Connect with us

ಕೊಡಗಿನ ಏಕೈಕ ಅಂತರಾಷ್ಟ್ರಿಯ ಮಹಿಳಾ ಹಾಕಿಪಟು ಮುಂಡಂಡ ಅನುಪಮ ಕೊರೊನಾಗೆ ಬಲಿ

ಕೊಡಗಿನ ಏಕೈಕ ಅಂತರಾಷ್ಟ್ರಿಯ ಮಹಿಳಾ ಹಾಕಿಪಟು ಮುಂಡಂಡ ಅನುಪಮ ಕೊರೊನಾಗೆ ಬಲಿ

ಮಡಿಕೇರಿ: ಕೊರೊನಾ ಮಾಹಾಮಾರಿಗೆ ಕೊಡಗಿನ ಏಕೈಕ ಅಂತರಾಷ್ಟ್ರಿಯ ಮಹಿಳಾ ಹಾಕಿ ಅಂಪೈರ್ ಆಗಿದ್ದ, ಹಾಕಿಪಟು ಮುಂಡಂಡ ಅನುಪಮ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳಿದ್ದಾರೆ.

ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲದವರ ಅನುಪಮ ಅವರು ಬಾಲ್ಯದಿಂದಲೂ ಹಾಕಿ ಕ್ರೀಡೆಯ ಬಗ್ಗೆ ಹೆಚ್ಚು ಒಲವು ಇಟ್ಟಿಕೊಂಡಿದ್ದರು. ಅಲ್ಲದೇ ದೇಶದ ಮೊದಲ ಅಂತರರಾಷ್ಟ್ರೀಯ ಮಹಿಳಾ ಹಾಕಿ ತೀರ್ಪುಗಾರ್ತಿ ಎಂಬ ಹಿರಿಮೆ ಹೊಂದಿದ್ದರು. ಅನೇಕ ಅಂತರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಅನುಪಮ ಅವರು ತೀರ್ಪುಗಾರ್ತಿಯಾಗಿ ಕೊಡಗಿಗೆ ಖ್ಯಾತಿ ತಂದಿದ್ದರು. ಕೊರೊನಾ ಮಾಹಾಮಾರಿಗೆ ಕ್ರೀಡಾಪಟು ಅನುಪಮ ಅವರನ್ನು ಕಳೆದುಕೊಂಡ ಕೊಡಗಿನ ಜನರು ಕೊಡವ ಸಮಾಜ ಮುಖಂಡರು ಕ್ರೀಡಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Advertisement
Advertisement