Tuesday, 21st May 2019

Recent News

ಮನೆ, ತೋಟಕ್ಕೆ ದಯವಿಟ್ಟು ರಕ್ಷಣೆ ಕೊಡಿ- ಶಾಸಕರಿಂದ ಗೃಹ ಸಚಿವರಿಗೆ ಪತ್ರ

ಚಿಕ್ಕಮಗಳೂರು: ನನಗೆ ಜೀವ ಬೆದರಿಕೆ ಇದೆ. ದಯವಿಟ್ಟು ನನ್ನ ಮನೆ ಹಾಗೂ ತೋಟಕ್ಕೆ ರಕ್ಷಣೆ ಕೊಡಿ ಎಂದು ಮೂಡಿಗೆರೆ ಶಾಸಕ ಕುಮಾರಸ್ವಾಮಿ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

ಮೂಡಿಗೆರೆ ತಾಲೂಕಿನ ಕಲ್ಮನೆ ಗ್ರಾಮದ 27 ಎಕರೆ ಜಮೀನಿನಲ್ಲಿ 5 ಎಕರೆ ಜಮೀನು ನನಗೆ ಸೇರಬೇಕೆಂದು ಶಾಸಕ ಕುಮಾರಸ್ವಾಮಿ ಹಾಗೂ ಲೋಕೇಶ್ ಮಧ್ಯೆ ವಾರ್ ನಡೆಯುತ್ತಿದ್ದು, ಈ ಸಂಬಂಧ ಶಾಸಕರು ಪತ್ರ ಬರೆದಿದ್ದಾರೆ.

ಏನಿದು ವಾರ್..?
ಜಮೀನು ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು ತೀರ್ಪು ನನ್ನಂತೆ ಬಂದಿದೆ. ಈ ಮಧ್ಯೆ ಲೋಕೇಶ್ ಅಪೀಲ್ ಹೋಗಿದ್ದು ವಿಚಾರಣೆ ನಡೆಯುತ್ತಿದೆ. ಆದ್ರೆ, ನನ್ನ ಏಳಿಗೆಯನ್ನ ಸಹಿಸಲಾಗದೆ ಈ ಹಿಂದೆ ಕೂಡ ನನ್ನ ಮೇಲೆ ಹಲ್ಲೆ ಮಾಡಿದ್ದ ರವಿ ಹಾಗೂ ಲಕ್ಷ್ಮಣರಿಂದ ಯಾವ ಸಮಯದಲ್ಲಾದ್ರೂ ಬೆದರಿಕೆ ಬರಬಹುದು. ಹೀಗಾಗಿ ನನ್ನ ಮನೆ ಹಾಗೂ ತೋಟಕ್ಕೆ ರಕ್ಷಣೆ ಕೋರಿ ಹೋಂ ಮಿನಿಸ್ಟರ್‍ಗೆ ಪತ್ರ ಬರೆದಿರುವುದಾಗಿ ಶಾಸಕರು ತಿಳಿಸಿದ್ದಾರೆ. ಇದನ್ನೂ ಓದಿ: ಅರಣ್ಯ ಅಧಿಕಾರಿಗಳ ಜೊತೆ ಗೂಂಡಾವರ್ತನೆ ತೋರಿದ ಮೂಡಿಗೆರೆ ಶಾಸಕ!


ಈ ಜಾಗ ನನ್ನದು, ನಿಮ್ಮದಲ್ಲ ಎಂದು ಶಾಸಕರು ತಮ್ಮ ಬೆಂಬಲಿಗರನ್ನ ಕಳುಹಿಸಿ ನಮ್ಮ ಮನೆಯನ್ನ ಕಿತ್ತಾಕಿ, ನಮ್ಮನ್ನ ಜಮೀನಿನಿಂದ ಹೊರಹಾಕಿದ್ರು. ಅವರ ಬೆಂಬಲಿಗರು ಮಾಡುವ ದಬ್ಬಾಳಿಕೆಯ ಒಂದು ಫೋಟೋ ಕೂಡ ತೆಗೆಯಲು ಬಿಡಲಿಲ್ಲ. ನಾನು ಬಾಳೂರು ಠಾಣೆಗೆ ದೂರು ನೀಡಿದ್ದೇನೆ. ಆದ್ರೆ ಇಲ್ಲಿವರೆಗೂ ಯಾರೂ ಕ್ರಮ ಕೈಗೊಂಡಿಲ್ಲ. ನನ್ನ ಪರ ಬರುವವರ ವಿರುದ್ಧವೂ ಕೇಸ್ ಹಾಕಿಸುತ್ತಾರೆ. ಅವರು ನಮ್ಮ ಮನೆಯನ್ನ ಧ್ವಂಸ ಮಾಡಿದ್ದು ಇಂದಿಗೂ ಎಲ್ಲವೂ ಹಾಗೇ ಇದೆ. ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ ಶಾಸಕರೇ ಈ ರೀತಿ ದೌರ್ಜನ್ಯ ಮಾಡೋದು ಎಷ್ಟು ಸರಿ. ಆದ್ರೆ ಓರ್ವ ಶಾಸಕ ಹೀಗೆ ಮತದಾರರಿಂದಲೇ ನಂಗೇ ಜೀವ ಬೆದರಿಕೆ ಇದೆ ಎಂದು ಗೃಹ ಸಚಿವರಿಗೆ ಪತ್ರ ಬರೆದಿರೋದು ಜನಸಾಮಾನ್ಯರೆದುರು ನಗೆಪಾಟಲಿಗೀಡಾಗಿರೋದ್ರಲ್ಲಿ ಅನುಮಾನವಿಲ್ಲ ಎಂದು ಲೋಕೇಶ್ ಹೇಳಿದ್ದಾರೆ.

ಒಟ್ಟಾರೆ, ಇತ್ತೀಚೆಗಷ್ಟೇ ಫುಲ್ ವೈಲೆಂಟಾಗಿ ಅಬ್ಬರಿಸಿದ್ದ ಶಾಸಕರು ಇದೀಗ ಸೈಲೆಂಟಾಗಿ ಗೃಹ ಸಚಿವರಿಂದ ರಕ್ಷಣೆ ಕೋರಿದ್ದಾರೆ. ಆದ್ರೆ ಅಂದು ಅವರಿಂದಲೇ ಗೆದ್ದ ಶಾಸಕರು ಇಂದು ಅವರಿಂದಲೇ ಭಯ ಎಂದು ಸರ್ಕಾರದ ರಕ್ಷಣೆ ಕೋರಿರೋದು ಮಾತ್ರ ವಿಪರ್ಯಾಸವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *