Connect with us

Bengaluru City

ಆರೋಪ ಕೇಳಿ ಶಾಕ್ ಆಗಿದೆ- ಸಾಧು ಕೋಕಿಲ

Published

on

ಬೆಂಗಳೂರು: ಮಸಾಜ್ ಸೆಂಟರ್ ನಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನುವ ಯುವತಿಯ ಆರೋಪವನ್ನು ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲ ಅವರು ತಿರಸ್ಕರಿಸಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿ ಯೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸ್ಪಷ್ಟನೆ ನೀಡಿದ ಅವರು, ನಾನು ಬೇರೆ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಚೆನ್ನೈಗೆ ತೆರಳಿದ್ದೇನೆ. ಈ ಸುದ್ದಿ ಕೇಳಿ ಶಾಕ್ ಆಗಿದೆ. ಆದರೆ ನಾನು ಯಾವುದೇ ಮಸಾಜ್ ಪಾರ್ಲರ್ ಗೆ ಹೋಗಲ್ಲ, ಆಕೆ ಯಾರೆಂದು ಗೊತ್ತಿಲ್ಲ ಎಂದರು.

ಯುವತಿ ಆರೋಪದ ಕುರಿತು ನನ್ನ ಕುಟುಂಬ ಸದಸ್ಯರು ಮಾಹಿತಿ ನೀಡಿದರು. ಆದರೆ ನಾವು ಕಲಾವಿದರಾಗಿರುವುದರಿಂದ ಹೆಚ್ಚು ಹೊರಗಡೆ ತೆರಳಲು ಸಾಧ್ಯವಾಗುವುದಿಲ್ಲ. ಅದ್ದರಿಂದ ನಾನು ಅವರನ್ನು ಮನೆಗೆ ಕರೆಸಿಕೊಳ್ಳುತ್ತೇನೆ. ಘಟನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾರು? ಏನು? ಎಂಬ ಮಾಹಿತಿ ಇಲ್ಲ. ಬೆಂಗಳೂರಿಗೆ ಹಿಂದುರಿದ ತಕ್ಷಣ ಘಟನೆ ಕುರಿತು ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು. ಇದನ್ನೂ ಓದಿ: ನನ್ನ ಮೇಲಿನ ಆರೋಪ ಅಚ್ಚರಿ, ದಿಗ್ಭ್ರಮೆ ಉಂಟು ಮಾಡಿದೆ: ನಟ ಮಂಡ್ಯ ರಮೇಶ್

ನಟ ಜಗ್ಗೇಶ್ ಟ್ವೀಟ್: ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲ ಹಾಗೂ ನಟ ಮಂಡ್ಯ ರಮೇಶ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಟ್ವೀಟ್ ಮಾಡಿ ಧೈರ್ಯ ಹೇಳಿದ್ದಾರೆ.

ಆರೋಪದ ಸತ್ಯಾಂಶ ತಿಳಿಯಲು ಪಾರ್ಲರ್ ನ ಸಿಸಿಟಿವಿ ದೃಶ್ಯವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಆಗ ರಮೇಶ್ ಅವರು ಆಪಾದನೆಯಿಂದ ಪಾರಾಗುತ್ತಾರೆ ಎಂಬ ಆಶಾಭಾವನೆ ಇದೆ. ಬರಿ ಬಾಯಿ ಮಾತಿನ ಆರೋಪಗಳಿಗೆ ಮಹತ್ವ ಕೊಡಬೇಡಿ. ಇತ್ತೀಚೆಗೆ ಸುಳ್ಳು ಆಪಾದನೆ, ಕಾನೂನು ದುರ್ಬಳಕೆ ಹೆಚ್ಚಾಗುತ್ತಿದೆ. ಆರೋಪ ಸುಳ್ಳಾದರೆ ಯಾರೇ ಆದರು ಕಠಿಣ ಕ್ರಮ ಕೈಗೊಳ್ಳಬೇಕು. ಧೈರ್ಯದಿಂದಿರಿ ರಮೇಶ್ ದೇವರಿದ್ದಾರೆ. ಸತ್ಯ ಹೊರಬರುತ್ತೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸ್ಟಾರ್ ಮಸಾಜ್ : ಮಂಡ್ಯ ರಮೇಶ್, ಸಾಧು ವಿರುದ್ಧ ಯುವತಿಯಿಂದ ದೂರು

https://www.youtube.com/watch?v=dpHAGiEYHLY