Tuesday, 21st January 2020

ತಡರಾತ್ರಿಯ ಆಟೋ ಸವಾರಿ ಆನಂದಿಸಿದ ಕಿಮ್ ಶರ್ಮಾ

ಮುಂಬೈ: ಮೊಹಬ್ಬತೇನ್ ಚಿತ್ರದ ನಟಿ ಕಿಮ್ ಶರ್ಮಾ ತಡರಾತ್ರಿ ಆಟೋ ಸವಾರಿಯನ್ನು ಆನಂದಿಸಿದ್ದಾರೆ.

ತಿಳಿ ಗುಲಾಬಿ ಹಾಗೂ ಬೂದು ಬಣ್ಣದ ಟೀ ಶರ್ಟ್, ಶಾರ್ಟ್ಸ್ ತೊಟ್ಟು ಕಿಮ್ ಶರ್ಮಾ ಆಟೋದಲ್ಲಿ ಮುಂಬೈನ ಬಾಂದ್ರಾದ ರಾತ್ರಿಯನ್ನು ನೋಡಿ ಖುಷಿ ಪಟ್ಟಿದ್ದಾರೆ. ಈ ವೇಳೆ ಮಾರ್ಗ ಮಧ್ಯೆ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಮುಖ ಮುಚ್ಚಿಕೊಂಡರು. ಬಳಿಕ ಕ್ಯಾಮೆರಾಮೆನ್ ಫೋಟೋ ಕ್ಲಿಕ್ಕಿಸಿದರೂ ಸುಮ್ಮನೆ ಕುಳಿತು ಪ್ರಯಾಣ ಮುಂದುವರಿಸಿದರು.

ಕಿಮ್ ಶರ್ಮಾ, ಬಾಲಿವುಡ್ ನಟ ಹರ್ಷವರ್ಧನ್ ರಾಣೆ ಜೊತೆ ಡೇಟಿಂಗ್‍ನಲ್ಲಿದ್ದಾರೆ ಎಂಬ ಗುಸು ಗುಸು ಸಿನಿ ಅಂಗಳದಲ್ಲಿ ಹರಿದಾಡುತಿತ್ತು. ಮಾಧ್ಯಮಗಳ ಕ್ಯಾಮೆರಾ ಕಂಡಕೂಡಲೇ ಗೆಳೆಯನ ಹಿಂದೆ ಬಚ್ಚಿಕೊಳ್ಳುತ್ತಿದ್ದ ಕಿಮ್ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಜೊತೆಯಾಗಿಯೇ ಕಾರಿನಲ್ಲಿ ಬಂದ ಹಾಟ್ ಜೋಡಿ ಮಾಧ್ಯಮಗಳಿಂದ ದೂರವೇ ಉಳಿದುಕೊಂಡಿದ್ದರು. ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಕಿಮ್ ಗೆಳೆಯ ಹರ್ಷವರ್ಧನ್ ಗೆ ಲಿಪ್ ಟು ಲಿಪ್ ಕಿಸ್ ಕೊಟ್ಟರು. ಈ ಕಿಸ್ಸಿಂಗ್ ಫೋಟೋಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

35 ವರ್ಷದ ಹರ್ಷವರ್ಧನ್ ತನಗಿಂತ ಮೂರು ವರ್ಷ ಹಿರಿಯಳಾದ ಕಿಮ್ ಶರ್ಮಾ (38) ಜೊತೆ ಪ್ರೇಮ ಪಾಶದಲ್ಲಿ ಸಿಲುಕಿದ್ದಾರೆ. ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ಕಿಮ್ ಶರ್ಮಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೇ ವರ್ಷದ ಕೊನೆಯಲ್ಲಿ ಇಬ್ಬರು ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು. ಆದರೆ ಈಗ ಹಾಟ್ ಜೋಡಿ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹರ್ಷವರ್ಧನ್ ರಾಣೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಇತ್ತೀಚೆಗೆ ನಿವೃತ್ತಿ ಹೇಳಿದ್ದ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ತಮ್ಮ ನಿವಾಸದಲ್ಲಿ ಆಪ್ತರಿಗೆ ಪಾರ್ಟಿಯನ್ನ ಏರ್ಪಡಿಸಿದ್ದರು. ಈ ಪಾರ್ಟಿಗೆ ಯುವಿ ತಮ್ಮ ಮಾಜಿ ಗೆಳತಿ ಕಿಮ್ ಶರ್ಮಾ ಅವರಿಗೂ ಆಹ್ವಾನ ನೀಡಿದ್ದರು.

ಯುವರಾಜ್ ಸಿಂಗ್‍ರೊಂದಿಗೆ ಪ್ರೀತಿಯಲ್ಲಿದ್ದ ಕಿಮ್ ಶರ್ಮಾ 2007ರ ಬಳಿಕ ಅವರಿಂದ ದೂರವಾಗಿದ್ದರು. ಪಾರ್ಟಿಯಲ್ಲಿ ಭಾಗವಹಿಸಿದ್ದ ಕಿಮ್, ಯುವಿ ಹಾಗೂ ಪತ್ನಿಯೊಂದಿಗೆ ಫೋಟೋಗೆ ಪೋಸ್ ನೀಡಿ ಟ್ವಿಸ್ಟ್ ನೀಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು.

ತಮ್ಮ ನಿವೃತ್ತಿಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿ ಭಾವುಕರಾಗಿದ್ದ ಯುವರಾಜ್ ಸಿಂಗ್, ಅಂದು ಪತ್ನಿ  ಹಿಜೇಲ್ ಕೀಚ್‍ರೊಂದಿಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ ಪ್ರತಿಕ್ರಿಯೆ ನೀಡಿ ಕಿಮ್ ಕಮೆಂಟ್ ಮಾಡಿ, `ಇನ್ನಷ್ಟು ಪ್ರಕಾಶಿಸಿ ಲವ್ಲಿ ಜೋಡಿ’ ಎಂದು ಬರೆದುಕೊಂಡಿದ್ದರು.

Leave a Reply

Your email address will not be published. Required fields are marked *