Connect with us

Latest

ಮಿಥಾಲಿ ರಾಜ್ ಬಳಿಕ ಟ್ರೋಲ್‍ಗೊಳಗಾದ ಸಾಕ್ಷಿ ಧೋನಿ

Published

on

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಪತ್ನಿ ಸಾಕ್ಷಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಫೋಟೋ ನೋಡಿ ಅಭಿಮಾನಿಗಳು ಗರಂ ಆಗಿ ಟ್ರೋಲ್ ಮಾಡಿದ್ದಾರೆ.

ತಮ್ಮ ಸ್ನೇಹಿತೆ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಕ್ಷಿ ಧೋನಿ ಅವರು ಸಮಾರಂಭದಲ್ಲಿ ತೆಗೆದುಕೊಂಡಿದ್ದ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋ ಕಂಡ ಹಲವರು ಸಾಕ್ಷಿ ಧೋನಿ ಧರಿಸಿದ್ದ ಬಟ್ಟೆ ಭಾರತೀಯ ಸಂಸ್ಕೃತಿಗೆ ಸರಿಹೊಂದುವುದಿಲ್ಲ. ಈ ಫೋಟೋ ಡಿಲೀಟ್ ಮಾಡಿ. ಈ ಡ್ರೆಸ್ ನಿಮಗೆ ಸರಿಹೊಂದುವುದಿಲ್ಲ. ಅಲ್ಲದೇ ಸಾಕ್ಷಿ ಅವರಿಗೆ ಡ್ರೆಸ್ ಸೆನ್ಸ್ ಇಲ್ಲ ಕಾಲೆಳೆದಿದ್ದಾರೆ.

View this post on Instagram

❤️🙏🏻

A post shared by Sakshi Singh Dhoni (@sakshisingh_r) on

ಅಂದಹಾಗೇ ಸಾಕ್ಷಿ ಧೋನಿ ತಮ್ಮ ಗೆಳತಿ ರಾಜಕಾರಣಿ ಪ್ರಫುಲ್ ಪಟೇಲ್ ಪುತ್ರಿಯಾದ ಪೂರ್ಣಾ ಪಟೇಲ್ ಅವರ ಮದುವೆಯಲ್ಲಿ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಿಲ್ವರ್, ಪಿಂಕ್ ಬಣ್ಣದ ಗ್ಲಾಮರ್ ಲೆಹಂಗಾ ಧರಿಸಿದ್ದರು. ಆದರೆ ಈ ಫೋಟೋ ಕಂಡ ಕೆಲ ಅಭಿಮಾನಿಗಳು ಸಾಕ್ಷಿರನ್ನು ಟ್ರೋಲ್ ಮಾಡಿದ್ದಕ್ಕೆ ಖಡಕ್ ಆಗಿ ಪ್ರತ್ಯುತ್ತರ ನೀಡಿದ್ದು, ನಿಮ್ಮ ಡ್ರೆಸ್ ಉತ್ತಮವಾಗಿದೆ. ನಾವು ನಿಮ್ಮನ್ನು ಇಷ್ಟಪಡುತ್ತೇವೆ ಮತ್ತು ಗೌರವಿಸುತ್ತೇವೆ ಎಂದು ಕಾಮೆಂಟ್ ಮಾಡಿ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ತಮ್ಮ ಗೆಳತಿಯರೊಂದಿಗೆ ತೆಗೆದುಕೊಂಡಿದ್ದ ಸೆಲ್ಫಿ ಫೋಟೋವನ್ನು ಕಂಡು ಕೆಲ ಅಭಿಮಾನಿಗಳು ಗರಂ ಆಗಿದ್ದರು. ಈ ವೇಳೆಯೂ ಮಿಥಾಲಿ ಅವರ ಡ್ರೆಸ್ ಸೆನ್ಸ್ ಬಗ್ಗೆ ಹಲವರು ಕಾಮೆಂಟ್ ಮಾಡಿದ್ದರು.

View this post on Instagram

❤️❤️❤️❤️❤️

A post shared by Sakshi Singh Dhoni (@sakshisingh_r) on