Tuesday, 19th November 2019

Recent News

ವಾರದಲ್ಲಿ ಐದು ಬಾರಿ ಮೈಸೂರು-ಬೆಂಗಳೂರು ವಿಮಾನಯಾನ ಆರಂಭ

ಮೈಸೂರು: ಇಂದಿನಿಂದ ವಾರಕ್ಕೆ 5 ಬಾರಿ ಮೈಸೂರು-ಬೆಂಗಳೂರು ನಡುವೆ ವಿಮಾನ ಸೇವೆ ಆರಂಭವಾಗಿದೆ.

ಕೇಂದ್ರ ಸರ್ಕಾರದ ವಿಮಾನಯಾನದಲ್ಲಿ ಪಗ್ರತಿ ಸಾಧಿಸುವ ದೃಷ್ಟಿಯಿಂದ ಜಾರಿ ಮಾಡಿದ ಅಗ್ಗದ ಬೆಲೆಯ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯ ಭಾಗವಾಗಿ ಈ ಸೇವೆ ಆರಂಭಗೊಂಡಿದೆ. ಈ ಸೇವೆಗೆ ಉನ್ನತ ಶಿಕ್ಷಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಚಾಲನೆ ನೀಡಿದರು.

ಇಂಡಿಯನ್ ಏರ್‍ಲೈನ್ಸ್ ಸಂಸ್ಥೆಗೆ ಸೇರಿದ ವಿಮಾನ ವಾರದಲ್ಲಿ 5 ದಿನ ಬೆಳಿಗ್ಗೆ 11.15ಕ್ಕೆ ಮೈಸೂರಿಗೆ ಆಗಮಿಸಿ ಮತ್ತೆ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ತೆರಳಲಿದೆ. ಆರಂಭವಾದ ಮೊದಲ ದಿನವೇ ಬೆಂಗಳೂರಿಗೆ ಹಲವು ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಈಗಾಗಲೇ ಮೈಸೂರು ಹೈದರಾಬಾದ್ ಹಾಗೂ ಚೆನ್ನೈ ನಡುವೆ ಕೂಡ ವಿಮಾನ ಹಾರಾಟ ಶುರುವಾಗಿದೆ.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಿ.ಟಿ ದೇವೇಗೌಡರು, ಇಂದು ಮೈಸೂರು ಟು ಬೆಂಗಳೂರು ಎರಡನೇ ವಿಮಾನಯಾನ ಸೇವೆಗೆ ಚಾಲನೆ ನೀಡಲಾಗಿದೆ. ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ವಿಚಾರ ಕುರಿತು ಸರ್ಕಾರದೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುಲಾಗುವುದು. ಏರ್ ಪೋರ್ಟ್ ವಿಸ್ತರಣೆಗೆ 280 ಎಕರೆ ಭೂಸ್ವಾಧೀನ ಮಾಡಿ ಕೈಗಾರಿಕಾ ಇಲಾಖೆಗೆ ನೀಡಿದ್ದೇವೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಸಾರಾ. ಮಹೇಶ್ ಮತ್ತು ಸಂಸದ ಪ್ರತಾಪ್ ಸಿಂಹ ಭಾಗಿಯಾಗಿದ್ದರು. ಇದನ್ನು ಓದಿ: ದೇಶದ ಸಣ್ಣ ವಿಮಾನ ನಿಲ್ದಾಣಗಳಲ್ಲಿ ಮೊಬೈಲ್ ಎಟಿಸಿ: ಹೇಗೆ ಕಾರ್ಯನಿರ್ವಹಿಸುತ್ತೆ? ವಿಡಿಯೋ ನೋಡಿ

ಏನಿದು ಉಡಾನ್ ಯೋಜನೆ?
ಅತ್ಯಂತ ಕಡಿಮೆ ದರದಲ್ಲಿ ಸಣ್ಣ ನಗರಗಳ ನಡುವೆ ವಿಮಾನ ಪ್ರಯಾಣ ಮಾಡಬಹುದಾದ ಉಡಾನ್ ಯೋಜನೆ ಕೇಂದ್ರ ಸರ್ಕಾರ 2017ರ ಏಪ್ರಿಲ್‍ನಲ್ಲಿ ಆರಂಭಿಸಿತ್ತು. ಉಡಾನ್‍ನ ವಿಸ್ತೃತ ರೂಪ ಉಡೇ ದೇಶ್ ಕಾ ಆಮ್ ನಾಗರೀಕ್. ಪ್ರದೇಶಿಕ ಸಂಪರ್ಕ ಯೋಜನೆಯಾದ ಉಡಾನ್ ಯೋಜನೆಯಡಿ ಸದ್ಯಕ್ಕೆ ಹೆಚ್ಚು ಸಂಪರ್ಕವಿರದ ಸಣ್ಣ ನಗರಗಳ ನುಡವೆ ಕಡಿಮೆ ದರದಲ್ಲಿ ಪ್ರಯಾಣ ಮಾಡಬಹುದಾಗಿದೆ.

2014ರ ಏಪ್ರಿಲ್ 24 ರಂದು ಪ್ರಧಾನಿ ಮೋದಿ ದೆಹಲಿ ಹಗೂ ಶಿಮ್ಲಾ ನಡುವಿನ ವಿಮಾನ ಹಾರಾಟಕ್ಕೆ ಚಾಲನೆ ನೀಡಿದ್ದರು. ಚಾಲನೆ ನೀಡಿ ಮಾತನಾಡಿದ್ದ ಮೋದಿ, ಹವಾಯ್ ಚಪ್ಪಲಿ ಧರಿಸುವಂತಹ ವ್ಯಕ್ತಿಯನ್ನೂ ಕೂಡ ವಿಮಾನದಲ್ಲಿ ನೋಡಬೇಕೆಂಬುದು ನನ್ನ ಆಸೆ ಎಂದು ಹೇಳಿದ್ದರು. ಈ ಯೋಜನೆಯಡಿ 45ಕ್ಕೂ ಹೆಚ್ಚು ಸೇವೆ ಒದಗಿಸದ ವಿಮಾನ ನಿಲ್ದಾಣಗಳನ್ನು ಪುನಾರಂಭ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.

Leave a Reply

Your email address will not be published. Required fields are marked *