Connect with us

Cinema

ಮಾತೃತ್ವದ ಪುಟ್ಟ ಸಂತೋಷ, ಕೆಲವು ರಹಸ್ಯ ಹಂಚಿಕೊಳ್ಳುತ್ತೇನೆ: ಮೇಘನಾ ರಾಜ್

Published

on

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನರಾಜ್ ಜ್ಯೂನಿಯರ್ ಚಿರುವಿನೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡು ತಾಯ್ತನದಲ್ಲಿ ಅವರಿಗೆ ಸಿಗುತ್ತಿರುವ ಸಂತೋಷವನ್ನು 2 ಸಾಲಿನಲ್ಲಿ ಬರೆದುಕೊಂಡಿದ್ದಾರೆ.

ಪ್ರತಿದಿನ ಭಾನುವಾರದಂತೆ ಕಾಣುತ್ತದೆ ಮತ್ತು ಪ್ರತಿ ರಾತ್ರಿ ಶನಿವಾರ ರಾತ್ರಿಯಂತೆ ತೋರುತ್ತದೆ. ಮಾತೃತ್ವದ ಪುಟ್ಟ ಸಂತೋಷ ಹಾಗೂ ಕೆಲವು ರಹಸ್ಯಗಳನ್ನು ಹಂಚಿಕೊಳ್ಳುತ್ತೇವೆ ಎಂದು ಬರೆದುಕೊಂಡು ಮುದ್ದಾದ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

 

ತಾಯಿ ಮತ್ತು ಮಗುವನ್ನು ಒಂದೇ ಫ್ರೇಮ್‍ನಲ್ಲಿ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮೇಘನಾ ರಾಜ್ ಅವರ ಮುದ್ದು ಮಗನ ಫೋಟೋ ನೋಡಿದ ನೆಟ್ಟಿಗರು ಜ್ಯೂನಿಯರ್ ಎಂದು ಕಮೆಂಟ್ ಮಾಡುವ ಮೂಲಕವಾಗಿ ಚಿರುವನ್ನು ನೆನೆಸಿಕೊಂಡಿದ್ದಾರೆ.

 

View this post on Instagram

 

A post shared by Meghana Raj Sarja (@megsraj)

ಈ ಹಿಂದೆ ಮೇಘನಾ ಚಿರಂಜೀವಿ ಸರ್ಜಾ ಅಭಿನಯದ ರಾಜಮಾತಾರ್ಂಡ ಸಿನಿಮಾದ ಟ್ರೈಲರನ್ನು ಜ್ಯೂನಿಯರ್ ಚಿರು ಬಿಡುಗಡೆ ಮಾಡಿರುವ ವೀಡಿಯೋವನ್ನು ಹಂಚಿಕೊಂಡಿದ್ದರು. ಈ ಸಿನಿಮಾಕ್ಕೆ ಚಿರು ಸಹೋದರ ಧ್ರುವ ಸರ್ಜಾ ವಾಯ್ಸ್ ಡಬ್ ಮಾಡಲಿದ್ದಾರೆ. ರಾಜಮಾತಾರ್ಂಡ ಸಿನಿಮಾದ ಟ್ರೈಲರ್‍ಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.

Click to comment

Leave a Reply

Your email address will not be published. Required fields are marked *