Sunday, 21st July 2019

6 ಭಾಷೆಯಲ್ಲಿ ಮಾತುಗಾರಿಕೆ – ಧೋನಿಯಿಂದ ಪುತ್ರಿಯ ವಿಶೇಷ ವಿಡಿಯೋ

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮಗಳ ವಿಶೇಷ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಧೋನಿ ಕ್ರಿಕೆಟ್‍ನಿಂದ ಸ್ವಲ್ಪ ಬಿಡುವು ಸಿಕ್ಕಾಗ ತಮ್ಮ ಮಗಳ ಜೀವಾ ಧೋನಿ ಜೊತೆ ಕಾಲ ಕಳೆದಿದ್ದಾರೆ. ಜೀವಾ ಜೊತೆ ಕಾಲ ಕಳೆದ ಆ ಸಮಯವನ್ನು ಧೋನಿ ವಿಡಿಯೋ ಮಾಡಿ ಅದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಡಿಯೋದಲ್ಲಿ ಜೀವಾ ಒಟ್ಟು 6 ಭಾಷೆಗಳಲ್ಲಿ ಮಾತನಾಡಿದ್ದಾಳೆ. ಧೋನಿ ಆರು ಭಾಷೆಗಳಲ್ಲಿ ಜೀವಾಳನ್ನು ಪ್ರಶ್ನೆ ಕೇಳಿದ್ದಾರೆ. ಜೀವಾ ಕೂಡ ಆರು ಭಾಷೆಯಲ್ಲೇ ತನ್ನ ತಂದೆಗೆ ಉತ್ತರಿಸಿದ್ದಾಳೆ. ಈ ವಿಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಧೋನಿ ಹಾಗೂ ಜೀವಾ ತಮಿಳು, ಬೆಂಗಾಲಿ, ಗುಜರಾತಿ, ಭೋಜ್‍ಪುರಿ, ಪಂಜಾಬಿ ಹಾಗೂ ಉರ್ದು ಭಾಷೆಯಲ್ಲಿ ಮಾತನಾಡಿದ್ದಾರೆ. ಜೀವಾ ಒಟ್ಟು 6 ಭಾಷೆ ಮಾತನಾಡಿದ್ದು ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by M S Dhoni (@mahi7781) on

Leave a Reply

Your email address will not be published. Required fields are marked *