Wednesday, 26th June 2019

Recent News

ಅಂಗವಿಕಲ ಅಭಿಮಾನಿಗೆ ಮರೆಯಲಾಗದ ಗಿಫ್ಟ್ ಕೊಟ್ರು ಧೋನಿ – ವೈರಲ್ ವಿಡಿಯೋ

ತಿರುವನಂತಪುರ: ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದು, ಧೋನಿ ತಮ್ಮ ಅಭಿಮಾನಿಗಳಿಗೆ ಅಷ್ಟೇ ಗೌರವ ನೀಡುತ್ತಾರೆ ಎಂಬುದಕ್ಕೆ ತಿರುವನಂತಪುರಂ ಕ್ರೀಡಾಂಗಣದ ಹೊರಗೆ ನಡೆದ ಘಟನೆ ಸಾಕ್ಷಿಯಾಗಿದೆ.

ವಿಂಡೀಸ್ ವಿರುದ್ಧ ಗುರುವಾರ ಮುಕ್ತಾಯಗೊಂಡ ಏಕದಿನ ಕ್ರಿಕೆಟ್ ಪಂದ್ಯದ ಬಳಿಕ ಧೋನಿ ಅಂಗವಿಕಲ ಅಭಿಮಾನಿಯನ್ನು ಕಾಣಲು ಸ್ವತಃ ಕ್ರೀಡಾಂಗಣದ ಹೊರಕ್ಕೆ ತೆರಳಿ ಅಚ್ಚರಿ ಮೂಡಿಸಿದ್ದಾರೆ. ಪಂದ್ಯದ ಬಳಿಕ ಟೀಂ ಇಂಡಿಯಾ ಆಟಗಾರರು ತೆರಳಲು ಬಸ್ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಅಭಿಮಾನಿಯೊಬ್ಬರು ತಮಗಾಗಿ ಕ್ರೀಡಾಂಗಣದ ಹೊರ ಭಾಗದಲ್ಲಿ ಕಾಯುತ್ತಿದ್ದ ವಿಷಯ ತಿಳಿದ ಧೋನಿ ಅವರ ಬಳಿ ತೆರಳಿದ್ದರು. ವೀಲ್ ಚೇರ್‍ನಲ್ಲಿ ಕುಳಿತಿದ್ದ ಪುಟ್ಟ ಅಭಿಮಾನಿ ಧೋನಿ ಆಗಮನವನ್ನು ಗಮನಿಸಿ ಅಚ್ಚರಿಗೊಂಡಿದ್ದರು. ಸದ್ಯ ಈ ವಿಡಿಯೋವನ್ನು ಅಭಿಮಾನಿಯೊಬ್ಬರು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದು ಸಖತ್ ವೈರಲ್ ಆಗಿದೆ.

ಧೋನಿ ತಮ್ಮ ಬಳಿ ಆಗಮಿಸುವುದನ್ನು ಕಂಡ ಪುಟ್ಟ ಅಭಿಮಾನಿ ಸಂತಸಗೊಂಡಿದ್ದು, ಧೋನಿ ಅವರ ಕೈಗೆ ಮುತ್ತು ನೀಡಲು ಕೇಳುತ್ತಾರೆ. ಕ್ಷಣ ಮಾತ್ರ ಏನೂ ಯೋಚಿಸಿದ ಧೋನಿ ಮುತ್ತು ಪಡೆಯುತ್ತಾರೆ. ಬಳಿಕ ಅಭಿಮಾನಿಯೊಂದಿಗೆ ಕೆಲ ಸಮಯ ಮಾತನಾಡಿದ ಧೋನಿ ಫೋಟೋಗೆ ಫೋಸ್ ನೀಡಿ, ಆಟೋಗ್ರಾಪ್ ನೀಡಿ ತೆರಳಿದ್ದಾರೆ. ಅಭಿಮಾನಿಗೆ ಮರೆಯಲಾದ ಗಿಫ್ಟ್ ಕೊಟ್ಟ ಧೋನಿಯ ನಡೆ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಈ ವರ್ಷದ ಅಂತಿಮ ಕ್ರಿಕೆಟ್ ಪಂದ್ಯವನ್ನು ಆಡಿದ್ದು, ಮುಂದಿನ ವಿಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಅವರನ್ನು ಕೈಬಿಟ್ಟ ಕಾರಣ ಧೋನಿ ಅವರನ್ನ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ. ಮುಂದಿನ ವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಏಕದಿನ ಟೂರ್ನಿಯಲ್ಲಿ ಧೋನಿ ಆಡಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Best Video You'll See on Internet Today! MS Dhoni making his fan happy.Video Courtesy : The Raviz

MS Dhoni Fans Officialさんの投稿 2018年10月31日水曜日

Leave a Reply

Your email address will not be published. Required fields are marked *