Connect with us

Latest

ಶಾಕಿಂಗ್ ವಿಡಿಯೋ: ಬೇಕಂತಲೇ ಪಾದಚಾರಿಯ ಮೇಲೆ ಕಾರ್ ಹರಿಸಿದ ಪೊಲೀಸ್

Published

on

ಮುಂಬೈ: ಪೊಲೀಸ್ ಸಿಬ್ಬಂದಿಯೊಬ್ಬರು ವ್ಯಕ್ತಿಯ ಮೇಲೆ ಬೇಕಂತಲೇ ಕಾರ್ ಹರಿಸಲು ಮುಂದಾದ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಯಾಗಿದೆ.

ಸಮವಸ್ತ್ರ ಧರಿಸದ ಈ ಪೊಲೀಸ್ ಪೇದೆಯನ್ನ ರಮೇಶ್ ಅವಾಟೆ ಎಂದು ಗುರುತಿಸಲಾಗಿದೆ. ಥಾಣೆಯ ಮಾರುಕಟ್ಟೆಯೊಂದರಲ್ಲಿ ರಮೇಶ್ ವ್ಯಕ್ತಿಯೊಬ್ಬರಿಗೆ ಕಾರಿನಿಂದ ಡಿಕ್ಕಿ ಹೊಡೆಯೋದನ್ನ ವಿಡಿಯೋದಲ್ಲಿ ನೋಡಬಹುದು. ನಂತರ ಪಾದಚಾರಿ ಅತುಲ್ ಪಾಟೇ ಪೇದೆ ರಮೇಶ್ ಅವರ ಇನ್ನೋವಾ ಕಾರಿನ ಮೇಲೆ ಬಿದ್ದಿದ್ದು, ರಮೇಶ್ ಕಾರನ್ನು ಹಾಗೆ ಚಾಲನೆ ಮಾಡಿಕೊಂಡು ಸ್ವಲ್ಪ ದೂರ ಹೋಗಿದ್ದಾರೆ.

ನಂತರ ಅತುಲ್ ಕಾರಿನಿಂದ ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಅವರಿಗೆ ಯಾವುದೇ ಗಾಯಗಳಾಗಿಲ್ಲ.

ಅತುಲ್ ಅವರು 3 ಲಕ್ಷ ರೂ ಸಾಲದ ಹಣವನ್ನ ಹಿಂದಿರುಗಿಸದೇ ಇದ್ದ ಕಾರಣ ರಮೇಶ್ ಈ ರೀತಿ ಮಾಡಿದ್ದಾರೆ ಎಂದು ವರದಿಯಾಗಿದೆ. ಸದ್ಯ ಪೇದೆ ರಮೇಶ್ ತಲೆಮರೆಸಿಕೊಂಡಿದ್ದಾರೆ.

ಈ ಘಟನೆಯ ದೃಶ್ಯಾವಳಿ ಹತ್ತಿರದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.