Connect with us

Cinema

ಬ್ಲಾಕ್ ಕಲರ್ ಡ್ರೆಸ್ ತೊಟ್ಟು ಹಾಟ್ ಪೋಸ್ ಕೊಟ್ಟ ಕೆಜಿಎಫ್ ನಟಿ

Published

on

Share this

ಮುಂಬೈ: ಬಾಲಿವುಡ್ ನಟಿ ಮೌನಿ ರಾಯ್ ಹೊಸ ಉಡುಪೊಂದನ್ನು ತೊಟ್ಟು ಫೋಟೋಗೆ ಹಾಟ್ ಆಗಿ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಬಾಲಿವುಡ್‍ನ ಕೆಜಿಎಫ್ ಐಟಂ ಸಾಂಗ್‍ನಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಹೆಜ್ಜೆ ಹಾಕಿದ್ದ ಮೌನಿ ರಾಯ್, ತಮ್ಮ ಫೇವರೆಟ್ ಡ್ರೆಸ್‍ವೊಂದನ್ನು ತೊಟ್ಟು, ಫೋಟೋಗೆ ಸಖತ್ ಹಾಟ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಮೌನಿ ರಾಯ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

 

View this post on Instagram

 

A post shared by mon (@imouniroy)

ಈ ಫೋಟೋವನ್ನು ಮೌನಿ ರಾಯ್ ದುಬೈನಲ್ಲಿ ಕ್ಲಿಕ್ಕಿಸಿಕೊಂಡಿದ್ದು, ಕಪ್ಪು ವೆಲ್ವೆಟ್ ಮಿನಿ ಡ್ರೆಸ್ ಧರಿಸಿದ್ದಾರೆ. ಫುಲ್ ಹಾರ್ಮ್, ಎಂಬ್ರಾಯ್ಡರಿ ಸಿಕ್ವಿನ್ಸ್ ಹಾಗೂ ಮೆಥಲಿಕ್ ಥ್ರೆಡ್ ಎಂಬ್ರಾಯ್ಡರಿಯಿಂದ ಈ ಡ್ರೆಸ್‍ನನ್ನು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಆ ಉಡುಪಿಗೆ ಸೂಟ್ ಆಗುವಂತಹ ಸ್ಟ್ರೇಟ್ ಪಿನ್ ಹಾಕಿ ಫ್ರೀ ಹೇರ್ ಬಿಟ್ಟಿದ್ದು, ಐ-ಮೇಕಪ್ ಜೊತೆಗೆ ಅದಕ್ಕೆ ಮ್ಯಾಚ್ ಆಗುವ ಲಿಪ್‍ಸ್ಟಿಕ್‍ನನ್ನು ಹಾಕಿಕೊಂಡಿದ್ದಾರೆ.

 

View this post on Instagram

 

A post shared by mon (@imouniroy)

ಫೋಟೋ ಜೊತೆಗೆ ಈ ಡ್ರೆಸ್ ಧರಿಸಿ ಎಂದಿಗೂ ನಾನು ಹೊರಗೆ ಬರುವುದಿಲ್ಲ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಮೌನಿರಾಯ್‍ರವರು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಬಾಲಿವುಡ್ ರಿಮೇಕ್‍ನ ‘ಗಲಿ ಗಲಿ ಮೇ’ ಎಂಬ ಐಟಂ ಸಾಂಗ್‍ನಲ್ಲಿ ನೃತ್ಯ ಮಾಡಿದ್ದಾರೆ.

 

View this post on Instagram

 

A post shared by mon (@imouniroy)

Click to comment

Leave a Reply

Your email address will not be published. Required fields are marked *

Advertisement