Connect with us

Crime

11 ಸಾವಿರ ಕನ್ನಡ ಪುಸ್ತಕಗಳಿದ್ದ ಗ್ರಂಥಾಲಯ ಸುಟ್ಟು ಹಾಕಿದ ಕಿಡಿಗೇಡಿಗಳು!

Published

on

– ಬಡ, ಅನಕ್ಷರಸ್ಥ ಸ್ಥಾಪಿಸಿದ್ದ ಲೈಬ್ರೆರಿ

ಮೈಸೂರು: ಮುಸ್ಲಿಂ ಸಮುದಾಯದ ಬಡ, ಅನಕ್ಷರಸ್ಥ ವ್ಯಕ್ತಿಯೊಬ್ಬರು ಕಷ್ಟಪಟ್ಟು ಸ್ಥಾಪಿಸಿದ್ದ 11 ಸಾವಿರ ಪುಸ್ತಕಗಳಿದ್ದ ಗ್ರಂಥಾಲಯವನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಸುಟ್ಟು ಹಾಕಿರೋ ಘಟನೆ ನಡೆದಿದೆ.

ಮೈಸೂರಿನ ರಾಜೀವ್ ನಗರದ ಸೈಯದ್ ಇಸಾಕ್ ಎಂಬವರು 11 ವರ್ಷಗಳ ಹಿಂದೆ ಈ ಗ್ರಂಥಾಲಯ ಸ್ಥಾಪಿಸಿದ್ದರು. ಕೂಲಿ ಕೆಲಸ, ಪೌರಕಾರ್ಮಿಕ ಕೆಲಸ ಮಾಡಿಕೊಂಡೆ ಮಕ್ಕಳಿಗೆ ಬಡಾವಣೆಯ ಮಕ್ಕಳಿಗೆ ಜ್ಞಾನರ್ಜನೆ ಮೂಡಿಸುವ ಸಲುವಾಗಿ 2011ರಲ್ಲಿ ಮೈಸೂರಿನ ರಾಜೀವ್‍ನಗರದಲ್ಲಿ ಗ್ರಂಥಾಲಯ ಸ್ಥಾಪಿಸಿದ್ದರು.

ತನ್ನ ಉಳಿತಾಯದ ಹಣದಲ್ಲಿ ಗುಡಿಸಲಿನಲ್ಲಿ ನಿರ್ಮಿಸಿದ್ದ ಸಯ್ಯದ್ ಇಸಾಕ್ ಗ್ರಂಥಾಲಯದಲ್ಲಿ ಭಗವದ್ಗೀತೆ, ಕನ್ನಡದಲ್ಲಿ ಕುರಾನ್, ಕನ್ನಡದಲ್ಲಿ ಬೈಬಲ್, ಸಂವಿಧಾನ ಪುಸ್ತಕಗಳು ಇದರಲ್ಲಿ ಇದ್ದವು. ಇದು ಮೈಸೂರಿನಲ್ಲಿ ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದ್ದ ಕನ್ನಡ ಗ್ರಂಥಾಲಯವಾಗಿತ್ತು.

ಚರಂಡಿ ಸ್ವಚ್ಚತೆ, ಮ್ಯಾನ್‍ಹೋಲ್ ಶುದ್ಧಿಕಾರ್ಯ ಮಾಡುವ ಸಯ್ಯದ್ ಇಸಾಕ್ ಅವರು ಬಡತನ ಇದ್ದು ಅನಕ್ಷರಸ್ಥರಾಗಿದ್ದರು ಕೂಡ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಈ ಗ್ರಂಥಾಲಯ ಸ್ಥಾಪಿಸಿದ್ದರು. ಈಗ ಈ ಗ್ರಂಥಾಲಯಕ್ಕೆ ಬೆಂಕಿ ಇಟ್ಟು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಘಟನೆಯಿಂದ ಸಯ್ಯದ್ ಇಸಾಕ್ ತೀವ್ರ ಬೇಸರಕ್ಕೀಡಾಗಿದ್ದಾರೆ.

Click to comment

Leave a Reply

Your email address will not be published. Required fields are marked *