Connect with us

Latest

ಮುಕೇಶ್ ಅಂಬಾನಿ ಕಾಂಗ್ರೆಸ್ಸಿಗೆ, ಪುತ್ರ ಬಿಜೆಪಿಗೆ ಬೆಂಬಲ -ವಿಡಿಯೋ ನೋಡಿ

Published

on

ಮುಂಬೈ: ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಮುಂಬೈ ದಕ್ಷಿಣ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಮಿಲಿಂದ್ ದೇವೂರಾ ಅವರಿಗೆ ಬೆಂಬಲ ನೀಡಿದರೆ ಪುತ್ರ ಅನಂತ್ ಅಂಬಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದಾರೆ.

ಶುಕ್ರವಾರ ಮುಂಬೈನಲ್ಲಿ ನಡೆದ ಪ್ರಧಾನಿ ಮೋದಿ ಅವರ ಸಮಾವೇಶದಲ್ಲಿ ಅತಿಥಿಗಳ ಗ್ಯಾಲರಿಯಲ್ಲಿ ಬಿಜೆಪಿ ನಾಯಕರ ಜೊತೆ ಅನಂತ್ ಅಂಬಾನಿ ಕುಳಿತು ಅಚ್ಚರಿ ಮೂಡಿಸಿದ್ದಾರೆ.

ಮುಂಬೈಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ನಡೆದ ಸಮಾವೇಶದಲ್ಲಿ ಪ್ರೇಕ್ಷಕರ ಗ್ಯಾಲರಿಯ ಮೊದಲ ಸಾಲಿನಲ್ಲಿ ಅನಂತ್  ಕುಳಿತಿದ್ದರು. ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ದೇಶವನ್ನು ಬೆಂಬಲಿಸಲು ಮತ್ತು ಪ್ರಧಾನಿ ಮೋದಿ ಅವರ ಭಾಷಣ ಕೇಳಲು ಆಗಮಿಸಿದ್ದೇನೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ತಮ್ಮ ಭಾಷಣದ ಕೊನೆಯಲ್ಲಿ ರೈತರು, ಸೈನಿಕರು, ವಕೀಲರು ಹೀಗೆ ಹೇಳುತ್ತಾ ಹೋದಾಗ ಅನಂತ್ ಅಂಬಾನಿ ಎರಡು ಕೈಯನ್ನು ಎತ್ತಿ “ಚೌಕಿದಾರ್ ಚೌಕಿದಾರ್” ಎಂದು ಘೋಷಣೆ ಕೂಗಿದ್ದಾರೆ.

“ದಕ್ಷಿಣ ಬಾಂಬೆಗೆ ಮಿಲಿಂದ್ ಸೂಕ್ತ ವ್ಯಕ್ತಿ” ಎಂದು ಮುಕೇಶ್ ಅಂಬಾನಿ ಹೇಳಿದ್ದ ವಿಡಿಯೋವನ್ನು ಸ್ವತಃ ಮಿಲಿಂದ್ ಏಪ್ರಿಲ್ 17 ರಂದು ಟ್ವೀಟ್ ಮಾಡಿದ್ದರು. “ದಕ್ಷಿಣ ಬಾಂಬೆ ಕ್ಷೇತ್ರವನ್ನು 10 ವರ್ಷ ಪ್ರತಿನಿಧಿಸಿದ್ದ ಮಿಲಿಂದ್‍ಗೆ ಈ ಕ್ಷೇತ್ರದ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪರಿಸರದ ಜ್ಞಾನ ಚೆನ್ನಾಗಿದೆ” ಎಂದು ಮುಕೇಶ್ ಈ ವಿಡಿಯೋದಲ್ಲಿ ಹೇಳಿದ್ದರು.