದ್ರೆ ಅದು ಹೇರ್ ಫಾಲ್. ದೇಹಕ್ಕೆ ಆರೋಗ್ಯಕರ, ಪೌಷ್ಠಿಕಾಂಶವುಳ್ಳ ಆಹಾರ ಸೇವಿಸದಿದ್ದರೆ ಈ ಹೇರ್ ಫಾಲ್ ಸಮಸ್ಯೆ ಬರುತ್ತದೆ. ಅಲ್ಲದೆ ಅತಿಯಾದ ಯೋಚನೆ, ನಿದ್ರಾಹೀನತೆ ಹಾಗೂ ಟೆನ್ಶನ್‍ನಿಂದ ಕೂಡ ಕೂದಲು ಉದುರೋಕೆ ಶುರುವಾಗುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಕೂದಲು ಉದುರತ್ತೆ. ಆದ್ರೆ ಕೂದಲು ಉದುರಿರುವ ಸ್ಥಳದಲ್ಲಿ ಮತ್ತೆ ಕೂದಲು ಬೆಳೆಯದಿದ್ದರೆ ಅದಕ್ಕೆ ಹೇರ್ ಫಾಲ್ ಸಮಸ್ಯೆ ಎನ್ನುತ್ತಾರೆ.

ನಾವು ತಿಳಿಸುವ ಸುಲಭ ಹಾಗೂ ನೈಸರ್ಗಿಕ ಮದ್ದನ್ನು ಹಾಗೂ ಕೆಲವು ಆರೋಗ್ಯದ ಸಲಹೆಯನ್ನು ಪಾಲಿಸಿದರೆ ನೀವು ನಿಮ್ಮ ಹೇರ್ ಫಾಲ್ ಸಮಸ್ಯೆಯಿಂದ ಹೊರಬರಬಹುದು. ಹೌದು ಆ ಸುಲಭ, ನೈಸರ್ಗಿಕ ಸಲಹೆಗಳು ಇಲ್ಲಿವೆ ನೋಡಿ.

ಯಾವೆಲ್ಲಾ ವಿಟಮಿನ್ಸ್ ಬರಿತ ಆಹಾರ ಸೇವಿಸಬೇಕು? 

ಹೇರ್ ಫಾಲ್ ನಿಯಂತ್ರಿಸಲು ವಿಟಿಮಿನ್-ಎ, ವಿಟಮಿನ್-ಬಿ, ಓಮೆಗಾ-3 ಹಾಗೂ ವಿಟಮಿನ್-ಇ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇದರಿಂದ ಕೂದಲ ಬೆಳವಣಿಗೆಗೆ ಉತ್ತಮ ವಿಟಮಿನ್ ಅಂಶ ದೊರಕಿ ಹೇರ್ ಫಾಲ್ ಕಡಿಮೆಯಾಗುತ್ತದೆ.

ಆಂಟಿ ಆಕ್ಸಿಡೆಂಟ್ ಗುಣಗಳುಳ್ಳ ವಿಟಮಿನ್-ಎ ಪದಾರ್ಥಗಳು ಆರೋಗ್ಯಕರ ಕೂದಲು ಮತ್ತು ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಸಿಹಿ ಆಲೂಗೆಡ್ಡೆ, ಕ್ಯಾರೆಟ್, ಕರಿಬೇವಿನ ಸೊಪ್ಪು, ಒಣಗಿದ ಏಪ್ರಿಕಾಟ್, ಸ್ವೀಟ್ ಕೆಂಪು ಮೆಣಸು, ಟ್ಯೂನಾ ಮೀನು, ಉಷ್ಣವಲಯದ ಹಣ್ಣುಗಳು(ಮಾವು) ವಿಟಮಿನ್-ಎ ಅಂಶವನ್ನು ಒಳಗೊಂಡಿರುತ್ತದೆ. ಇದು ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ನಷ್ಟವನ್ನು ತಡೆಯುತ್ತದೆ.

ಮೊಟ್ಟೆ, ಮೀನು, ಮತ್ತು ಹಾಲು ನಮ್ಮ ಆಹಾರದಲ್ಲಿ ಒಮೆಗಾ -3 ಅಂಶವಿರುತ್ತದೆ. ಬೀಜಗಳು (ಬಾದಾಮಿ), ಶೆಲ್ಫಿಶ್, ಮೀನು, ಆಲಿವ್ ಎಣ್ಣೆ, ಬ್ರೊಕೊಲಿನಲ್ಲಿ ವಿಟಮಿನ್ ಇ ಅಂಶ ಅಡಕವಾಗಿರುತ್ತದೆ. ವಿಟಮಿನ್ ಇ ಆರೋಗ್ಯ ಸುಧಾರಣೆಗೆ ಸಹಾಯ ಮಾಡಿ ದೇಹದಲ್ಲಿ ರಕ್ತದ ಸಂಚಲನವನ್ನು ಉತ್ತಮಗೊಳಿಸುತ್ತದೆ.

ಮಾಂಸ, ಮೊಟ್ಟೆಗಳು, ಮೀನುಗಳು ಅಥವಾ ಡೈರಿ ಆಹಾರಗಳು ವಿಟಮಿನ್-ಬಿಯಿಂದ ಸಮೃದ್ಧವಾಗಿವೆ. ಈ ವಿಟಮಿನ್‍ಗಳು ಮೆಲನಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತವೆ, ಇದು ಕೂದಲಿಗೆ ಆರೋಗ್ಯಕರ ಬಣ್ಣವನ್ನು ನೀಡುತ್ತದೆ. ಜೊತೆಗೆ ರಕ್ತ ಸಂಚಲವನ್ನು ಸುಧಾರಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ನಿಲ್ಲುಸುತ್ತದೆ.

ಹೆಡ್ ಮಸಾಜ್
ಪ್ರತಿ ನಿತ್ಯ 15 ನಿಮಿಷಗಳ ಕಾಲ ನಿಮ್ಮ ತಲೆಯನ್ನು ಮಸಾಜ್ ಮಾಡುವುದರಿಂದ ನೆತ್ತಿಯಲ್ಲಿ ರಕ್ತ ಸಂಚಲನ ಉತ್ತಮ ರೀತಿಯಲ್ಲಿ ಆಗುತ್ತದೆ. ತಲೆ ಮಸಾಜ್ ಮಾಡಲು ತೆಂಗಿನ ಎಣ್ಣೆ ಅಥವಾ ಬಾದಾಮಿ ತೈಲವನ್ನು ಬಳಸಿದರೆ ಉತ್ತಮ. ಯಾಕೆಂದರೆ ಬಾದಾಮಿ ತೈಲ ನಿಮ್ಮ ನೆತ್ತಿಯನ್ನು ಮೃದುಗೊಳಿಸುವುದು. ಸಾಧ್ಯವಾದರೆ, ವಾರಕ್ಕೆ ಕನಿಷ್ಠ ಎರಡು ಬಾರಿ ಕೂದಲು ಉದುರುವಿಕೆಯನ್ನು ನಿಲ್ಲಿಸಲು ಬಾದಾಮಿ ತೈಲದಿಂದ ತಲೆಗೆ ಮಸಾಜ್ ಮಾಡಿಕೊಳ್ಳಿ ಉತ್ತಮ ಫಲಿತಾಂಶ ಪಡೆಯಿರಿ.

