Connect with us

Latest

ಸಂಸದ ಅನುಭವ್ ಮೊಹಂತಿ ವಿರುದ್ಧ ದೂರು ದಾಖಲಿಸಿದ ಪತ್ನಿ

Published

on

-ಹಲ್ಲೆ, ಕಿರುಕುಳ, ವ್ಯಭಿಚಾರದ ಆರೋಪ

ಭುವನೇಶ್ವರ: ನಟ ಹಾಗೂ ಬಿಜೆಡಿ ಸಂಸದರಾಗಿರುವ ಅನುಭವ್ ಮೊಹಂತಿ ವಿರುದ್ಧ ಅವರ ಪತ್ನಿ, ನಟಿ ವರ್ಷಾ ಪ್ರಿಯದರ್ಶಿನಿ ಕಿರುಕುಳದ ಆರೋಪ ಮಾಡಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೌಟುಂಬಿಕ ಹಿಂಸಾಚಾರ ಆರೋಪದಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅನುಭವ್ ಮೊಹಂತಿ ವಿರುದ್ಧ 2005ರ ಮಹಿಳಾ ಸಂರಕ್ಷಣಾ ಕಾಯ್ದೆ ಸೆಕ್ಷನ್ 12ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವರ್ಷಾ ಪ್ರಿಯದರ್ಶಿನಿ ಹಲ್ಲೆ ಮತ್ತು ಕಿರುಕುಳದ ಆರೋಪ ಮಾಡಿದ್ದು, ಪ್ರಕರಣದ ವಿಚಾರಣೆ ಸೆಪ್ಟೆಂಬರ್ 7ರಂದು ನಡೆಯಲಿದೆ. ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಅನುಭವ್ ಮೊಹಂತಿ, ನನಗೆ ಯಾವುದೇ ನೋಟಿಸ್ ದೊರೆತಿಲ್ಲ. ಒಂದು ವೇಳೆ ನೋಟಿಸ್ ಸಿಕ್ಕರೆ ನಿಮಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಇತ್ತ ವರ್ಷಾ ಪ್ರಿಯದರ್ಶಿನಿ ಮಾಧ್ಯಮಗಳ ಜೊತೆ ಮಾತನಾಡಲು ಹಿಂದೇಟು ಹಾಕಿದ್ದಾರೆ. ದೂರಿನಲ್ಲಿ ಪತಿ ಬೆಡ್‍ರೂಮಿನಲ್ಲಿ ಸ್ನೇಹಿತರ ಜೊತೆ ಮದ್ಯ ಸೇವನೆ ಮಾಡ್ತಾರೆ. ವ್ಯಭಿಚಾರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಪತಿ ತಮಗೆ ಪತಿ ತಿಂಗಳು ಮನೆ ಬಾಡಿಗೆ 20 ಸಾವಿರ ರೂ. ಮತ್ತು ಜೀವನ ನಿರ್ವಹಣೆಗೆ ಮಾಸಿಕ 50 ಸಾವಿರ ನೀಡಬೇಕೆಂದು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡಿದ್ದಾರೆ. 2014ರಲ್ಲಿ ಅನುಭವ್ ಮತ್ತು ವರ್ಷಾ ಮದುವೆ ಆಗಿದ್ದರು.

Click to comment

Leave a Reply

Your email address will not be published. Required fields are marked *