Connect with us

Crime

ಮಳೆ ಅಬ್ಬರಕ್ಕೆ ರಸ್ತೆ ಕಾಣದೆ ಡಿವೈಡರ್ ಮೇಲೇರಿ ಪಲ್ಟಿ ಹೊಡೆದ ಕಾರು

Published

on

– ಕಾರಿನಲ್ಲಿದ್ದ ಐವರು ಗ್ರೇಟ್ ಎಸ್ಕೇಪ್

ಮೈಸೂರು: ಮಳೆ ಅಬ್ಬರದಿಂದಾಗಿ ರಸ್ತೆ ಕಾಣದೆ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಮೇಲೇರಿ ಉರುಳಿಬಿದ್ದ ಘಟನೆ ಹುಣಸೂರು ರಸ್ತೆಯಲ್ಲಿರುವ ಕಲಾಮಂದಿರದ ಬಳಿ ನಡೆದಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪವಾಡ ರೀತಿ ಬದುಕುಳಿದಿದ್ದಾರೆ. ಐವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವೇಳೆ ವಾಹನ ಸಂಚಾರ ದಟ್ಟಣೆ ಇರದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಇದನ್ನೂ ಓದಿ: ಎಣ್ಣೆ ಮತ್ತಲ್ಲಿ ಭಯಾನಕ ಅಪಘಾತ- ಕಾರಿನಲ್ಲಿದ್ದ ಐವರು ಗ್ರೇಟ್ ಎಸ್ಕೇಪ್


ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿ ಗುಡುಗು, ಸಿಡಿಲು ಸಮೇತ ಭಾರೀ ಮಳೆಯಾಗಿದೆ. ಪರಿಣಾಮ ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ರಸ್ತೆ ಕಾಣದೆ ಕಾರು ರಸ್ತೆ ಮಧ್ಯದಲ್ಲಿದ್ದ ಡಿವೈಡರ್ ಮೇಲೇರಿ ಪಲ್ಟಿ ಹೊಡೆದಿದೆ.

ಅಪಘಾತದ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀರು ಕಾರು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ವರುಣನ ಅಬ್ಬರಕ್ಕೆ ನಗರದ ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.