Connect with us

Bengaluru City

ಬೆಂಗಳೂರು ನಗರ ಜಿಲ್ಲಾ ಕಬಡ್ಡಿ ಸಂಸ್ಥೆಗೆ ಎಂ.ವಿ.ಪ್ರಸಾದ್​ ಬಾಬು ಕಾರ್ಯದರ್ಶಿಯಾಗಿ ಆಯ್ಕೆ

Published

on

ಬೆಂಗಳೂರು: ಬೆಂಗಳೂರು ನಗರ​ ಜಿಲ್ಲಾ ಅಮೆಚೂರ್​ ಕಬಡ್ಡಿ ಅಸೋಸಿಯೇಷನ್​ಗೆ ಮಾಜಿ ಕಬಡ್ಡಿ ಆಟಗಾರ ಎಂ.ವಿ. ಪ್ರಸಾದ್​ ಬಾಬು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದಾರೆ.

ಇಂದು ಬಿವಿಕೆ ವಿಹಾರ ಕೇಂದ್ರದಲ್ಲಿ ಬೆಂಗಳೂರು ನಗರ​ ಜಿಲ್ಲಾ ಅಮೆಚೂರ್​ ಕಬಡ್ಡಿ ಅಸೋಸಿಯೇಷನ್ ಸರ್ವ ಸದಸ್ಯರ ವಾರ್ಷಿಕ ಸಭೆ ನಡೆಯಿತು. ಈ ಸಭೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಗೆ ಒಳಪಟ್ಟ 100 ಮಂದಿ ಸದಸ್ಯರು ಹಾಜರಾಗಿ ಅವಿರೋಧವಾಗಿ ಪ್ರಸಾದ್​ ಬಾಬು ಅವರನ್ನು ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಕಬಡ್ಡಿ ಆಟಗಾರ ವಿ.ಜಯರಾಂ ಅವರನ್ನು ಅಧ್ಯಕ್ಷರಾಗಿ ಹಾಗೂ ಕೆ.ಮುತ್ತುರಾಜ್​ ಅವರನ್ನು ಖಜಾಂಚಿಯಾಗಿ ಸರ್ವಾನುಮತದಿಂದ ನೇಮಕ ಮಾಡಲಾಯಿತು.

ಎಂ.ವಿ.ಪ್ರಸಾದ್​ ಬಾಬು ಕರ್ನಾಟಕ ಅಮೆಚೂರ್​ ಕಬಡ್ಡಿ ಸಂಸ್ಥೆ ಕಾರ್ಯದರ್ಶಿ ರೇಸ್​ನಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಸಕ್ರೀಯವಾಗಿ ರಾಜ್ಯ ಕಬಡ್ಡಿ ಸಂಸ್ಥೆಯಲ್ಲಿ ತೊಡಗಿಕೊಳ್ಳಬೇಕು ಎನ್ನುವ ಆಶಯವನ್ನು ಹೊಂದಿದ್ದಾರೆ.

ಇವರು ಭಾರತೀಯ ಅಮೆಚೂರ್​ ಕಬಡ್ಡಿ ಒಕ್ಕೂಟ (ಎಕೆಎಫ್​ಐ)ಕ್ಕೆ ಪರ್ಯಾಯವಾಗಿ ನ್ಯೂ ಕಬಡ್ಡಿ ಫೆಡರೇಷನ್​ ಆಫ್ ಇಂಡಿಯಾ (ಎನ್​ಕೆಎಫ್​ಐ) ಸಂಸ್ಥೆಯನ್ನು ಹುಟ್ಟು ಹಾಕಿ ದೇಶದಲ್ಲಿ ಬದಲಾವಣೆಯ ಬಿರುಗಾಳಿ ಏಳುವಂತೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Click to comment

Leave a Reply

Your email address will not be published. Required fields are marked *