Thursday, 17th October 2019

Recent News

ಶೀಘ್ರದಲ್ಲೇ ಮೈ ನೇಮ್ ಈಸ್ ರಾಜ ತೆರೆಗೆ

ಬೆಂಗಳೂರು: ಅಮೋಘ್ ಎಂಟರ್‍ಪ್ರೈಸಸ್ ಲಾಂಛನದ ಅಡಿಯಲ್ಲಿ, ರಾಜ್ ಸೂರ್ಯನ್, ಪ್ರಭಾಕರ್ ರೆಡ್ಡಿ, ಕಿರಣ್ ರೆಡ್ಡಿ ನಿರ್ಮಾಣದ ಚಿತ್ರ `ಮೈ ನೇಮ್ ಈಸ್ ರಾಜ’. ಸಂಚಾರಿ, ಜಟಾಯು ಖ್ಯಾತಿಯ ರಾಜ್ ಸೂರ್ಯನ್ ನಾಯಕನಾಗಿ ಮೂರು ವಿಭಿನ್ನ ಔಟ್‍ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದು, ಆಕರ್ಷಿಕ ಮತ್ತು ನಸ್ರೀನ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಂಯುಕ್ತ 2 ಖ್ಯಾತಿಯ ಪ್ರಭು ಸೂರ್ಯ, ನೇಪಾಳದ ಸುಂದರಿ ಆಯುಶ್ರೀ, ಇರಾನ್ ದೇಶದ ಮಾಡೆಲ್ ಏವಾ ಸಫಾಯಿ ನಟಿಸಿರುವ ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕ ಕಾಲದಲ್ಲಿ ತಯಾರಾಗುತ್ತಿರುವ ಆಕ್ಷನ್ ಥ್ರಿಲ್ಲರ್ ಚಿತ್ರ ಮೈ ನೇಮ್ ಈಸ್ ರಾಜ. ಈ ಚಿತ್ರ ತೆಲುಗಿನಲ್ಲಿ ನಾ ಪೇರು ರಾಜ ಎಂಬ ಹೆಸರಿನಲ್ಲಿ ತಯಾರಾಗುತ್ತಿದೆ.

ಕರ್ನಾಟಕ, ಕೇರಳ ಮತ್ತು ಆಂಧ್ರ-ತೆಲಂಗಾಣ ರಾಜ್ಯಗಳ ಬಹಳಷ್ಟು ಅದ್ಭುತ ಸ್ಥಳಗಳಲ್ಲಿ 65 ದಿನಗಳ ಶೂಟಿಂಗ್ ಕಾರ್ಯವನ್ನು ಸಂಪೂರ್ಣವಾಗಿ ಮುಗಿಸಿ ಚಿತ್ರ ತಂಡ ಬೆಂಗಳೂರಿಗೆ ವಾಪಸ್ ಆಗಿದೆ. ಮಲೆಯಾಳಂ ಮೆಗಾ ಸ್ಟಾರ್ ಮಮ್ಮುಟ್ಟಿ ಚಿತ್ರಕ್ಕೆ ಸಂಗೀತ ಸಂಯೊಜಿಸಿರುವ ಎಲ್ವಿನ್ ಜೋಶ್ವಾ ಮೈ ನೇಮ್ ಇಸ್ ರಾಜ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಚಿತ್ರದ ಎಲ್ಲಾ ಹಾಡುಗಳು ಒಂದಕ್ಕಿಂತ ವಿಭಿನ್ನವಾಗಿದ್ದು ಆ ಹಾಡುಗಳನ್ನು ಡಾ. ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು ಅನಿಲ್ (ದಿಲ್ವಾಲ) ಬರೆದಿರುವುದು ವಿಶೇಷ.

ತೆಲುಗಿನ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಗಬ್ಬರ್ ಸಿಂಗ್, ಅಲ್ಲು ಅರ್ಜುನ್ ನಟನೆಯ ಡಿಜೆ ಚಿತ್ರದ ಹಾಡುಗಳನ್ನು ಬರೆದ ಬರಹಗಾರ, ಸಾಹಿತಿ ಹಾಗೂ ಪ್ರಿನ್ಸ್ ಮಹೇಶ್ ಬಾಬು ನಟಿಸಿರುವ ಇತ್ತೀಚಿನ ಮೆಗಾ ಹಿಟ್ ಮಹರ್ಷಿ ಹಾಗೂ ವಿಜಯ್ ದೇವರಕೊಂಡ ನಟಿಸಿರುವ ಗೀತ ಗೋವಿಂದಂ ಚಿತ್ರಕ್ಕೆ ಸಾಹಿತ್ಯ ಬರೆದಿರುವ ಶ್ರೀಮಣಿ `ಮೈ ನೇಮ್ ಇಸ್ ರಾಜ’ ಚಿತ್ರಕ್ಕೂ ಸಾಹಿತ್ಯ ಬರೆದಿರುವುದು ಅತಿದೊಡ್ಡ ಪ್ಲಸ್ ಆಗಲಿದೆ.

