ಮೈಸೂರು ಸಿಲ್ಕ್‌ ಸೀರೆ ಧರಿಸಿ ದಸರಾಗೆ ಚಾಲನೆ ನೀಡಿದ ದ್ರೌಪದಿ ಮುರ್ಮು

- ಅರಮನೆ ನಗರಿಗೆ ಆಗಮಿಸಿದ ರಾಷ್ಟ್ರಪತಿಗೆ ಬೆಳ್ಳಿಯ ಚಾಮುಂಡೇಶ್ವರಿ ದೇವಿ ಮೂರ್ತಿ ಉಡುಗೊರೆ

Advertisements

ಮೈಸೂರು: ಮೈಸೂರು ಸಿಲ್ಕ್‌ ಧರಿಸಿ ವಿಶ್ವ ವಿಖ್ಯಾತ ದಸರಾವನ್ನು (Dasara) ಉದ್ಘಾಟನೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಉಡುಗೊರೆಯಾಗಿ ನೀಡಲಾಗಿದೆ.

Advertisements

ಚಾಮುಂಡೇಶ್ವರಿ ದೇವಿಯ ಮೂರ್ತಿ ಜೊತೆಗೆ ಮೈಸೂರು ರೇಷ್ಮೆ ಸೀರೆಯನ್ನು ಸಹ ರಾಷ್ಟ್ರಪತಿಗಳಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ರಾಷ್ಟ್ರಪತಿಗಳ ಭವನಕ್ಕೆ ಸಚಿವರು ತೆರಳಿದ ಸಂದರ್ಭದಲ್ಲಿ ಮೈಸೂರು ಸಿಲ್ಕ್ ಸೀರೆಯನ್ನು (Mysore Silk Saree) ಉಡುಗೊರೆಯನ್ನಾಗಿ ನೀಡಿ ಮೈಸೂರು ನೆಲದ ವಿಶೇಷತೆಯನ್ನು ರಾಷ್ಟ್ರಪತಿ ಭವನಕ್ಕೆ ತಲುಪಿಸಿದ್ದಾರೆ.

Advertisements

ವಿಶೇಷವೆಂದರೆ ಉಡುಗೊರೆ ನೀಡಿದ್ದ ಸುಮಾರು 70 ಸಾವಿರ ರೂ. ಬೆಲೆಯ ಮೈಸೂರು ರೇಷ್ಮೆ ಸೀರೆಯನ್ನುಟ್ಟುಕೊಂಡೇ ಸಾಂಸ್ಕೃತಿಕ ನಗರಿಗೆ ಆಗಮಿಸಿದ ರಾಷ್ಟ್ರಪತಿಗಳು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ದಸರಾ ಮಹೋತ್ಸವವನ್ನು ಉದ್ಘಾಟಿಸಿದರು. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಮೈಸೂರು ದಸರಾಗೆ ರಾಷ್ಟ್ರಪತಿಯಿಂದ ಚಾಲನೆ

ಸೆ.22 ರಂದು ಮೈಸೂರು ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್‌, ಸಂಸದ ಪ್ರತಾಪ್‌ ಸಿಂಗ ಅವರನ್ನು ಒಳಗೊಂಡ ಮೈಸೂರು ದಸರಾ ಸಮಿತಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಆಹ್ವಾನಿಸಿದ್ದರು. ಈ ಭೇಟಿಯ ಸಮದಯಲ್ಲಿ ಮೈಸೂರು ಸಿಲ್ಕ್‌ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು.

Advertisements

ರಾಷ್ಟ್ರಪತಿಯವರು ಬಿಳಿ ಸೀರೆ ಇಷ್ಟಪಡುತ್ತಾರೆ ಎಂಬುದನ್ನು ಅರಿತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಿ ಸ್ವಾಮ್ಯದ ಕೆ.ಎಸ್.ಐ.ಸಿ.ಯ ಸರ್ಕಾರಿ ರೇಷ್ಮೆ ಕಾರ್ಖಾನೆಗೆ ಈ ಉಡುಪು ತಯಾರಿಕೆಗೆ ಆದೇಶ ನೀಡಿ, ಸಿದ್ಧಪಡಿಸಲು ಸೂಚಿಸಿದ್ದರು. ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1912ರಲ್ಲಿ ನಿರ್ಮಿಸಿದ ರೇಷ್ಮೆ ಕಾರ್ಖಾನೆ ಎಂಬ ಹೆಮ್ಮೆ ಈ ಕಾರ್ಖಾನೆಗೆ ಇದೆ.

ಮೈಸೂರು ಸಿಲ್ಕ್ ಸೀರೆ ಬ್ರಾಂಡ್ ವಿಶ್ವಪ್ರಸಿದ್ಧ ಬ್ರಾಂಡ್ ಆಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಷ್ಟಪಡುವ ನೈಸರ್ಗಿಕ ಬಿಳಿ ಬಣ್ಣದ ಅಪ್ಪಟ ರೇಷ್ಮೆ ಮತ್ತು ಅಪ್ಪಟ ಚಿನ್ನದ ಎಳೆಗಳನ್ನು ಬಳಸಿ ತಯಾರಿಸಿದ ಈ ಉಡುಪನ್ನು ಗೌರವಸೂಚಕವಾಗಿ ಅವರಿಗೆ ಸಮರ್ಪಿಸಲಾಗಿತ್ತು.

ಇನ್ನೂ ರಾಷ್ಟ್ರಪತಿಗೆ ನೀಡಿದ ಉಡುಗೊರೆಯು 92.5% ಪರಿಶುದ್ಧ ಬೆಳ್ಳಿಯಿಂದ ಕೂಡಿರುವ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ರಾಜಸ್ಥಾನದ ಜೈಪುರ್‌ನ ಕರಕುಶಲಕಾರರಿಂದ ವಿನ್ಯಾಸಗೊಳಿಸಲಾಗಿದೆ. ಚಾಮುಂಡೇಶ್ವರಿ ದೇವಿಯ ಉಡುಗೊರೆ 4.25 ಕೆಜಿ ತೂಕವನ್ನು ಹೊಂದಿದೆ.

Live Tv

Advertisements
Exit mobile version