Connect with us

Bengaluru City

ಮುದ್ದಾಗಿ ಸಾಕಿ ಬೆಳೆಸಿರೋ ಅಮ್ಮನೇ ನನಗೆ ಸ್ಪೆಷಲ್ ಗಿಫ್ಟ್: ಅಭಿಷೇಕ್ ಅಂಬರೀಶ್

Published

on

– ಅಪ್ಪನನ್ನ ತುಂಬಾ ಮಿಸ್ ಮಾಡ್ಕೊತ್ತಿದ್ದೀನಿ

ಬೆಂಗಳೂರು: ಮುದ್ದಾಗಿ ಸಾಕಿ ಬೆಳೆಸಿದ ನನ್ನ ಅಮ್ಮನೇ ನನಗೆ ಸ್ಪೆಷಲ್ ಗಿಫ್ಟ್ ಎಂದು ನಟ ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.

ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಅಭಿಷೇಕ್ ಅಂಬರೀಶ್ ಇಂದು ಜೆಪಿ ನಗರದ ನಿವಾಸದಲ್ಲಿ ಬೆಳಗ್ಗೆ ಬರ್ತ್ ಡೇ ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದಾರೆ. 27ನೇ ವಸಂತಕ್ಕೆ ಕಾಲಿಟ್ಟಿರೋ ಅಭಿಷೇಕ್ ಅಂಬರೀಷ್ ಗೆ ಬ್ಯಾಡ್ ಮ್ಯಾನರ್ಸ್ ಚಿತ್ರತಂಡದಿಂದ ಟೀಸರ್ ಕೂಡ ಗಿಫ್ಟ್ ನೀಡಲಾಗಿದೆ.

ಹುಟ್ಟುಹಬ್ಬದ ಪ್ರಯುಕ್ತ ಮಾಧ್ಯಮಗಳ ಜೊತೆ ಮಾತನಾಡಿದ ಅಭಿ, ತಂದೆಯವರಿಲ್ಲದೆ ಎರಡನೇ ಹುಟ್ಟುಹಬ್ಬ ಸೆಲಬ್ರೇಷನ್ ಮಾಡುತ್ತಿದ್ದೇನೆ. ತಂದೆಯನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೆ ಅವರು ಕೊಟ್ಟಿರೋ ಅಭಿಮಾನಿಗಳಿಂದ ಆ ಬೇಸರ ದೂರವಾಗಿದೆ. ಬ್ಯಾಡ್ ಮ್ಯಾನರ್ಸ್ ಸಿನಿಮಾಗಾಗಿ ತೂಕ ಇಳಿಸಿಕೊಂದಿದ್ದೆನೆ. ಎರಡು ವಾರದ ನಂತ್ರ ಚಿತ್ರೀಕರಣದಲ್ಲಿ ಭಾಗಿ ಆಗ್ತೀನಿ. ಈ ದಿನ ಅಭಿಮಾನಿಗಳಿಗಾಗಿ ಮೀಸಲು ಅವರು ಆಯೋಜಿಸಿರೋ ಕಾರ್ಯಕ್ರಮಕ್ಕೆ ಹೋಗ್ತೀನಿ ಎಂದರು.

ಇದೇ ವೇಳೆ ಡ್ರಗ್ಸ್ ವಿಚಾರವಾಗಿ ಮತಮಾಡಿದ ಅಭಿಷೇಕ್, ಇಂಡಸ್ಟ್ರಿ ಅಂದ್ರೆ ಕೆಲವೇ ಕೆಲವು ಜನ ಅಲ್ಲ. ಅಮಾಯಕರು ಈ ವಿಚಾರದಲ್ಲಿ ಬಲಿಪಶು ಮಾಡಬಾರದು. ವಿಚಾರಣೆ ಎದುರಿಸಿದವರನ್ನ ಅಪರಾಧಿಗಳಾಗಿ ನೋಡಬಾರದು. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ. ಅಂಬಿ ನಿಂಗ್ ವಯಸ್ಸಾಯ್ತು ಚಿತ್ರದಲ್ಲಿ ಅಭಿನಯ ಮಾಡಿರೋ ಅಭಿ ಅವ್ರು ವಿಚಾರಣೆ ಎದುರಿಸಿದ್ದಾರೆ. ಇದರಿಂದ ಅವರಿಗೆ ಸಾಕಷ್ಟು ತೊಂದರೆ ಆಗಿದೆ ಒಂದು ಸಿನಿಮಾ ಕೂಡ ಮಿಸ್ ಆಗಿದೆ. ಈ ರೀತಿ ಬೆಳವಣಿಗೆಗಳು ಆಗಬಾರದು ಎಂದರು.

ಅಭಿ ಹುಟ್ಟುಹಬ್ಬವನ್ನ ಪ್ರತಿ ವರ್ಷ ಗ್ರಾಂಡ್ ಆಗಿ ಸೆಲಬ್ರೇಟ್ ಮಾಡುತ್ತಿದ್ದೆವು. ಕಳೆದ ವರ್ಷ ಅಂಬಿ ಇಲ್ಲದ ಕಾರಣ ಹುಟ್ಟುಹಬ್ಬ ಮಾಡಲಿಲ್ಲ. ಅಭಿ ಮೊದಲ ಬರ್ತಡೇ ಸಖತ್ ಜೋರಾಗಿ ಆಚರಣೆ ಮಾಡಿದ್ದೆವು. ಇಂದು ಇಷ್ಟು ಜನರನ್ನ ನೋಡಿ ಸಖತ್ ಫೀಲ್ ಆಯ್ತು ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

Click to comment

Leave a Reply

Your email address will not be published. Required fields are marked *