Connect with us

Cinema

ಪ್ರಿಯಾಂಕ ಚೋಪ್ರಾ ತಂಗಿಗೆ ಜೂ.ಎನ್‍ಟಿಆರ್ ಅಭಿಮಾನಿಗಳಿಂದ ಜೀವ ಬೆದರಿಕೆ

Published

on

– ಮೀರಾ ಚೋಪ್ರಾರಿಂದ ಪೊಲೀಸ್ ಠಾಣೆಗೆ ದೂರು

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರ ಸಹೋದರಿ ಮೀರಾ ಚೋಪ್ರಾ ಅವರಿಗೆ ನಟ ಜೂ.ಎನ್‍ಟಿಆರ್ ಅವರ ಅಭಿಮಾನಿಗಳು ಜೀವ ಬೆದರಿಕೆ ಹಾಕಿದ್ದಾರೆ.

ಮೀರಾ ಚೋಪ್ರಾ ಪ್ರಿಯಾಂಕ ಚೋಪ್ರಾ ಅವರ ಸೋದರ ಸಂಬಂಧಿಯಾಗಿದ್ದು, ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ನಡುವೆ ಲಾಕ್‍ಡೌನ್ ನಿಂದ ಮನೆಯಲ್ಲೇ ಉಳಿದಿರುವ ಮೀರಾ ಅಭಿಮಾನಿಗಳೊಂದಿಗೆ ಮಾತನಾಡಲು ಟ್ವಿಟ್ಟರ್ ನಲ್ಲಿ ಆಸ್ಕ್ ಮೀರಾ ಎಂಬ ಸಂವಾದವನ್ನು ಕಾರ್ಯಕ್ರಮವನ್ನು ನಡೆಸಿದ್ದರು.

ಮೀರಾ ಬಾಲಿವುಡ್, ಟಾಲಿವುಡ್, ಕಾಲಿವುಡ್‍ನಲ್ಲಿ ನಟಿಸಿರುವ ಕಾರಣ ಎಲ್ಲ ಸಿನಿಮಾರಂಗದ ಅಭಿಮಾನಿಗಳು ಅವರಿಗೆ ಬೇರೆ ಬೇರೆ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಅಭಿಮಾನಿಯೋರ್ವ ನಿಮಗೆ ತೆಲಗು ಸಿನಿಮಾರಂಗದಲ್ಲಿ ಪ್ರಿನ್ಸ್ ಮಹೇಶ್ ಬಾಬು ಇಷ್ಟವೋ ಇಲ್ಲ ಜೂ.ಎನ್‍ಟಿಆರ್ ಇಷ್ಟವೋ ಎಂದು ಪ್ರಶ್ನೆ ಮಾಡಿದ್ದಾನೆ. ಅಭಿಮಾನಿಯ ಈ ಪ್ರಶ್ನೆ ಮೀರಾ ಉತ್ತರಿಸಿದ್ದೆ ಈ ವಿವಾದ ಸೃಷ್ಟಿಯಾಗಲು ಕಾರಣವಾಗಿದೆ.

ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿರುವ ಮೀರಾ, ನನಗೆ ಮಹೇಶ್ ಬಾಬು ಎಂದರೆ ಇಷ್ಟ ಎಂದು ಹೇಳಿದ್ದಾರೆ. ಇದೇ ವೇಳೆ ಮೀರಾ ನನಗೆ ಜೂ.ಎನ್‍ಟಿಆರ್ ಬಗ್ಗೆ ಗೊತ್ತಿಲ್ಲ. ನಾನು ಅವರ ಅಭಿಮಾನಿಯಲ್ಲ ಎಂದು ಉತ್ತರಿಸಿದ್ದಾರೆ. ಇದನ್ನು ಕಂಡು ಕೆಂಡಾಮಂಡಲವಾದ ಎನ್‍ಟಿಆರ್ ಫ್ಯಾನ್ಸ್, ಟ್ವಿಟ್ಟರ್ ನಲ್ಲಿ ಮೀರಾ ವಿರುದ್ಧ ತಿರುಗಿ ಬಿದಿದ್ದಾರೆ. ಆಕೆಯನ್ನು ಟ್ಯಾಗ್ ಮಾಡಿ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ಜೊತೆಗೆ ರೇಪ್, ಆ್ಯಸಿಡ್ ದಾಳಿ ಮಾಡುವುದಾಗಿ ಜೀವ ಬೆದರಿಕೆಯಾಗಿದ್ದಾರೆ.

ಇದರಿಂದ ಭಯಗೊಂಡ ಮೀರಾ ಈ ವಿಚಾರವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೀರಾ ಅವರನ್ನು ಟ್ಯಾಗ್ ಮಾಡಿ ಎನ್‍ಟಿಆರ್ ಅಭಿಮಾನಿಗಳು ಮಾಡಿರುವ ಟ್ವೀಟ್ ಅನ್ನು ಸ್ಕ್ರೀನ್ ಶಾಟ್ ತೆಗೆದು ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ನೇರವಾಗಿ ಎನ್‍ಟಿಆರ್ ಅವರನ್ನು ಟ್ಯಾಗ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಜೂ.ಎನ್‍ಟಿಆರ್ ಈವರಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ವಿಚಾರವಾಗಿ ರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರಿಗೂ ಮೀರಾ ದೂರು ನೀಡಿದ್ದಾರೆ. ಈಗಾಗಲೇ ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ತೆಲಂಗಾಣ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಜೊತೆಗೆ ಮೀರಾ ಅವರಿಗೂ ಕೆಲ ನಟಿಯರು ಬೆಂಬಲ ನೀಡುತ್ತಿದ್ದು, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಪ್ರಕರಣಗಳು ಜಾಸ್ತಿಯಾಗಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.