Monday, 18th November 2019

Recent News

ಮದ್ವೆಗೆ ಬರೋ ಅತಿಥಿಗಳಿಗೆ ಸ್ಪೆಷಲ್ ಗಿಫ್ಟ್ ನೀಡ್ತಾರೆ ಪ್ರಿಯಾಂಕ

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಹಾಗೂ ಅಮೆರಿಕ ಗಾಯಕ ನಿಕ್ ಜೋನ್ಸ್ ಅವರ ಮದುವೆ ಸಿದ್ಧತೆ ಜೋರಾಗಿದೆ. ಈ ತಾರಾ ಜೋಡಿಯ ಮದುವೆಗೆ ಬರುವ ಅತಿಥಿಗಳಿಗೆ ವಿಶೇಷ ಗಿಫ್ಟ್ ಸಿಗಲಿದೆ.

ಮದುವೆ ನಿಮಿತ್ತ ನಿಕ್ ಜೋನ್ಸ್ ಸಹೋದರ ಜೋ ಜೋನ್ಸ್ ಮತ್ತು ಆತನ ಗೆಳತಿ ಸೋಫಿ ಟರ್ನರ್ ಮುಂಬೈಗೆ ಬಂದಿದ್ದಾರೆ. ಈ ಇಬ್ಬರೂ ಸೇರಿ ವಿಶೇಷ ಉಡುಗೊರೆ ಆಯ್ಕೆ ಮಾಡಿದ್ದಾರಂತೆ. ಮದುವೆಗೆ ಆಗಮಿಸಲಿರುವ ಅತಿಥಿಗಳಿಗೆ ಬೆಳ್ಳಿ ನಾಣ್ಯ ನೀಡಲಾಗುತ್ತಿದ್ದು, ಇದನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ನಾಣ್ಯದ ಒಂದು ಬದಿಯಲ್ಲಿ ಇಂಗ್ಲಿಷ್ ವರ್ಣಮಾಲೆಯ ಎನ್‍ಪಿ ಎಂದು ಬರೆಯಲಾಗಿದೆ. ಮತ್ತೊಂದು ಮುಖದ ಮೇಲೆ ಲಕ್ಷ್ಮಿ ಹಾಗೂ ಗಣೇಶನ ಚಿತ್ರ ಬಿಡಿಸಲಾಗಿದೆ.

ಮುಂಬೈನ ಪ್ರಿಯಾಂಕ ಮನೆಯಲ್ಲಿ ಈಗಾಗಲೇ ಮದುವೆಯ ಸಂಭ್ರಮ ಮನೆ ಮಾಡಿದೆ. ಉಮೈದ್ ಭವನದಲ್ಲಿ ಹಿಂದೂ ಸಂಪ್ರದಾಯದಂತೆ ಇಂದಿನಿಂದ ಮದುವೆ ಕಾರ್ಯಕ್ರಮ ಆರಂಭವಾಗಲಿವೆ. ಹೀಗಾಗಿ ಮನೆ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡಿದ್ದು, ಸಂಭ್ರಮ ಮನೆ ಮಾಡಿದೆ. ಪ್ರಿಯಾಂಕ ನಿಕ್ ಜೋನ್ಸ್ ಡಿಸೆಂಬರ್ 2ರಂದು ಮದುವೆ ನಡೆಯಲಿದೆ.

ಇತ್ತೀಚೆಗೆ ಬಾಲಿವುಡ್ ಜೋಡಿ ದೀಪಿಕಾ, ರಣವೀರ್ ಇಟಲಿಯಲ್ಲಿ ಮದುವೆಯಾಗಿದ್ದರು. ಅವರ ಮದುವೆ ಸಂಭ್ರಮದಲ್ಲಿ ಭಾಗವಹಿಸಿದ ಆತ್ಮೀಯರಿಗೆ ದೀಪ್‍ವೀರ್ ಜೋಡಿ ಬೆಳ್ಳಿ ಲೇಪಿತ ಫೋಟೋ ಫ್ರೇಮ್‍ನಲ್ಲಿ ಇಬ್ಬರ ಫೋಟೋ ಹಾಕಿ ಉಡುಗೊರೆ ನೀಡಿದ್ದರು. ಈ ಉಡುಗೊರೆಯ ಫೋಟೋ ಕ್ಲಿಕ್ಕಿಸಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಖುಷಿ ಹಂಚಿಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published. Required fields are marked *