Connect with us

ಕೋವಿಶೀಲ್ಡ್ 2ನೇ ಡೋಸ್‍ಗೆ ಮುಂಗಡ ನೋಂದಣಿ ಅಗತ್ಯವಿಲ್ಲ

ಕೋವಿಶೀಲ್ಡ್ 2ನೇ ಡೋಸ್‍ಗೆ ಮುಂಗಡ ನೋಂದಣಿ ಅಗತ್ಯವಿಲ್ಲ

– ಕೋವ್ಯಾಕ್ಸಿನ್ ಮೊದಲ ಡೋಸ್ ಲಭ್ಯವಿಲ್ಲ

ಬೆಂಗಳೂರು: ಕೋವಿಶೀಲ್ಡ್ ಎರಡನೇ ಡೋಸ್ ಲಸಿಕೆಗೆ ಮುಂಗಡ ನೋಂದಣಿ ಅಗತ್ಯವಿಲ್ಲ ಹತ್ತಿರದ ಕೋವಿಡ್-19 ಲಸಿಕಾ ಕೇಂದ್ರಕ್ಕೆ ನೇರವಾಗಿ ತೆರಳಿ ಹಾಕಿಸಿಕೊಳ್ಳಬಹುದು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ಮಿಷನ್ ಸ್ಪಷ್ಟಪಡಿಸಿದೆ.

ಲಸಿಕಾ ಅಭಿಯಾನದ ಬಗ್ಗೆ ಕೆಲವು ಗೊಂದಲಗಳಿರುವ ಹಿನ್ನೆಲೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಮಿಷನ್ ಪತ್ರಿಕಾ ಪಕಟಣೆ ಮೂಲಕ ಲಸಿಕೆ ಅಭಿಯಾನದ ಬಗ್ಗೆ ಸ್ಪಷ್ಟೀಕರಣ ನೀಡಿದೆ. 45 ವರ್ಷ ಮೇಲ್ಪಟ್ಟವರು ಕೋವಿಶೀಲ್ಡ್ ಮೊದಲನೇ ಡೋಸ್ ಪಡೆಯಲು ನಗರ ಪ್ರದೇಶಗಳಲ್ಲಿ ಆನ್‍ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಆನ್‍ಸೈಟ್ ನೋಂದಣಿ ಮಾಡಿಸಿ ಲಸಿಕೆ ಪಡೆಯಬಹುದು. 45 ವರ್ಷ ಮೇಲ್ಪಟ್ಟವರು ಕೋವಿಶೀಲ್ಡ್ ಎರಡನೇ ಡೋಸ್ ಲಸಿಕೆ ಪಡೆಯಲು ಮುಂಗಡ ನೋಂದಣಿ ಅಗತ್ಯವಿಲ್ಲ ಹತ್ತಿರದ ಕೋವಿಡ್-19 ಲಸಿಕಾ ಕೇಂದ್ರಕ್ಕೆ ನೇರವಾಗಿ ತೆರಳಿ ವ್ಯಾಕ್ಸಿನ್ ಹಾಕಿಸಿಕೊಳ್ಳಬಹುದು ಎಂದು ತಿಳಿಸಿದೆ.

45 ವರ್ಷ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಮೊದಲನೇ ಡೋಸ್ ಸದ್ಯಕ್ಕೆ ಲಭ್ಯವಿರುವುದಿಲ್ಲ. 45 ವರ್ಷ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಎರಡನೇ ಡೋಸ್ ಫಲಾನುಭವಿಗಳಿಗೆ ಎಸ್.ಎಮ್.ಎಸ್ ಕಳುಹಿಸಲಾಗುತ್ತದೆ. ಎಸ್.ಎಮ್.ಎಸ್ ನಲ್ಲಿ ತಿಳಿಸಲಾದ ಕೋವಿಡ್-19 ಲಸಿಕಾಕರಣ ಕೇಂದ್ರದಲ್ಲಿ ನಿಗದಿತ ಸಮಯಕ್ಕೆ ಫಲಾನುಭವಿಗಳು ಲಸಿಕೆ ಪಡೆಯಬಹುದು ಎಂದು ವಿವರಿಸಿದೆ.

18-44 ವಯಸ್ಸಿನ ಜನಸಾಮಾನ್ಯರಿಗೆ ಸದ್ಯಕ್ಕೆ ಲಸಿಕೆ ಲಭ್ಯವಿರುವುದಿಲ್ಲ. ಆದರೆ ರಾಜ್ಯ ಸರ್ಕಾರ ಗುರುತಿಸಿರುವ ಕೋವಿಡ್-19 ಮುಂಚೂಣಿ ಕಾರ್ಯಕರ್ತರಿಗೆ, ದುರ್ಬಲ ಗುಂಪಿನವರಿಗೆ ಮತ್ತು ಆದ್ಯತೆ ಗುಂಪಿನವರಿಗೆ ಲಸಿಕೆ ಹಾಕಲಾಗುತ್ತಿದೆ. ಆಯಾ ಗುಂಪಿನ ನಿಯೋಜಿತ ನೋಡಲ್ ಅಧಿಕಾರಿಗಳು ಲಸಿಕೆ ಹಾಕುವ ದಿನಾಂಕ ಮತ್ತು ಸಮಯದ ಮಾಹಿತಿಯನ್ನು ನೀಡುತ್ತಾರೆ ಎಂದು ಹೇಳಿದೆ.

Advertisement
Advertisement