Advertisements

ಮತಾಂತರವೇ ಮಾಡಲ್ಲ ಅನ್ನೋ ಬಿಷಪ್‍ಗಳು ಯಾಕೆ ಸಿಎಂ ಬಳಿ ಓಡಿ ಬಂದಿದ್ದಾರೆ: ಪ್ರತಾಪ್ ಸಿಂಹ ಪ್ರಶ್ನೆ

ಮೈಸೂರು: ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ತರಲು ಮುಂದಾಗಿರುವುದನ್ನು ಬಿಷಪ್ ಗಳು ವಿರೋಧಿಸಿರುವುದನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ತೀವ್ರವಾಗಿ ಖಂಡಿಸಿದ್ದಾರೆ.

Advertisements

ಕಾಳ ಸಂತೆಯಲ್ಲಿ ಕಳ್ಳತನದ ಮಾಲು ಸೆಲ್ ಆಗುತ್ತೆ ಅದೇ ರೀತಿ ಕೆಲ ಕ್ರಿಶ್ಚಿಯನ್ನರು ಕೇರಿ ಕಾಲೋನಿಗೆ ಹೋಗಿ ಗಿಫ್ಟ್ ಕೊಟ್ಟು ಜನರನ್ನು ಮರಳು ಮಾಡಿ ಮತಾಂತರ ಮಾಡುತ್ತಿದ್ದಾರೆ. ಕೇರಿ, ಕಾಲೋನಿಗೆ ಹೋಗಿ ಚಿಕಿತ್ಸೆ ಕೊಡಿ, ಅದು ಬಿಟ್ಟು ಮ್ಯಾಜಿಕ್ ಮಾಡಬೇಡಿ. ಚಿಕಿತ್ಸೆ ಕೊಡಬೇಕು ಅಂದ್ರೆ ಮೊದಲು ಏಸು ಸ್ವಾಮಿಗೆ ಪೂಜೆ ಮಾಡಿ ಅಂತಾರೆ. ಬಳಿಕ ಚಿಕಿತ್ಸೆ ಕೊಟ್ಟು ಏಸು ಸ್ವಾಮಿಯೇ ನಿಮ್ಮನ್ನು ಕಾಪಾಡಿದ್ದು ಅಂತೀರಾ. ಹೀಗೆ ಮರಳು ಮಾಡಿ ಮತಾಂತರ ಮಾಡುವುದು ನಡೆದಿದೆ. ಇದು ಸರಿಯಾದ ಕ್ರಮ ಅಲ್ಲ. ಇದೆಲ್ಲವೂ ನಾವು ಕೂಡ ನೋಡಿದ್ದೇವೆ ಎಂದರು.

Advertisements

ಗೂಳಿಹಟ್ಟಿ ಶೇಖರ್ ಒಬ್ಬ ಜನಪ್ರತಿನಿಧಿ. ಅವರೇ ತಮ್ಮ ತಾಯಿಯೇ ಮತಾಂತರಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ. ಜನರನ್ನ ಮೋಸ ಮಾಡಿ, ಮರಳು ಮಾಡಿ ಮತಾಂತರ ಮಾಡೋದು ತಪ್ಪು. ನಾನು ಕೂಡ ಮತಾಂತರದ ವಿರೋಧಿ. ನಾನು ಪತ್ರಕರ್ತನಾಗಿದ್ದ ವೇಳೆಯೇ ಈ ಬಗ್ಗೆ ಬರೆದಿದ್ದೆ. ಮಸೂದೆ ಬರುವುದರಿಂದ ಮತಾಂತರ ಮಾಡುತ್ತಿದ್ದವರಿಗೆ ಆತಂಕ ಇರುತ್ತೆ. ಆದರೆ ಮತಾಂತರವೇ ಮಾಡುತ್ತಿಲ್ಲ ಎನ್ನುವ ಬಿಷಪ್ ಗಳು ಯಾಕೆ ಬಾಲ ಸುಟ್ಟ ಬೆಂಕಿನಂತೆ ಸಿಎಂ ಬಳಿಗೆ ಮಸೂದೆ ಬೇಡ ಎಂದು ಓಡಿ ಬಂದಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿವಾದ – ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ಮದರ್ ತೆರೇಸಾ ಅವರನ್ನು ಸಂತ ಪದವಿಗೆ ಹೋಗುವ ಮೊದಲು ಮ್ಯಾಜಿಕ್ ಮಾಡಲು ಹೇಳಲಾಗಿತ್ತು. ನಮ್ಮಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ನಾವು ಬೆಲೆ ಕೊಡುತ್ತೇವೆ. ಆದರೆ ಮದರ್ ತೆರೇಸಾ ಅವರಿಂದ ಮ್ಯಾಜಿಕ್ ಮಾಡಿ ಸಂತರನ್ನಾಗಿ ಮಾಡಲಾಯ್ತು. ಇದು ‘ಮಂದಿನಾ ಮಂಗ್ಯಾ’ ಮಾಡುವ ತಂತ್ರ. ಈಗಲೂ ಅದನ್ನೇ ಮತಾಂತರಕ್ಕೆ ಬಳಸಲಾಗುತ್ತಿದೆ. ಹಿಂದೂ ಧರ್ಮ ಶ್ರೇಷ್ಠತೆಯಲ್ಲಿ ನಂಬಿಕೆ ಇಟ್ಟಿದೆ. ಕ್ರೈಸ್ತರು ಮತ್ತು ಮುಸ್ಲಿಮರು ಧರ್ಮದ ಸಂಖ್ಯೆಯ ಹೆಚ್ಚಳವನ್ನೆ ಶ್ರೇಷ್ಠತೆ ಅಂದುಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಇಂತಹ ಕೆಟ್ಟ ಸರ್ಕಾರವನ್ನು ರಾಜಕೀಯ ಜೀವನದಲ್ಲಿ ನೋಡಿಲ್ಲ: ಸಿದ್ದರಾಮಯ್ಯ

Advertisements

Advertisements
Exit mobile version