ಇನ್ನು ಮೈ ನೇಮ್ ಈಸ್ ರಾಜ ಈ ಚಿತ್ರದ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿಯೂ ನಮ್ಮ ಕನ್ನಡದ ಹಾಡುಗಾರ ಸಂಚಿತ್ ಹೆಗ್ಡೆ ಹಾಡಿದ್ದಾರೆ. ಚಮಕ್ ಖ್ಯಾತಿಯ ಅಭಿಜಿತ್ ಹಾಗು ಚೇತನ್ ನಾಯಕ್ ಕೂಡ ಹಾಡುಗಳನ್ನು ಹಾಡಿದ್ದಾರೆ. ಇನ್ನು ಅಶ್ವಿನ್ ಕೃಷ್ಣ ಈ ಚಿತ್ರದ ನಿರ್ದೇಶಕ. ನಿರ್ಮಾಪಕರು ಈ ಚಿತ್ರದಲ್ಲಿನ ಸಿಜಿ, ವಿಎಫ್‍ಎಕ್ಸ್‍ಗಾಗಿ ಎಲ್ಲೂ ಕಾಂಪ್ರಮೈಸ್ ಆಗದೆ ಬಜೆಟ್ ಲೆಕ್ಕಿಸದೆ ಬಹಳ ಖರ್ಚು ಮಾಡುತ್ತಿದ್ದು, ಎಷ್ಟೋ ದೃಶ್ಯಗಳು ರೋಮಾಂಚನವಾಗುವಂತೆ ಮೂಡಿರುವುದಾಗಿ ಚಿತ್ರದ ನಿರ್ದೇಶಕ ಅಶ್ವಿನ್ ಕೃಷ್ಣ ತಿಳಿಸಿದ್ದಾರೆ.

ರಾಮ್ ಗೋಪಾಲ್ ವರ್ಮಾ ಗರಡಿಯ ವೆಂಕಟ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವೆಂಕಿ ಸಂಕಲನ ಒದಗಿಸಿದ್ದಾರೆ. ಮೈ ನೇಮ್ ಇಸ್ ರಾಜ ಸದ್ಯ ಡಬ್ಬಿಂಗ್ ಕಾರ್ಯ, ಡಿಐ ಕಲರಿಂಗ್ ಚಾಮುಂಡೇಶ್ವರಿ ಸ್ಟುಡಿಯೋಸ್‍ನಲ್ಲಿ ಬಿರುಸಿನಿಂದ ಸಾಗಿದೆ. ಮಾಸ್ ಮಾದ, ಥ್ರಿಲ್ಲರ್ ಮಂಜು ಈ ಚಿತ್ರಕ್ಕೆ ಬಹಳ ವಿಭಿನ್ನವಾಗಿ ಸಾಹಸ ದೃಶ್ಯಗಳನ್ನು ಕಂಪೋಸ್ ಮಾಡಿದ್ದಾರೆ. ಜೋಗಯ್ಯ ಹಾಗೂ ದಿ ವಿಲನ್ ಖ್ಯಾತಿಯ ಕೊರಿಯೊಗ್ರಾಫರ್ ನಾಗೇಶ್ ಮಾಸ್ಟರ್ ಮೈ ನೇಮ್ ಈಸ್ ರಾಜ ಚಿತ್ರದ ಹಾಡುಗಳಿಗೆ ನೃತ್ಯ ಸಂಯೊಜಿಸಿದ್ದಾರೆ. ಅತಿ ಶೀಘ್ರದಲ್ಲೇ ಮೈ ನೇಮ್ ಈಸ್ ರಾಜ ಕನ್ನಡದಲ್ಲಿ, ನಾ ಪೇರು ರಾಜ ತೆಲುಗಿನಲ್ಲಿ ಬೆಳ್ಳಿ ತೆರೆಯ ಮೇಲೆ ರಾರಾಜಿಸಲಿದೆ.

Leave a Reply

Your email address will not be published. Required fields are marked *