Connect with us

Cinema

ಫುಟ್‍ಪಾತ್‍ನಲ್ಲಿ ಕುಳಿತು ಟೀ ಕುಡಿದ ನಟ ಶಿವರಾಜ್‍ಕುಮಾರ್

Published

on

ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮೈಸೂರಿನ ಫುಟ್‍ಪಾತ್ ಅಂಗಡಿಯಲ್ಲಿ ಸಾಮಾನ್ಯ ಜನರಂತೆ ಕುಳಿತು ಟೀ ಕುಡಿದು ಸರಳತೆ ಮೆರೆದಿದ್ದಾರೆ.

ಭಜರಂಗಿ 2 ಸಿನಿಮಾದ ಶೂಟಿಂಗ್‍ಗಾಗಿ ಶಿವರಾಜ್‍ಕುಮಾರ್ ಮೈಸೂರಿಗೆ ತೆರಳಿದ್ದಾರೆ. ವೀಕೆಂಡ್‍ನಲ್ಲಿ ಮೈಸೂರು ಸುತ್ತಮುತ್ತ ರೌಂಡ್ ಹೊಡೆಯುವ ವೇಳೆ ರಸ್ತೆ ಬದಿ ಕುಳಿತು ಟೀ ಕುಡಿದು ಅಭಿಮಾನಿಗಳ ಕುಶಲೋಪರಿ ವಿಚಾರಿಸಿದ್ದಾರೆ.

ಮೈಸೂರಿನ ಮಾತೃಮಂಡಳಿ ಸರ್ಕಲ್ ಬಳಿ ಇರುವ ತಮ್ಮ ಅಭಿಮಾನಿ ಮಾದೇಶ್ ಎಂಬುವವರ ಟೀ ಅಂಗಡಿಗೆ ಹೋಗಿದ್ದಾರೆ. ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘದ ಮಾದೇಶ್ ಡಾ.ರಾಜ್ ಟೀ ಸ್ಟಾಲ್ ನಡೆಸುತ್ತಿದ್ದಾರೆ. ಫುಟ್‍ಪಾತ್ ಟೀ ಅಂಗಡಿಗೆ ಹೋಗಿ ಸಾಮಾನ್ಯನಂತೆ ಕುಳಿತು ಶಿವರಾಜ್‍ಕುಮಾರ್ ಟೀ ಕುಡಿದಿದ್ದಾರೆ. 20 ನಿಮಿಷಕ್ಕೂ ಹೆಚ್ಚು ಅಭಿಮಾನಿಗಳ ಜೊತೆ ಕಾಲ ಕಳೆದಿದ್ದಾರೆ.

ಶಿವರಾಜ್‍ಕುಮಾರ್ ಅವರ ಸರಳತೆ ಕಂಡು ಅಭಿಮಾನಿಗಳು ಅಚ್ಚರಿ ಮತ್ತು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಈ ವೇಳೆ ಶಿವರಾಜ್‍ಕುಮಾರ್ ಜೊತೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದ ಪ್ರಸಂಗ ನಡೆಯಿತು.

Click to comment

Leave a Reply

Your email address will not be published. Required fields are marked *