Crime
ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಸಾಮಾಜಿಕ ಕಾರ್ಯಕರ್ತ ಅರೆಸ್ಟ್

ಮುಂಬೈ: ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಸಾಮಾಜಿಕ ಕಾರ್ಯಕರ್ತನೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಸೋಪಾಪುರ ನಿವಾಸಿಯಾದ ಬಾಪು ಪಾಟೀಲ್(39) ಆಗಿದ್ದಾನೆ. ಈತ ವಿಶ್ವ ಮರಾಠಾ ಸಂಘಟನೆಯ ಮುಖ್ಯಸ್ಥ ಎಂದು ಗುರುತಿಸಿಕೊಂಡಿದ್ದಾನೆ.
ಬಾಪು ಪಾಟೀಲ್ 2 ವರ್ಷಗಳಿಂದ ಮಹಿಳೆಯ ಸಂಪರ್ಕದಲ್ಲಿದ್ದನು. ತಾನು ಸಾಮಾಜಿಕ ಕಾರ್ಯಕರ್ತನೆಂದು ನಂಬಿಸಿದ್ದನು. ಮಹಿಳೆ ಆತನೊಂದಿಗೆ ನಿರಂತರವಾಗಿ ಫೋನ್ ಸಂಪರ್ಕದಲ್ಲಿದ್ದಳು. ಅಲ್ಲದೆ ಮಹಿಳೆ ಆತನಿಗೆ 72 ಸಾವಿರ ರೂಪಾಯಿ ಹಣವನ್ನು ಕೂಡ ನೀಡಿದ್ದಳು. ಕೆಲವು ದಿನಗಳ ನಂತರ ಬಾಪು ಪಾಟೀಲ್ ಹಣವನ್ನು ನಿನಗೆ ವಾಪಸ್ ಕೋಡುತ್ತೇನೆ ಹೋಟೆಲ್ಗೆ ಬಾ, ಇಲ್ಲಿ ನಮ್ಮ ಸಂಘಟನೆ ಕಾರ್ಯಕ್ರಮವು ಇದೆ ಎಂದು ಕರೆದಿದ್ದಾನೆ. ಇದನ್ನು ನಂಬಿದ ಮಹಿಳೆ ಹೋಟೆಲ್ಗೆ ಬಂದಿದ್ದಾಳೆ.
ಈ ವೇಳೆ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಪಾಟೀಲ್ ಜೊತೆಗೆ ಇದ್ದ ವ್ಯಕ್ತಿ ಫೋಟೋವನ್ನು ತೆಗೆದುಕೊಂಡಿದ್ದಾನೆ. ಈ ವಿವಾರವನ್ನು ಹೊರಗೆ ಹೇಳಿದರೆ ಈ ಫೊಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತೇವೆಂದು ಬೆದರಿಸಿ ಕಳುಹಿಸಿದ್ದಾರೆ. ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಪ್ರಕರಣದ ಆರೋಪಿಯಾದ ಪಾಟೀಲ್ನನ್ನು ಪೊಲೀಸರು ಬಂಧಿಸಿದ್ದಾರೆ.
