Connect with us

Cricket

ಐಪಿಎಲ್‍ನಲ್ಲಿ ಧೋನಿ ವೈಫಲ್ಯ – ಮಗಳು ಝೀವಾಗೆ ಅತ್ಯಾಚಾರ ಬೆದರಿಕೆ

Published

on

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಐಪಿಎಲ್-2020ಯಲ್ಲಿ ವಿಫಲವಾಗಿದ್ದಕ್ಕೆ ವ್ಯಕ್ತಿಯೋರ್ವ ಅವರ ಮಗಳು ಝೀವಾ ಮೇಲೆ ಅತ್ಯಾಚಾರ ಮಾಡುವ ಬೆದರಿಕೆ ಹಾಕಿದ್ದಾನೆ.

ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್‍ನಲ್ಲಿ ಧೋನಿ ನೇತೃತ್ವದ ತಂಡ ಆರಂಭದಲ್ಲೇ ಎಡವಿದೆ. ಟೂರ್ನಿಯ ಆರಂಭದ ಮೊದಲ ಪಂದ್ಯವನ್ನು ಗೆದ್ದರೂ ನಂತರ ಅದೇ ಲಯದಲ್ಲಿ ತಂಡವನ್ನು ತೆಗೆದುಕೊಂಡು ಹೋಗುವಲ್ಲಿ ಧೋನಿ ಎಡವಿದ್ದಾರೆ. ಹೀಗಾಗಿ ವ್ಯಕ್ತಿಯೋರ್ವ ಧೋನಿಯ ಐದು ವರ್ಷದ ಮಗಳನ್ನು ಅತ್ಯಾಚಾರ ಮಾಡುವುದಾಗಿ ಟ್ವಿಟ್ಟರಿನಲ್ಲಿ ಕಮೆಂಟ್ ಮಾಡಿದ್ದಾನೆ.

ಕಳೆದ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಹೀನಾಯವಾಗಿ ಸೋತಿತ್ತು. ಗೆಲುವಿನ ಹಾದಿಯಲ್ಲಿ ಇದ್ದ ಚೆನೈ ತಂಡ ದಿಢೀರ್ ಕುಸಿತದಿಂದ 10 ರನ್‍ಗಳ ಅಂತರದಲ್ಲಿ ಸೋಲನ್ನು ಒಪ್ಪಿಕೊಂಡಿತ್ತು. ಈ ನಂತರ ಟ್ವಿಟ್ಟರಿನಲ್ಲಿ ಕಮೆಂಟ್ ಮಾಡಿರುವ ವಿಜಯ್ ಎಂಬ ವ್ಯಕ್ತಿ ಧೋನಿ ಮಗಳನ್ನು ಅತ್ಯಾಚಾರ ಮಾಡುವುದಾಗಿ ಹೇಳಿದ್ದಾನೆ. ಜೊತೆಗೆ ಅಸಭ್ಯ ಪದಗಳನ್ನು ಬಳಸಿ ಐದು ವರ್ಷದ ಕಂದಮ್ಮನನ್ನು ನಿಂದಿಸಿದ್ದಾನೆ.

ಜೊತೆಗೆ ಟ್ವಿಟ್ಟರ್ ನಂತರ ಬೇರೆ ಬೇರೆ ಸಾಮಾಜಿಕ ಜಾಲತಾಣದಲ್ಲೂ ಕೂಡ ಧೋನಿ ಮಗಳು ಝೀವಾ ಅವರ ಹೆಸರಿನಲ್ಲಿ ಕಮೆಂಟ್‍ಗಳು ಬಂದಿವೆ. ಇಲ್ಲೂ ಕೂಡ ಝೀವಾಳಿಗೆ ಜೀವ ಬೆದರಿಕೆ ಮತ್ತು ಅತ್ಯಾಚಾರ ಬೆದರಿಕೆ ಹಾಕಿದ್ದಾರೆ. ಭಾರತಕ್ಕಾಗಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟ, ಬೆಸ್ಟ್ ನಾಯಕನಿಗೆ ಒಂದು ಟೂರ್ನಿಯಲ್ಲಿ ಕೆಟ್ಟ ಪ್ರದರ್ಶನ ನೀಡಿದಕ್ಕೆ ಈ ರೀತಿ ಮಾತನಾಡಬಾರದು ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪುಟ್ಟ ಮಗುವಿನ ವಿಚಾರ ಮಾತನಾಡಿರುವುದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.

ಚೆನ್ನೈ ಐಪಿಎಲ್-2020ಯಲ್ಲಿ 6 ಪಂದ್ಯಗಳನ್ನು ಆಡಿ ಕೇವಲ ಎರಡಲ್ಲಿ ಗೆದ್ದು ನಾಲ್ಕು ಪಂದ್ಯದಲ್ಲಿ ಸೋತು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಜೊತೆಗೆ ಧೋನಿಯವರು ಕೀಪಿಂಗ್‍ನಲ್ಲಿ ಮಿಂಚುತ್ತಿದ್ದರು ನಾಯಕನಾಗಿ ಮತ್ತು ಬ್ಯಾಟ್ಸ್ ಮ್ಯಾನ್ ಆಗಿ ವಿಫಲರಾಗಿದ್ದಾರೆ. ಬುಧವಾರದ ಪಂದ್ಯದಲ್ಲಿ ಕೋಲ್ಕತ್ತಾ ನೀಡಿದ 167 ರನ್‍ಗಳ ಸಾಧಾರಣ ಮೊತ್ತ ಚೇಸ್ ಮಾಡುವಲ್ಲಿ ಚೆನ್ನೈ ವಿಫಲವಾಗಿತ್ತು. ಇದರಿಂದ ಚೆನ್ನೈ ಅಭಿಮಾನಿಗಳಿಗೆ ತುಂಬ ನಿರಾಸೆಯುಂಟಾಗಿತ್ತು.

Click to comment

Leave a Reply

Your email address will not be published. Required fields are marked *