Connect with us

Latest

ಒಂದು ಹನಿ ನೀರು ಹೊರ ಬೀಳಲ್ಲ – ಮೈಸೂರು, ಬೆಂಗಳೂರು ಹಳಿ ನಿರ್ವಹಣೆಗೆ ಗೋಯಲ್‌ ಮೆಚ್ಚುಗೆ

Published

on

ಮೈಸೂರು:ಬೆಂಗಳೂರು- ಮೈಸೂರು  ನಡುವಿನ ರೈಲ್ವೇ ಹಳಿ ನಿರ್ವಹಣೆಗೆ ಕೇಂದ್ರ ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿರೊವ ಪಿಯೂಷ್‌ ಗೋಯಲ್‌, ಅತಿ ವೇಗವಾಗಿ ಚಲಿಸುವ ರೈಲಿನಲ್ಲಿ ಒಂದು ಗ್ಲಾಸ್ ನ ನೀರು ಇಟ್ಟರೆ ಒಂದು ಹನಿಯು ಸಹಾ ಹೊರ ಬೀಳುವುದಿಲ್ಲ, ಅಷ್ಟು ಸರಾಗವಾಗಿದೆ. ಉತ್ತಮ ಮಟ್ಟದ ರೈಲ್ವೆ ಟ್ರಾಕ್ ನಿರ್ವಹಣೆಯಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಈ ಕುರಿತ ಪ್ರಯೋಗದ ವೀಡಿಯೊ ಹಾಕಿ ನಿರ್ವಹಣೆ ಫಲಿತಾಂಶ ನೀವೆ ನೋಡಿ ಎಂದು ಗೋಯಲ್‌ ಬರೆದುಕೊಂಡಿದ್ದಾರೆ.

ವಿಡಿಯೋವನ್ನು ಇಲ್ಲಿಯವರೆಗೆ 1.66 ಲಕ್ಷ ಮಂದಿ ವೀಕ್ಷಿಸಿದ್ದಾರೆ. 21 ಸಾವಿರಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದು, 3 ಸಾವಿರ ಮಂದಿ ರೀಟ್ವೀಟ್‌ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *