ಸಣ್ಣ ಬಟ್ಟೆ ಹಿಡಿದು ಬೇಧ ಭಾವ ಮೂಡಿಸುವವರೇ ನಮ್ದು ಜಾತ್ಯಾತೀತ ರಾಷ್ಟ್ರ ಅಂತಿದ್ದಾರೆ: ಮುಸ್ಲಿಮ್‌ ಮಹಿಳೆಯರು

Advertisements

ನವದೆಹಲಿ: ಸಣ್ಣ ಬಟ್ಟೆಯನ್ನು ಮುಂದಿಟ್ಟುಕೊಂಡು ಬೇಧ ಭಾವ ಮೂಡಿಸುತ್ತಿರುವ ಜನರೇ, ನಮ್ಮದು ಜಾತ್ಯಾತೀತ ದೇಶ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಮುಸ್ಲಿಂ ಮಹಿಳಾ ಸಮುದಾಯದ ತಂಡವೊಂದು ಆಕ್ರೋಶ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ಮುಸ್ಲಿಂ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ತಂಡವೊಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಹಿಜಬ್ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

Advertisements

ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ತಾರತಮ್ಯ ನಡೆಯುತ್ತಿದೆ. ಇದು ಹೊಸ ಬೆಳವಣಿಗೆಯಲ್ಲ. 2018 ರಿಂದಲೂ ಇಂತಹ ಹಲವು ಬೆಳವಣಿಗೆ ನಡೆಯಿತ್ತಿದೆ, ಉಡುಪಿ ಮಂಗಳೂರು ಭಾಗದಲ್ಲಿ ಇಂತಹ ಹಲವು ಘಟನೆಗಳು ನಡೆಯುತ್ತಿವೆ. ನಮ್ಮ ಶಿಕ್ಷಣ ಮತ್ತು ಧರ್ಮದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ. ನಾವು ಒಂದನ್ನು ಆಯ್ಕೆ ಮಾಡಲ್ಲ, ಎರಡನ್ನೂ ನಾವು ಆಯ್ಕೆ ಮಾಡಿಕೊಳ್ಳಲಿದ್ದೇವೆ. ಮುಸ್ಲಿಂ ವಿದ್ಯಾರ್ಥಿನಿಯರು ಶೈಕ್ಷಣಿಕ ವ್ಯವಸ್ಥೆಯಲ್ಲಿ ಹಿಂದೆ ಇದ್ದಾರೆ ಹಿಜಬ್ ಧರಿಸಿ ಶಾಲೆ ತೆರಳುವ ವಿದ್ಯಾರ್ಥಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದು ಕಳವಳಕಾರಿ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ:   ಹಿಜಬ್ ಪರ ವಾದಿಗಳ ಬೆದರಿಕೆಗೆ ಸರ್ಕಾರ ಮಣಿಯದು: ಅಶ್ವತ್ಥನಾರಾಯಣ

Advertisements

ಹೈಕೋರ್ಟ್‌ನಲ್ಲಿ ಹಿಜಬ್ ವಿರುದ್ಧ ಆದೇಶ ಬಂದಿದೆ, ಸುಪ್ರೀಂಕೋರ್ಟ್ ಹೋರಾಟ ಶುರುವಾಗಿದೆ ಇಲ್ಲಿ ನ್ಯಾಯ ಸಿಗುವ ಭರವಸೆ ಇದೆ. ವಾಸ್ತವದಲ್ಲಿ ನಮ್ಮಗೆ ಯೂನಿಫಾರಂ ಬಗ್ಗೆ ತರಕಾರು ಇತ್ತು ಕೋರ್ಟ್ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿತ್ತು, ಆದರೆ ಕೋರ್ಟ್ ಹಿಜಬ್ ಧಾರ್ಮಿಕವಾಗಿ ಕಡ್ಡಾಯವಲ್ಲ ಎಂದು ಹೇಳಿದೆ. ಇದನ್ನೂ ಓದಿ: ಪ್ರಜಾಪ್ರಭುತ್ವವನ್ನು ಹ್ಯಾಕ್ ಮಾಡಲು ಸೋಶಿಯಲ್ ಮೀಡಿಯಾ ದುರ್ಬಳಕೆ: ಸೋನಿಯಾ ಆತಂಕ

ಕೆಲವರು ಹಿಜಬ್ ಬ್ಯಾನ್ ಆಗಿದೆ ಎಂದು ಸುದ್ದಿ ಹರಡುತ್ತಿದ್ದಾರೆ, ಹಿಜಬ್ ಬ್ಯಾನ್ ಆಗಿಲ್ಲ, ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ, ನಾವು ಯೂನಿಫಾರಂ ವಿರುದ್ಧ ಇಲ್ಲ, ಎಲ್ಲರ ಸಂಸ್ಕೃತಿ ಒಳಗೊಂಡೊರುವ ಯೂನಿಫಾರಂ ಇರಬೇಕು ಎನ್ನುವುದು ನಮ್ಮ ಆಶಯ ಆದರೆ ಯೂನಿಫಾರಂ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ಹೆಸರು ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ ಮುಸ್ಲಿಮರು ಯೂನಿಫಾರಂ ವಿರುದ್ದ ಎಂದು ಬಿಂಬಿಸಲಾಗುತ್ತಿದೆ.

Advertisements

ಸಂಸ್ಕೃತಿ ಒಳಗೊಂಡ ಯೂನಿಫಾರಂ ಜಾರಿಯಾಗಬೇಕು, ಶೈಕ್ಷಣಿಕ ದೃಷ್ಟಿಕೋನದಿಂದ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು, ಮುಸ್ಲಿಂ ವಿದ್ಯಾರ್ಥಿನಿಯರು ಅವರ ಕುಟುಂಬಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು, ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಯರ ಮಾಹಿತಿ ಗೌಪ್ಯವಾಗಿ ಇಡಬೇಕು ಎಂದು ಇದೇ ವೇಳೆ ಅವರು ಸರ್ಕಾರಕ್ಕೆ ಒತ್ತಾಯ ಮಾಡಿದರು.

Advertisements
Exit mobile version