Connect with us

Bengaluru City

ಪತಿಯ ಫೋಟೋ ಹಂಚಿಕೊಂಡು ವೈದ್ಯರ ದಿನಕ್ಕೆ ಶುಭ ಕೋರಿದ ಸಂಜನಾ

Published

on

Share this

ಬೆಂಗಳೂರು: ಇಂದು ದೇಶದೆಲ್ಲಡೆ ವೈದ್ಯರ ದಿನಾಚರಣೆ ಆಚರಿಸುತ್ತಿದ್ದು, ಕೊರೊನಾ ಸಂಕಷ್ಟದ ಸಮಯದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕೆಲಸ ಮಾಡಿದ ವೈದ್ಯರನ್ನು ಸ್ಮರಿಸಲಾಗುತ್ತಿದೆ. ಅದೇ ರೀತಿ ನಟಿ ಸಂಜನಾ ಗಲ್ರಾನಿ ತಮ್ಮ ಪತಿಯ ಫೋಟೋ ಹಂಚಿಕೊಂಡು ವೈದ್ಯರ ದಿನಕ್ಕೆ ಶುಭ ಕೋರಿದ್ದಾರೆ.

ಪತಿಯ ಜೊತೆ ತಾವಿರುವ ಫೋಟೋಗಳನ್ನು ಹಂಚಿಕೊಂಡು ಭಾವನಾತ್ಮಕವಾಗಿ ಬರೆದುಕೊಳ್ಳುವ ಮೂಲಕ ಸಂಜನಾ ವೈದ್ಯರ ದಿನದ ಶುಭಾಶಯ ತಿಳಿಸಿದ್ದಾರೆ. ವೈದ್ಯರೇ ‘ರಿಯಲ್ ಹೀರೋ’ಗಳು, ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ಇದನ್ನು ಅವರು ನಿರೂಪಿಸಿದ್ದಾರೆ ಸಹ. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ದೇವರಂತೆ ಇತರರ ಪ್ರಾಣ ಉಳಿಸಿದ್ದಾರೆ ಎಂದು ಹೇಳಿದ್ದಾರೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಸಾವಿರಾರು ವೈದ್ಯರು, ನರ್ಸ್‍ಗಳು ಜೀವ ತ್ಯಾಗ ಮಾಡಿದ್ದಾರೆ. ವ್ಯಾಸ್ಕಲರ್ ಸರ್ಜನ್ ಪತ್ನಿಯಾದ ನಾನು, ಕೊರೊನಾ ಪೀಕ್‍ನಲ್ಲಿದ್ದಾಗ ತಿಂಗಳಿಗೆ ಒಮ್ಮೆಯಾದರೂ ರಜೆ ತೆಗೆದುಕೊಳ್ಳಿ ಎಂದು ಹಲವು ಬಾರಿ ನನ್ನ ಪತಿಗೆ ಹೇಳುತ್ತಿದ್ದೆ. ಈ ಕುರಿತು ಹಲವು ಬಾರಿ ವಾಗ್ವಾದಗಳನ್ನೂ ಮಾಡಿಕೊಂಡಿದ್ದೇವೆ. ಈ ವೇಳೆ ಅವರು ಸ್ಪಷ್ಟವಾಗಿ ನನಗೆ ಹೇಳಿದ್ದರು. ನನ್ನ ಜೀವ ಇರುವುದು ಜನರ ಸೇವೆ ಮಾಡಲು, ಇದೇ ನನ್ನ ಪ್ರಮುಖ ಆದ್ಯತೆ. ಇದು ನನ್ನ ಕುಟುಂಬಕ್ಕಿಂತಲೂ ಮಿಗಿಲಾದದ್ದು ಎಂದಿದ್ದರು.

ಇತರ ಮಹಿಳೆಯರಂತೆ ಕುಟುಂಬವೇ ನನ್ನ ಮೊದಲ ಆದ್ಯತೆ, ನಂತರ ಬೇರೆಯವರ ವಿಷಯ ಎಂಬುದು ನನ್ನ ವಾದವಾಗಿತ್ತು. ಜೀವನ, ಮದುವೆ ಹಾಗೂ ಸಹಭಾಗಿತ್ವ ಅರ್ಥೈಸಿಕೊಳ್ಳುವುದರ ಮೇಲೆ ನಿಂತಿದೆ. ಪರಸ್ಪರರ ಆಲೋಚನಾ ಪ್ರಕ್ರಿಯೆಯನ್ನು ಸರಿಹೊಂದಿಸುವುದು ಹಾಗೂ ಅವರ ನಿರ್ಧಾರಗಳನ್ನು ಗೌರವಿಸುವುದಾಗಿದೆ ಎಂದು ಸಂಜನಾ ಬರೆದುಕೊಂಡಿದ್ದಾರೆ.

ಡಾ.ಅಜೀಜ್ ಪಾಶಾ ನೀವು ನನ್ನ ಪ್ರೇರಣೆ ಮಾತ್ರವಲ್ಲ, ಸಾಂಕ್ರಾಮಿಕ ರೋಗದ ಭಯವನ್ನು ಹೋಗಲಾಡಿಸಿ, ಫ್ರಂಟ್‍ಲೈನ್ ಕೆಲಸಗಾರ್ತಿಯಾಗಿ ಸೇವೆ ಸಲ್ಲಿಸಲು ನನ್ನನ್ನು ಉತ್ತೇಜಿಸಿದಿರಿ. ಲಾಕ್‍ಡೌನ್ ಸಮಯದಲ್ಲಿ ಅಗತ್ಯವಿರುವವರಿಗೆ ಪ್ರತಿ ದಿನ ಸಹಾಯ ಮಾಡಲು ಪ್ರೇರಣೆ ನೀಡಿದಿರಿ ಎಂದಿದ್ದಾರೆ.

ಈ ದಿನ ರಿಯಲ್ ಹೀರೋಗಳಿಗೆ ಶುಭ ಕೋರಲು ನಾನು ಇಚ್ಛಿಸುತ್ತೇನೆ. ವೆರಿ ಹ್ಯಾಪಿ ಡಾಕ್ಟರ್ಸ್ ಡೇ, ಕೋಟ್ಯಂತರ ಜನರ ಪ್ರಾಣ ಉಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಇತರರಿಗಿಂತ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದೀರಿ. ಎಲ್ಲದಕ್ಕೂ ಧನ್ಯವಾದಗಳು, ನಿಮ್ಮ ಪತ್ನಿಯಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಡಾಕ್ಟರ್ ಸಾಬ್ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement