Crime
ಪ್ಲಾಸ್ಟಿಕ್ ಕುರ್ಚಿ ಒಡೆದಿದ್ದಕ್ಕೆ ವ್ಯಕ್ತಿಗೆ ಚಾಕು ಇರಿದ ಸಹೋದರರು

ಮುಂಬೈ: ಪ್ಲಾಸ್ಟಿಕ್ ಕುರ್ಚಿ ಒಡೆದಿದ್ದಕ್ಕಾಗಿ 45 ವರ್ಷದ ವ್ಯಕ್ತಿ ಮೇಲೆ ನೆರೆಮನೆಯವರು ಚಾಕುವಿನಿಂದ ಇರಿದಿರುವ ಘಟನೆ ಮುಂಬೈನ ಅಂಬರ್ನಾಥ್ ತಾಲ್ಲೂಕಿನ ಕುಶಿವಾಲಿ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡ ವ್ಯಕ್ತಿಯನ್ನು ಮಹದು ಖಂಡವಿ (45) ಎಂದು ಗುರುತಿಸಲಾಗಿದೆ. ಕಾಶಿನಾಥ್ ಭಗತ್ (40) ಮತ್ತು ಆತನ ಸಹೋದರ ಶತ್ರುಘ್ನ ಭಗತ್ (35) ಆರೋಪಿಗಳಾಗಿದ್ದಾರೆ.
ಪ್ರಕರಣ ಹಿನ್ನೆಲೆ ಏನು?
ಮಹದು ಖಂಡವಿ ಮಲಗಿದ್ದಾಗ ನಾಯಿಯೊಂದು ಬೊಗಳಲು ಪ್ರಾರಂಭಿಸಿತ್ತು. ಇತ ಮರದ ಕೋಲಿನಿಂದ ನಾಯಿಯನ್ನು ಹೊಡೆಯಲು ಅದರ ಹಿಂದೆ ಓಡಿ ಹೋಗಿದ್ದಾನೆ. ನಾಯಿ ಓಡಿ ಹೋಗಿ ನೆರೆಮನೆಯ ಭಗತ್ ಮನೆಯ ಪ್ಲಾಸ್ಟಿಕ್ ಕುರ್ಚಿಯ ಕೆಳಗೆ ನಾಯಿ ಅಡಗಿದೆ. ಆಗ ಖಂಡವಿ ನಾಯಿಗೆ ಹೊಡೆಯುವ ಹೊಡೆತಕ್ಕೆ ಕುರ್ಚಿಗೆ ಬಿದ್ದು ಮುರಿದು ಹೋಗಿವೆ. ಆಗ ಕೋಪಗೊಂಡಿರುವ ಸಹೋದರು ಮಹದು ಖಂಡವಿಗೆ ಚಾಕುವಿನಿಂದ ಇರಿದು ಹಲ್ಲೆ ನೆಡಸಿದ್ದಾರೆ.
ಇಬ್ಬರು ಸಹೋದರರು ಮೊದಲು ಹಲ್ಲೆ ನಡೆಸಿದ್ದಾರೆ. ನಂತರ ಅವರ ಮನೆಯಿಂದ ಚಾಕುವನ್ನು ತೆಗೆದುಕೊಂಡು ಬಂದು ಇರಿದಿದ್ದಾರೆ. ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307ರ (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾಗಿರುವ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಉಲ್ಹಾಸ್ ನಗರದ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