ಮೊಟ್ಟೆ
ವಾರದಲ್ಲಿ ಎರಡು ಬಾರಿ ಮೊಟ್ಟೆಯ ಬಿಳಿಯ ಬಿಳಿಯ ಭಾಗವನ್ನು ಬೇರ್ಪಡಿಸಿ ಅದನ್ನು ನಿಮ್ಮ ನೆತ್ತಿಯನ್ನು ಮಸಾಜ್ ಮಾಡುವುದರಿಂದ ಇದು ನಿಮ್ಮ ಕೂದಲನ್ನು ಬಲಪಡಿಸುತ್ತದೆ ಮತ್ತು ಪೋಷಣೆ ನೀಡುತ್ತದೆ. ಕೂದಲು ಉದುರುವಿಕೆಯನ್ನು ತಡೆಗಟ್ಟಿ ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಬಿಸಿ ತೈಲ ಮಸಾಜ್
ತೆಂಗಿನ ಎಣ್ಣೆ, ಆಲಿವ್ ಎಣ್ಣೆ ಅಥವಾ ಕ್ಯಾನೋಲ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಕೊಂಚ ಬಿಸಿ ಮಾಡಿ, ಕೆಲವು ನಿಮಿಷಗಳ ಕಾಲ ಈ ಬಿಸಿ ಎಣ್ಣೆಯಿಂದ ನಿಮ್ಮ ನೆತ್ತಿಯನ್ನು ಮಸಾಜ್ ಮಾಡಿ. ಬಳಿಕ ಒಂದು ಗಂಟೆ ಬಿಟ್ಟು ತಲೆ ಸ್ನಾನ ಮಾಡಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಹಾಗೂ ಕೂದಲ ಬೆಳವಣಿಗೆ ಆಗಲು ಕೂಡ ಇದು ಸಹಾಯ ಮಾಡುತ್ತದೆ.

ನೈಸರ್ಗಿಕ ರಸಗಳು
ಬೆಳ್ಳುಳ್ಳಿ ರಸ, ಈರುಳ್ಳಿ ರಸ ಅಥವಾ ಶುಂಠಿಯ ರಸವನ್ನು ತೆಗೆದುಕೊಂಡು ಕೆಲವು ನಿಮಿಷಗಳ ಕಾಲ ನಿಮ್ಮ ನೆತ್ತಿಯನ್ನು ಮಸಾಜ್ ಮಾಡಿ. ಇದು ಉತ್ತಮ ಕೂದಲು ಬೆಳವಣಿಗೆಯನ್ನು ಸಹಾಯಕಾರಿ ಹಾಗೂ ಕೂದಲು ಉದುರುವುದನ್ನು ತಡೆಯುತ್ತದೆ.

ಯೋಗಾಸನ
ಕೂದಲು ಉದುರುವಿಕೆಯನ್ನು ತಡೆಯಲು ಮತ್ತು ಕೂದಲ ಬೆಳವಣಿಗೆಯನ್ನು ಸುಧಾರಿಸಲು ಖಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ಅಥವಾ ಸಂಜೆ ಯೋಗಾಸನ ಮಾಡಬೇಕು. ಯೋಗಾಸನ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ.

1. ಸೂರ್ಯನಮಸ್ಕಾರ
2. ವಜ್ರಾಸನ
3. ಸರ್ವಂಗಾಸನ
4. ಹಲಾಸನ
5. ಪ್ರಾಣಾಯಾಮ ಮಾಡಿದರೆ ಉಳ್ಳೆದು.

ಕೂದಲು ಉದುರುವಿಕೆಯನ್ನು ನೈಸರ್ಗಿಕವಾಗಿ ನಿಲ್ಲಿಸುವುದರಲ್ಲಿ ಪ್ರಾಣಾಯಾಮ ಪ್ರಮುಖ ಪಾತ್ರ ವಹಿಸುತ್ತದೆ. ನಿತ್ಯವೂ ಪ್ರಾಣಾಯಾಮ ಮಾಡುವುದರಿಂದ ಒತ್ತಡ ಮತ್ತು ಖಿನ್ನತೆ ಕಡಿಮೆಯಾಗುತ್ತದೆ. ನಿಮ್ಮ ಒತ್ತಡ ಮತ್ತು ಖಿನ್ನತೆಯನ್ನು ನೀವು ಕಡಿಮೆ ಮಾಡಿದರೆ, ನೀವು ಕೂದಲ ಉದುರುವಿಕೆಯನ್ನು ಕಡಿಮೆಗೊಳಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಒತ್ತಡ ಮತ್ತು ಖಿನ್ನತೆಯೇ ಹೇರ್ ಫಾಲ್‍ಗೆ ಕಾರಣವಾಗಿರುತ್ತದೆ.

Leave a Reply

Your email address will not be published. Required fields are marked *