Connect with us

Crime

ಬಿಜೆಪಿ ಶಾಸಕರ ಕಾರು ಬೈಕಿಗೆ ಡಿಕ್ಕಿ- ಸವಾರರಿಬ್ಬರ ದುರ್ಮರಣ

Published

on

ಮುಂಬೈ: ದ್ವಿಚಕ್ರವಾಹನಕ್ಕೆ ಬಿಜೆಪಿ ಶಾಸಕ ಕಿಶನ್ ಕ್ಯಾಥೋರ್ ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಮುಂಬೈನ ಟಿಟ್ವಾಲಾ ಬಳಿ ನಡೆದಿದೆ.

ಈ ಅಪಘಾತದಲ್ಲಿ ಮೃತಪಟ್ಟವರನ್ನು ಅಮಿತ್ ಸಿಂಗ್(22) ಸಿಮ್ರಾನ್ ಸಿಂಗ್ (18) ಎಂದು ಗುರುತಿಸಲಾಗಿದೆ. ಇಬ್ಬರು ಕಲ್ಯಾಣ ನಿವಾಸಿಯಾಗಿದ್ದಾರೆ.

ಟ್ವಿಟಾಲ್ ಬಳಿ ಅಮಿತ್ ಮತ್ತು ಇಮ್ರಾನ್ ಇಬ್ಬರು ಬೈಕ್‍ನಲ್ಲಿ ಬಂದಿದ್ದಾರೆ. ಈ ವೇಳೆ ಬೈಕ್ ಮತ್ತು ಬಿಜೆಪಿ ಶಾಸಕ ಕಿಶನ್ ಕ್ಯಾಥೋರ್ ಅವರ ಕಾರು ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರ ಅಮಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಕುಳಿತಿದ್ದ ಸಿಮ್ರಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮುರ್ಬಾದ್ ಕ್ಷೇತ್ರದಿಂದ ಚುನಾಯಿತರಾದ ಕ್ಯಾಥೋರ್ ಅವರು ಅಪಘಾತದಲ್ಲಿ ಸುರಕ್ಷಿತವಾಗಿದ್ದಾರೆ. ಕಾರು ಚಾಲಕನಿಗೆ ಗಾಯಗಳಾಗಿವೆ. ಈ ಸಂಬಂಧ ಇನ್ನೂ ಪ್ರಕರಣ ದಾಖಲಿಸಬೇಕಿದೆ ಎಂದು ಟಿಟ್ವಾಲಾ ಪೊಲೀಸ್ ಠಾಣೆಯ ಉಸ್ತುವಾರಿ ರಾಜು ವಂಜಾರಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in