ಮದುವೆಗೂ ಮುನ್ನವೇ ವರನ ಜೊತೆಗಿರುವ ಫೋಟೋ ಶೇರ್ ಮಾಡಿದ ಮೌನಿ ರಾಯ್

Advertisements

ಮುಂಬೈ: ಹಿಂದಿ ಕಿರುತೆರೆಯ ನಾಗಿಣಿ ಧಾರಾವಾಹಿ ಖ್ಯಾತಿಯ ನಟಿ ಮೌನಿ ರಾಯ್ ವರ ಸೂರಜ್ ನಂಬಿಯಾರ್ ಅವರೊಂದಿಗೆ ಮೊದಲ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Advertisements

ಗೋವಾದಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಮೌನಿರಾಯ್ ಅವರು ಮದುವೆಗೆ ಕೆಲವು ಗಂಟೆಗಳು ಇರುವ ಹೊತ್ತಿನಲ್ಲಿಯೇ ಸೂರಜ್ ನಂಬಿಯಾರ್ ಅವರೊಂದಿಗಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸೂರಜ್ ನಂಬಿಯಾರ್ ಬಿಳಿ ಬಣ್ಣದ ಕುರ್ತಾ ಧರಿಸಿದ್ದರೆ, ಮೌನಿರಾಯ್ ಕೆಂಪು ಬಣ್ಣದ ಸೂಟ್ ಜೊತೆಗೆ ದುಪ್ಪಟ್ಟಾ ತೊಟ್ಟು ಮಿಂಚಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯುತ್ತಿದೆ ಮೌನಿ ರಾಯ್ ಅರಿಶಿನ ಶಾಸ್ತ್ರ

Advertisements

ಮೌನಿ ರಾಯ್ ಹಾಗೂ ಸೂರಜ್ ಇಂದು ತಮ್ಮ ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಮಲಯಾಳಿ ಹಾಗೂ ಬೆಂಗಾಲಿ ಸಂಪ್ರದಾಯದಂತೆ ವಿವಾಹವಾಗಲಿದ್ದಾರೆ. ಸದ್ಯ ಈ ಮುದ್ದಾದ ಜೋಡಿಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ಮೌನಿರಾಯ್ ಬ್ಯಾಚುಲರ್ ಪಾರ್ಟಿ

Advertisements

ಬುಧವಾರ ಮೌನಿರಾಯ್ ಅದ್ದೂರಿಯಾಗಿ ಹಳದಿ ಮತ್ತು ಮೆಹಂದಿ ಶಾಸ್ತ್ರ ಮಾಡಿಕೊಂಡಿದ್ದು, ಆ ಫೋಟೋಗಳನ್ನು ಜಿಯಾ ಮುಸ್ತಫಾ ಮತ್ತು ಓಂಕಾರ್ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.

Advertisements
Exit mobile version