Connect with us

ಕಾಂಗ್ರೆಸ್ ಪಕ್ಷ ಇರುವುದು ಟೀಕೆ ಮಾಡುವುದಕ್ಕೆ, ವಿರೋಧ ಮಾಡುವುದು ಅವರ ಗುಣ : ಕಟೀಲ್

ಕಾಂಗ್ರೆಸ್ ಪಕ್ಷ ಇರುವುದು ಟೀಕೆ ಮಾಡುವುದಕ್ಕೆ, ವಿರೋಧ ಮಾಡುವುದು ಅವರ ಗುಣ : ಕಟೀಲ್

– ಜನರು ಆಶೀರ್ವಾದ ಮಾಡಿ ಬಿಎಸ್‍ವೈ ಸಿ.ಎಂ ಸ್ಥಾನವನ್ನ ಕೊಟ್ಟಿದ್ದಾರೆ

ಹಾವೇರಿ: ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ. ನಮ್ಮೆಲ್ಲರ ಸರ್ವಸಮ್ಮತಿಯ ನಾಯಕ ಯಡಿಯೂರಪ್ಪನವರನ್ನು ಕೂಗಿ ಸಿಎಂ ಸ್ಥಾನಕ್ಕೆ ಕಳಿಸಿದ್ದಲ್ಲ. ಎರಡು ಕೋಟಿ ಜನರು ಆಶೀರ್ವಾದ ಮಾಡಿ ಆ ಸ್ಥಾನವನ್ನ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಹೇಳಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ರಾಜೀನಾಮೆ ಪ್ರಶ್ನೆಯೇ ಇಲ್ಲ: ರೇಣುಕಾಚಾರ್ಯ

ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯ ಬದಲಾವಣೆ, ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ. ಈ ಚರ್ಚೆಗಳು ಅಪ್ರಸ್ತುತ. ಯಡಿಯೂರಪ್ಪನವರು ಬಹಳ ಒಳ್ಳೆಯ ಸಂದೇಶವನ್ನ ಕೊಟ್ಟಿದ್ದಾರೆ. ಭಾರತೀಯ ಜನತಾ ಪಾರ್ಟಿಯ ವಿಶಿಷ್ಟತೆ ಅದು. ಕಾರ್ಯಕರ್ತರಿಂದ ಹಿಡಿದು ನಾಯಕರವರೆಗೆ ಯಾರೂ ಅಧಿಕಾರಕ್ಕಾಗಿ ಅಂಟಿ ಕೂತವರಲ್ಲ. ಪಾರ್ಟಿಯ ಸೂಚನೆಯ ಆಧಾರದ ಮೇಲೆ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಯಡಿಯೂರಪ್ಪ ನಮ್ಮೆಲ್ಲ ಕಾರ್ಯಕರ್ತರಿಗೆ ಆದರ್ಶಪ್ರಾಯರಾಗಿ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಇಂದು ಸಂಜೆ 5 ಗಂಟೆಗೆ ದೇಶವನ್ನು ಉದ್ದೇಶಿಸಿ ಮೋದಿ ಭಾಷಣ

 

ನಿನ್ನೆ ಸಚಿವ ಯೋಗೇಶ್ವರ್ ಅವರೂ ಹೇಳಿಕೆ ಕೊಟ್ಟಿದ್ದಾರೆ. ನಮ್ಮಲ್ಲಿ ಯಾವುದೇ ರೀತಿಯಲ್ಲಿ ಮುಖ್ಯಮಂತ್ರಿಗಳ ಬಗ್ಗೆ ಚರ್ಚೆ ಇಲ್ಲ. ಚರ್ಚೆ ಎಲ್ಲಿಂದ ಸೃಷ್ಟಿ ಆಗುತ್ತಿದೆ ಅಂತಾ ಆಶ್ಚರ್ಯ ಆಗುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಎರಡನೆ ದಿನಕ್ಕೆ ನಾಯಕತ್ವ ಬದಲಾವಣೆ ಅಂದರು. ಈಗ ಎರಡು ವರ್ಷ ಆಯ್ತು ಅವರೆ ಮುಖ್ಯಮಂತ್ರಿ ಆಗಿದ್ದಾರೆ. ಈ ಪ್ರಶ್ನೆ ಅಪ್ರಸ್ತುತ. ಶಾಸಕ ಯತ್ನಾಳ್ ಮೇಲೆ ಕ್ರಮ ತೆಗೆದುಕೊಳ್ಳುವುದು ನಮ್ಮದೊಂದು ಪ್ರಜಾಪ್ರಭುತ್ವ ಆಧಾರಿತ ಸಂಘಟನೆಯಾಗಿದೆ. ನಮ್ಮಲ್ಲಿ ವ್ಯವಸ್ಥೆಗಳಿವೆ, ಶಿಸ್ತು ಸಮಿತಿ ಈಗಾಗಲೇ ಎಚ್ಚರಿಕೆ ನೋಟಿಸ್ ಕೊಟ್ಟಿದೆ. ಒಬ್ಬ ಶಾಸಕನಿಗೆ ಮೂರು ಹಂತದ  ನೋಟಿಸ್‌ಗಳನ್ನ ಕೊಡಬೇಕಿದೆ. ಅದೆಲ್ಲಾ ಕಾರ್ಯ ನಡೆಯುತ್ತಿದೆ. ಇನ್ನಷ್ಟು ತಪ್ಪು ಮಾಡಿದರೆ ಮುಂದಿನ ಎಲ್ಲ ನಿರ್ಧಾರಗಳನ್ನ ಕೇಂದ್ರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದ್ದೇನೆ – ರೋಹಿಣಿ ಸಿಂಧೂರಿ

ಪೆಟ್ರೋಲ್, ಡಿಸೇಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಇರುವುದು ಟೀಕೆ ಮಾಡುವುದಕ್ಕಾಗಿದೆ. ವಿರೋಧ ಮಾಡುವುದು ಅವರ ಪಾರ್ಟಿ ಗುಣ ಆಗಿದೆ. ದೇಶದಲ್ಲಿ ಕೋವಿಡ್ ನಿಯಂತ್ರಣ ಮಾಡೋ ಕೆಲಸ ಮಾಡುತ್ತಿದೆ. ದೇಶದಲ್ಲಿ ಕೊರೊನಾ ಒಂದನೆ ಅಲೆ ಬಂದಾಗಲೂ ಆರ್ಥಿಕ ಕುಸಿತ ಕಾಣಲಿಲ್ಲ. ಈಗಲೂ ಆರ್ಥಿಕ ಕುಸಿತ ಕಂಡಿಲ್ಲ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ವಿಪರೀತ ಬೆಲೆ ಏರಿಕೆ ಇತ್ತು. ಆಗ ಯಾವುದೇ ಕೋವಿಡ್ ಇರಲಿಲ್ಲ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.

Advertisement
Advertisement