Connect with us

Cinema

ಬೆಂಗ್ಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಹನಟನ ಸಹಾಯಕ್ಕೆ ಬಂದ ಸಲ್ಲು

Published

on

ಮುಂಬೈ: ಪ್ರಸ್ತುತ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಫರಾಜ್ ಖಾನ್‍ಗೆ ಸಲ್ಮಾನ್ ಖಾನ್ ಚಿಕಿತ್ಸಾ ವೆಚ್ಚ ಭರಿಸುವ ಮೂಲಕ ಸಹಾಯ ಮಾಡಿದ್ದಾರೆ.

1998ರಲ್ಲಿ ಬಿಡುಗಡೆಯಾದ ಮೆಹಂದಿ ಎಂಬ ಚಿತ್ರದಲ್ಲಿ ನಟಿ ರಾಣಿ ಮುಖರ್ಜಿಯೊಂದಿಗೆ ಫರಾಜ್ ಖಾನ್ ಅಭಿನಯಿಸಿದ್ದರು. ಈ ಚಿತ್ರದ ಮೂಲಕ ಬಹಳ ಹೆಸರುವಾಸಿಯಾಗಿದ್ದರು. ಕಳೆದ ಒಂದು ವರ್ಷದಿಂದ ಫರಾಜ್ ಖಾನ್ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಸದ್ಯ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫರಾಜ್ ಖಾನ್ ಅವರ ಕುಟುಂಬ ನಟನ ಚಿಕಿತ್ಸೆ ವೆಚ್ಚವನ್ನು ಭರಿಸಲಾಗದೇ ಕಷ್ಟಪಡುತ್ತಿತ್ತು. ಇದನ್ನು ತಿಳಿದ ನಟಿ ಪೂಜಾ ಭಟ್ ಅವರು, ಅವರಿಗೆ ಸಹಾಯ ಮಾಡುವಂತೆ ಟ್ವೀಟ್ ಮಾಡಿದ್ದರು. ಅವರಿಗೆ ಹಣ ಡೊನೇಟ್ ಮಾಡುವ ವೆಬ್‍ಸೈಟಿನ ಲಿಂಕ್ ಹಂಚಿಕೊಂಡಿದ್ದ ಪೂಜಾ, ಧಯವಿಟ್ಟು ಸಹಾಯ ಮಾಡಿ. ಅದಷ್ಟು ಈ ಲಿಂಗ್ ಅನ್ನು ಶೇರ್ ಮಾಡಿ. ಯಾರದರೂ ಸಹಾಯ ಮಾಡಿದರೆ ನನ್ನ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದರು.

ಇದರ ಜೊತೆಗೆ ಸಾಮಾಜಿಕ ಜಾಲತಾಣದ ಮೂಲಕ ಅಣ್ಣನಿಗೆ ಸಹಾಯ ಮಾಡುವಂತೆ ಕೇಳಿಕೊಂಡಿರುವ ಫರಾಜ್ ಖಾನ್ ಸಹೋದರ ಪೋಷಕನಟ ಫಹಮಾನ್ ಖಾನ್, ನನ್ನ ಪ್ರೀತಿಯ ಅಣ್ಣ ಮತ್ತು ಒಳ್ಳೆಯ ನಟ ಇಂದು ಆಸ್ಪತ್ರೆಯಲ್ಲಿ ಸಾವು ಬದುಕಿ ಮಧ್ಯೆ ಹೋರಾಡುತ್ತಿದ್ದಾರೆ. ಹಲವಾರು ವರ್ಷ ನಟನೆ ಮತ್ತು ಕಲೆಗೆ ಸಾಕಷ್ಟು ಕೊಡುಗೆ ನೀಡಿದ ಫರಾಜ್ ಖಾನ್ ಅವರ ಉಳಿವಿಗಾಗಿ ನೀವು ಸಹಾಯ ಮಾಡಬೇಕಿದೆ ಎಂದು ಮನವಿ ಮಾಡಿದ್ದರು.

ಇದನ್ನು ತಿಳಿದ ಸಲ್ಮಾನ್ ಖಾನ್ ಅವರು, ಆ ನಟನ ಚಿಕಿತ್ಸೆಗೆ ಆಗುವಷ್ಟು ಹಣವನ್ನು ನೀಡಿದ್ದಾರೆ. ಈ ವಿಚಾರ ತಿಳಿದು ಸಲ್ಮಾನ್ ಖಾನ್ ಅವರನ್ನು ಹೊಗಳಿರುವ ನಟಿ ಕಾಶ್ಮೇರಾ ಶಾ ಅವರು, ಫರಾಜ್ ಖಾನ್ ಅವರಿಗೆ ಸಹಾಯ ಮಾಡಿ ಚಿಕಿತ್ಸಾ ವೆಚ್ಚಾ ಭರಿಸಿದಕ್ಕೆ ಧನ್ಯವಾದಗಳು. ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯ ಹೋರಾಡುತ್ತಿರುವ ನಟನ ಬೆಂಬಲಿಕ್ಕೆ ಸಲ್ಮಾನ್ ಖಾನ್ ನಿಂತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in