Connect with us

Districts

ಪ್ರಕಾಶ್ ರೈಗೆ ಕಾಸು ಮುಖ್ಯವಾದ್ರೆ ನಮ್ಗೆ ಕಾವೇರಿ ಮುಖ್ಯ- ಸಂಸದ ಪ್ರತಾಪ್ ಸಿಂಹ ತಿರುಗೇಟು

Published

on

ಮೈಸೂರು: ತಮಿಳು ಚಿತ್ರ ಕಾಳ ಬಿಡುಗಡೆ ವಿಚಾರದಲ್ಲಿ ನಟ ಪ್ರಕಾಶ್ ರೈ ಟ್ವೀಟ್ ಮಾಡಿರುವುದಕ್ಕೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್ ರೈಗೆ ಕಾವೇರಿಗಿಂತ ಕಾಸು ಮುಖ್ಯ. ನಮಗೆಲ್ಲ ಕಾಸಿಗಿಂತ ಕಾವೇರಿ ಮುಖ್ಯ ಅಂತ ಅಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪ್ರಕಾಶ್ ರೈ ಕರ್ನಾಟಕದ ಪಾಲಿಗೆ ನಿಜವಾಗಿಯೂ ಖಳನಾಯಕನಾಗಿದ್ದಾರೆ. ಈ ಹಿಂದೆ ಸಿನಿಮಾ ಕಾರ್ಯಕ್ರಮದಲ್ಲಿ ಕಾವೇರಿ ವಿಚಾರ ಚರ್ಚೆ ಮಾಡೋಲ್ಲ ಎಂದಿದ್ದರು. ಈಗ ಸಿನಿಮಾಗು ಕಾವೇರಿಗೂ ಏನು ಸಂಬಂಧ ಎನ್ನುತ್ತಿದ್ದಾರೆ. ಆ ಮೂಲಕ ಕರ್ನಾಟಕ ಹಾಗೂ ಕಾವೇರಿಯನ್ನ ಪದೇ ಪದೇ ಕೆಣಕುತ್ತಿದ್ದಾರೆ. ರೈಗೆ ಕಾಸೇ ಮುಖ್ಯವಾಗಿದೆ. ಅದಕ್ಕಾಗಿ ರಜಿನಿಕಾಂತ್ ಚಿತ್ರದ ಪರ ಟ್ವೀಟ್ ಮಾಡಿದ್ದಾರೆ. ಕಾವೇರಿ ವಿಚಾರದಲ್ಲಿ ರಜಿನಿಕಾಂತ್ ಅಷ್ಟೇ ಅಲ್ಲ ಯಾರೇ ಲಘುವಾಗಿ ಮಾತನಾಡಿದ್ರೂ, ಅದನ್ನ ಖಂಡಿಸುತ್ತೇವೆ ಅಂದ್ರು. ಇದನ್ನೂ ಓದಿ: ಕಾಳನಿಗೂ, ಕಾವೇರಿಗೂ ಎಲ್ಲಿಯ ಎತ್ತಣದ ಸಂಬಂಧ? ಪ್ರಕಾಶ್ ರೈ ಜಸ್ಟ್ ಆಸ್ಕಿಂಗ್!

ಕನ್ನಡಪರ ಹೋರಾಟಗಾರರು ಸ್ವಾಭಾವಿಕವಾಗಿ ರಜಿನಿಕಾಂತ್ ಹೇಳಿಕೆಯನ್ನ ವಿರೋಧಿಸಿದ್ದಾರೆ. ಅದಕ್ಕೆ ರಜಿನಿಕಾಂತ್ ಸಲಹೆ ನೀಡಿ ಆಗಿರುವ ಸಮಸ್ಯೆಗೆ ಪರಿಹಾರ ಹುಡಕಬೇಕಿತ್ತು. ಆದ್ರೆ ಪ್ರಕಾಶ್ ಮತ್ತೆ ವಿವಾದಾತ್ಮಕವಾಗಿ ಟ್ವಿಟ್ ಮಾಡಿದ್ದಾರೆ. ಆ ಮೂಲಕ ಮತ್ತೆ ನಿಜಜೀವನದಲ್ಲಿ ಅವರು ಖಳನಾಯಕನಾಗಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ರೈ ಗೆ ಕಾವೇರಿ ಜೊತೆ ಭಾವನಾತ್ಮಕ ಸಂಬಂಧ ಇಲ್ಲದಿರಬಹುದು. ಆದ್ರೆ ನಮಗೆ ಕಾವೇರಿ ಜೊತೆ ಭಾವನಾತ್ಮಕ ಸಂಬಂಧ ಇದೆ. ಹೀಗಾಗಿ ಪ್ರಕಾಶ್ ರೈ ಟ್ವೀಟನ್ನು ಖಂಡಿಸುವುದಾಗಿ ಅವರು ತಿಳಿಸಿದ್ರು.